ಹಸಿರುವಲಯದ ಜಿಲ್ಲೆಗಳಲ್ಲಿ ಮೇ 7ರಿಂದ ಡಿಎಲ್, ಎಲ್‌ಎಲ್ ಪರೀಕ್ಷೆ
ಬೆಂಗಳೂರು: ಹಸಿರು ವಲಯದ 14 ಜಿಲ್ಲೆಗಳಲ್ಲಿ ಮೇ 7ರಿಂದ ಚಾಲನಾ ಪರವಾನಗಿ (ಡಿ.ಎಲ್) ಹಾಗೂ ಕಲಿಕಾ ಪರವಾನಗಿ (ಎಲ್.ಎಲ್) ಪರೀಕ್ಷೆಗಳು ನಡೆಯಲಿದ್ದು, ಪ್ರತಿದಿನ ಶೇ 50 ಮಂದಿಗೆ ಮಾತ್ರ ಪರೀಕ್ಷೆಗೆ ಅವಕಾಶ ನೀಡಲಾಗಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ. ಡಿ.ಎಲ್ ಹಾಗೂ ಎಲ್.ಎಲ್ ಪರೀಕ್ಷೆ ನಡೆಯುವ ದಿನಾಂಕ ಹಾಗೂ ವಿವರಗಳನ್ನು ಆಭ್ಯರ್ಥಿಗಳ ಮೊಬೈಲ್‍ಗೆ ರವಾನಿಸಲಾಗಿದೆ. ಆನ್‍ಲೈನ್‌ನಲ್ಲಿ ಈಗಾಗಲೇ ನೋಂದಾಯಿಸಿ, ಪರೀಕ್ಷೆಗೆ ಕಾಯುತ್ತಿರುವ ಅಭ್ಯರ್ಥಿಗಳಿಗೆ ನಿಗದಿತ ದಿನಾಂಕದಂದು ಪರೀಕ್ಷೆಗಳು ನಡೆಯಲಿವೆ. ಸಾರಿಗೆ ಕಚೇರಿಗಳಲ್ಲಿ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, […]
ಮಂಗಳೂರು: ಅರಣ್ಯ ಇಲಾಖೆಯ ಬೇಜವಾಬ್ದಾರಿಗೆ ಪ್ರಾಣತೆತ್ತ ಕಾಡುಕೋಣ:
ಮಂಗಳೂರು: ಮಂಗಳವಾರ ಬೆಳಿಗ್ಗೆ ಮಂಗಳೂರಿನ ನಗರಭಾಗದಲ್ಲಿ ಕಂಡುಬಂದಿದ್ದ ಕಾಡುಕೋಣ ಸಾವನ್ನಪ್ಪಿದೆ. ಕಾಡುಕೋಣವನ್ನು ಹಿಡಿಯಲು ಹಾಕಿರುವ ಅರಿವಳಿಕೆ ಮದ್ದು ಓವರ್ ಡೋಸ್ ಆಗಿ ಕಾಡುಕೋಣ ಸಾವನ್ನಪ್ಪಿದೆ. ಮಂಗಳೂರು ನಗರದೊಳಗೆ ಇಂದು ಬೆಳಗ್ಗೆ ಆ ಕಾಡುಕೋಣ ಆಗಮಿಸಿತ್ತು. ಅನಂತರ 2 ಗಂಟೆ ಕಾರ್ಯಾಚರಣೆ ಮಾಡಿ ಕಾಡುಕೋಣ ಅರಣ್ಯ ಇಲಾಖೆ ಸಿಬಂದಿ ಸೆರೆಹಿಡಿದಿದ್ದರು. ಈ ವೇಳೆ ಎರಡು ಬಾರಿ ಅರಿವಳಿಕೆ ಚುಚ್ಚುಮದ್ದು ನೀಡಲಾಗಿತ್ತು. ಆದರೆ ಅರಿವಳಿಕೆ ಮದ್ದು ಓವರ್ ಡೋಸ್ ಆಗಿ ಕಾಡುಕೋಣ ದಾರುಣ ಸಾವನ್ನಪಿದೆ. ಅರಣ್ಯ ಇಲಾಖೆ ಸಿಬ್ಬಂದಿ ಬೇಜವಾಬ್ದಾರಿಗೆ […]
ಡಬ್ಬಲ್ ಶರ್ಟ್ ಹಾಕಿಕೊಂಡು ಓಡಾಡುವ ಆಟೋ ಡ್ರೈವರ್ ಗಳಿಗೆ ಬೀಳಲಿದೆ ದಂಡದ ಬರೆ.!
ಉಡುಪಿ: ಆಟೋ ಚಾಲಕರು ಒಳಗೊಂದು ಶರ್ಟ್ ಹಾಕಿ, ಹೊರಗೆ ಖಾಕಿ ಶರ್ಟ್ ಓಪನ್ ಬಿಟ್ಟುಕೊಳ್ಳುವುದು ಒಂದು ಟ್ರೆಂಡ್ ಆಗಿತ್ತು. ಇದೀಗ ಉಡುಪಿಯಲ್ಲಿ ಆಟೋ ಚಾಲಕರಿಗೆ ಇದೇ ಟ್ರೆಂಡ್ ದಂಡ ಕಟ್ಟಲು ಆಹ್ವಾನ ನೀಡುತ್ತಿದೆ. ಸಿನಿಮಾ ಹಿರೋಗಳ ಸ್ಟೈಲ್ ನಲ್ಲಿ ರೋಡ್ ಗೆ ಇಳಿಯುತ್ತಿದ್ದ ಆಟೋ ಚಾಲಕರಿಗೆ ಉಡುಪಿಯಲ್ಲಿ ಇನ್ಮುಂದೆ ಪೊಲೀಸರಿಂದ ದಂಡದ ಬರೆ ಬೀಳುತ್ತೆ. ಉಡುಪಿಯ ಪ್ರಮುಖ ಜಂಕ್ಷನ್‍ಗಳಲ್ಲಿ ಪೊಲೀಸರು ಡಬ್ಬಲ್ ಶರ್ಟ್ ಹಾಕುವ ಆಟೋ ಡ್ರೈವರ್‌ಗಳಿಗೆ ಕಾನೂನಿನ ಪಾಠ ಮಾಡುತ್ತಿದ್ದಾರೆ. ಮೋಟಾರು ವಾಹನ ಕಾಯ್ದೆಯ ಪ್ರಕಾರ […]
ಮದ್ಯ ಸಿಕ್ಕ ಜೋಶ್ ನಲ್ಲಿ ಬಾಟಲಿಗೆ ಪೂಜೆ ಮಾಡಿದ ವ್ಯಕ್ತಿಯ ವಿಡಿಯೋ ವೈರಲ್
ಕುಂದಾಪುರ: ಹಲವು ದಿನಗಳ ಬಳಿಕ ಮದ್ಯ ಸಿಕ್ಕ ಖುಷಿಯಲ್ಲಿ ವ್ಯಕ್ತಿಯೋರ್ವರು ಮನೆ ಎದುರಿನ ಜಗುಲಿಯಲ್ಲಿ ಮದ್ಯದ ಬಾಟಲಿಗಳನ್ನಿಟ್ಟು ಪೂಜೆ ಮಾಡಿ ಸಂಭ್ರಮಿಸಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ನಲವತ್ತು ದಿನಗಳ ಬಳಿಕ ಸರ್ಕಾರ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟ ಬೆನ್ನಲ್ಲೇ ಮದ್ಯ ಸಿಕ್ಕ ಖುಷಿಯಲ್ಲಿ ಇಲ್ಲಿನ ನಾಡಾ-ಗುಡ್ಡೆಯಂಗಡಿ ವ್ಯಾಪ್ತಿಯ ಗೋಳಿಹಕ್ಲು ನಿವಾಸಿಯೋರ್ವರು ಮನೆಯ ಜಗುಲಿ ಮೇಲೆ ವಿವಿಧ ಬ್ರ್ಯಾಂಡ್‍ಗಳ ಮದ್ಯದ ಬಾಟಲಿಗಳನ್ನು ಜೋಡಿಸಿಟ್ಟು ಪೂಜೆ ಮಾಡಿದ್ದರು. ವಿಡಿಯೋ ವೈರಲ್ ಆದ ಬೆನ್ನಲ್ಲೇ ಸಾರ್ವಜನಿಕರು ವ್ಯಕ್ತಿಯ […]
ಆಡಿಯೋ ವೈರಲ್ ಹಿಂದೆ ಜಿಹಾದಿಗಳ ಕೈವಾಡವಿದೆ: ಸಂಸದೆ ಶೋಭಾ ಕರಂದ್ಲಾಜೆ ಆರೋಪ
ಉಡುಪಿ: ಲಾಕ್ ಡೌನ್ ಆದ ಬಳಿಕ ನಾನು ಒಂದು ದಿನವೂ ವಿಶ್ರಾಂತಿ ಪಡೆಯದೆ ನನ್ನ ಕ್ಷೇತ್ರದ ಜನತೆಯ ಸೇವೆ ಮಾಡಿದ್ದಾನೆ. ಆದರೆ ಕೆಲ ಜಿಹಾದಿಗಳು ನನ್ನ ಹೆಸರು ಕೆಡಿಸುವ ಕೆಲಸದಲ್ಲಿ ತೊಡಗಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಗಂಭೀರವಾಗಿ ಆರೋಪಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಲಾಕ್ ಡೌನ್ ಸಡಲಿಕೆಯ ಬಗ್ಗೆ ಮಾಹಿತಿ ಇಲ್ಲ ಎಂಬ ಸಂಸದೆ ಶೋಭಾ ಕರಂದ್ಲಾಜೆ ಧ್ವನಿವುಳ್ಳ ಆಡಿಯೋ ವೈರಲ್ ಆಗಿತ್ತು. ಇದಕ್ಕೆ ಇಂದು ವಿಡಿಯೋ ಹೇಳಿಕೆ ಮೂಲಕ ಸ್ಪಷ್ಟನೆ ನೀಡಿದ ಅವರು, ಈ ಆಡಿಯೋ […]