ನಾಳೆಯಿಂದ ಮಣಿಪಾಲ ದಂತ ವೈದ್ಯಕೀಯ ಕಾಲೇಜಿನ ದಂತ ಚಿಕಿತ್ಸಾಲಯಗಳು ಸೇವೆಗೆ ಲಭ್ಯ
ಮಣಿಪಾಲ: ಮಣಿಪಾಲ ವೈದ್ಯಕೀಯ ಕಾಲೇಜಿನ ದಂತ ಚಿಕಿತ್ಸಾಲಯಗಳು ನಾಳೆ (ಮೇ 5) ಬೆಳಿಗ್ಗೆ 8.30ರಿಂದ ಮಧ್ಯಾಹ್ನ 12.30ರ ವರೆಗೆ ತೆರೆಯಲಿದೆ ಎಂದು ಕಾಲೇಜಿನ ಡೀನ್ ಡಾ. ಕೀರ್ತಿಲತಾ ಎಂ ಪೈ ತಿಳಿಸಿದ್ದಾರೆ. ದಂತ ಚಿಕಿತ್ಸಾಲಯಗಳಿಗೆ ಪ್ರವೇಶಿಸುವ ಮೊದಲು ರೋಗಿಗಳು ಕಸ್ತೂರ್ಬಾ ಆಸ್ಪತ್ರೆ ಹೊರಾಂಗಣದಲ್ಲಿ ಹಾಕಿರುವ ತಾತ್ಕಾಲಿಕ ತಪಾಸಣಾ ಶಿಬಿರದಲ್ಲಿ ಭೇಟಿ ನೀಡಿ ಬಳಿಕ ದಂತ ಚಿಕಿತ್ಸಾಲಯಕ್ಕೆ ಬರಬೇಕು ಎಂದು ಸೂಚಿಸಿದ್ದಾರೆ.
ಷರತ್ತುಗಳಿಗೆ ಒಳಪಟ್ಟು ಅಂಗಡಿ ತರೆಯಲು ಅನುಮತಿ: ಜಿಲ್ಲಾಧಿಕಾರಿ ಜಿ.ಜಗದೀಶ್
ಉಡುಪಿ, ಮೇ 4: ಕರೊನಾ ವೈರಾಣು ಕಾಯಿಲೆ ಕುರಿತಂತೆ ತಾತ್ಕಾಲಿಕ ನಿಯಮಾವಳಿಗಳನ್ನು ಹೊರಡಿಸಿ ಸಾರ್ವಜನಿಕರು ಕೆಲವು ವಿಶೇಷ ಕ್ರಮಗಳನ್ನು ಕಾಯಿಲೆಯ ಸ್ಪೋಟ ಮತ್ತು ಹರಡುವುದನ್ನು ತಡೆಗಟ್ಟಲು ಅನೇಕ ಜನಸಂದಣೆ ಇರುವ ಸ್ಥಳಗಳಲ್ಲಿ, ಹೆಚ್ಚು ಗ್ರಾಹಕರು ಸೇರುವಂತಹ ವಾಣಿಜ್ಯ ಮಳಿಗೆಗಳು, ಎ.ಸಿ ಮಳಿಗೆಗಳು, ಮಾಲ್‌ಗಳನ್ನು ಈಗಾಗಲೇ ಮುಚ್ಚುವಂತೆ ನಿರ್ದೇಶಿಸಲಾಗಿತ್ತು. ಮುಂದುವರಿದು ಸರ್ಕಾರದ ಆದೇಶದಂತೆ ಕೆಲವೊಂದು ವಿಷಯಗಳಿಗೆ ವಿನಾಯಿತಿ ನೀಡಲಾಗಿರುತ್ತದೆ. ಈಗಾಗಲೇ ಸಿನಿಮಾ ಹಾಲ್‌ಗಳು, ಮಲ್ಟಿಪ್ಲೇಕ್ಸ್ ಶಾಪಿಂಗ್ ಮಾಲ್, ಎಸಿ, ಸೆಂಟ್ರಲ್ ಎಸಿ, ಸಿಂಗಲ್ ಬ್ರ‍್ಯಾಂಡ್, ಮಲ್ಟಿ ಬ್ರ‍್ಯಾಂಡ್, Sports […]
ಲಾಕ್ ಡೌನ್ ಸಡಿಲಿಕೆ: ಉಡುಪಿ ಯಲ್ಲಿ ಟ್ರಾಫಿಕ್ ಜಾಮ್
ಉಡುಪಿ: ಕೋವಿಡ್ 19 ಕುರಿತಂತೆ ಗ್ರೀನ್ ಝೋನ್ ನಲ್ಲಿರುವ ಉಡುಪಿ ಜಿಲ್ಲೆಯಲ್ಲಿ ಲಾಕ್ ಡೌನ್ ನಿಯಮಾವಳಿಗಳಲ್ಲಿ ಇಂದಿನಿಂದ ಸಡಿಲಿಕೆ ಮಾಡಲಾಗಿದ್ದು, ಇದರಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು. ಎಲ್ಲ ರೀತಿಯ ಅಂಗಡಿಮುಂಗಟ್ಟುಗಳನ್ನು ಬೆಳಿಗ್ಗೆ 7ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ತೆರೆಯಲು ಅವಕಾಶ ಕಲ್ಪಿಸಿದ್ದು, ಇದರಿಂದ ನಗರದಲ್ಲಿ ಜನರ ಓಡಾಟ ಹೆಚ್ಚಾಗಿತ್ತು. ರಸ್ತೆಗಳಲ್ಲಿಯೂ ವಾಹನ ದಟ್ಟನೆ ಹೆಚ್ಚಾಗಿತ್ತು. ಕಲ್ಸಂಕ, ಕೆ.ಎಂ. ಮಾರ್ಗಗಳಲ್ಲಿ ವಾಹನ ಸಂಚಾರದಲ್ಲಿ ಅಡಚಣೆ ಉಂಟಾಯಿತು.
ಮದ್ಯದಂಗಡಿಗೆ ಮುಗಿಬಿದ್ದ ಜನತೆ: ಉಡುಪಿ ಜಿಲ್ಲೆಯಾದ್ಯಂತ ಇದೇ ಕತೆ
ಉಡುಪಿ: ಜಿಲ್ಲೆಯಾದ್ಯಂತ ಇಂದಿನಿಂದ ಮದ್ಯ ಮಾರಾಟಕ್ಕೆ ಚಾಲನೆ ಸಿಕ್ಕಿದ್ದು, ಪಾನಪ್ರಿಯರು ಮುಗಿಬಿದ್ದು ಮದ್ಯ ಖರೀದಿಸಿದರು. ಕಟಪಾಡಿ, ಪಡುಬಿದ್ರಿ, ಕಾಪು, ಬ್ರಹ್ಮಾವರ, ಕುಂದಾಪುರ, ಕಾರ್ಕಳ, ಬೈಂದೂರು, ಹಿರಿಯಡ್ಕ, ಮಲ್ಪೆ, ಉಡುಪಿಯ ಕಲ್ಸಂಕ, ಬನ್ನಂಜೆ ಹಾಗೂ ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿರುವ ಮದ್ಯ ಮಾರಾಟ ಮಳಿಗೆಗಳಲ್ಲಿ ಜನ ಉರಿ ಬಿಸಿಲನ್ನು ಲೆಕ್ಕಿಸದೆ ಮೀಟರ್ ಗಟ್ಟಲೆ ದೂರದವರೆಗೆ ಸಾಲುಗಟ್ಟಿ ನಿಂತು ಮದ್ಯ ಖರೀದಿಸುತ್ತಿರುವ ದೃಶ್ಯ ಎಲ್ಲ ಕಡೆ ಸಾಮಾನ್ಯವಾಗಿತ್ತು. ಜಿಲ್ಲೆಯಲ್ಲಿ 14 ಎಂಎಸ್ಐಎಲ್ ಮಳಿಗೆ ಹಾಗೂ 89 ವೈನ್ ಶಾಪ್ ಗಳು ಸೇರಿದಂತೆ […]
ಶಿಕ್ಷ ಪ್ರಭಾ ಅಕಾಡೆಮಿಯಿಂದ ಉಚಿತ ಆನ್ ಲೈನ್ ಕಾರ್ಯಗಾರ: ಮನೆಯಿಂದಲೇ ಪಡೆಯಿರಿ ಗುಣಮಟ್ಟದ ಶಿಕ್ಷಣ
ಕುಂದಾಪುರ: ಇಲ್ಲಿನ ಕುಂದೇಶ್ವರ ರಸ್ತೆಯ ಉತ್ತಮ ಕ್ಲಿನಿಕ್ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷ ಪ್ರಭಾ ಅಕಾಡೆಮಿ ಆಫ್ ಕಾಮರ್ಸ್ ಎಜುಕೇಶನ್ (ಸ್ಪೇಸ್) ಸಂಸ್ಥೆಯು ಸಿ.ಎ, ಸಿ.ಎಸ್., ಕೋರ್ಸುಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವುದರಲ್ಲಿ ಮುಂಚೂಣಿಯಲ್ಲಿದ್ದು, ಲಾಕ್ ಡೌನ್ ಸಂದರ್ಭದಲ್ಲಿ ಸಿ.ಎ., ಸಿ.ಎಸ್., ಕೋರ್ಸುಗಳ ಸಂಪೂರ್ಣ ಮಾಹಿತಿಯನ್ನು ಕಾರ್ಯಗಾರದಲ್ಲಿ ನೀಡಲು ಉದ್ದೇಶಿಸಿದೆ. ಈಗಾಗಲೇ ಸಿ.ಎ. ಇಂಟರ್ಮೀಡಿಯೇಟ್ ಮತ್ತು ಸಿ.ಎಸ್. ವಿದ್ಯಾರ್ಥಿಗಳಿಗೆ ಆನ್ ಲೈನ್ ತರಬೇತಿ ಆರಂಭಿಸಿ ವಿದ್ಯಾರ್ಥಿಗಳಿಗೆ ದೈನಂದಿನ ತರಗತಿಯನ್ನು ನಡೆಸುತ್ತಿದೆ. ದ್ವಿತೀಯ ಪಿಯುಸಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳು ಸಿ.ಎ., […]