ಮಂಗಳೂರು: ಮತ್ತೊಂದು ಕೊರೊನ ಪಾಸಿಟಿವ್ ಪತ್ತೆ: ದೆಹಲಿಗೆ ತೆರಳಿದ್ದ ಉಪ್ಪಿನಂಗಡಿ ಮೂಲದ ವ್ಯಕ್ತಿ
ಮಂಗಳೂರು: ದ.ಕ. ಜಿಲ್ಲೆಯಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ ನಿವಾಸಿಯಾಗಿದ್ದು, ಅವರು ವೈಯಕ್ತಿಕ ಕೆಲಸದ ಹಿನ್ನೆಲೆ ದೆಹಲಿಗೆ ತೆರಳಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಮಾ.21ರಂದು ನಿಜಾಮುದ್ದೀನ್ ರೈಲಿನಲ್ಲಿ ಮಂಗಳೂರಿಗೆ ಆಗಮಿಸಿದ್ದ. ಅನಂತರ ಆ ವ್ಯಕ್ತಿಯನ್ನು ಫೋನ್ ಟವರ್ ಲೊಕೇಶನ್ ಆಧಾರದಲ್ಲಿ ವ್ಯಕ್ತಿಯನ್ನು ಜಿಲ್ಲಾಡಳಿತ ಪತ್ತೆ ಮಾಡಿತ್ತು. ಬಳಿಕ ವ್ಯಕ್ತಿಯನ್ನ ಕ್ವಾರಂಟೈನ್ ಮಾಡಿ ಗಂಟಲ ದ್ರಾವಣ ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ಬಂದ ವರದಿಯಲ್ಲಿ ಯುವಕನಿಗೆ ಕೊರೋನಾ ಪಾಸಿಟಿವ್ ಕಂಡುಬಂದಿದೆ. ಮಾ.23ರಿಂದಲೇ ಮಂಗಳೂರಿನಲ್ಲಿ […]
ಲಾಕ್ ಡೌನ್ ನಡುವೆ ಸಪ್ತಪದಿ ಕಹಾನಿ: ಸರಳವಾಗಿ ಮದ್ವೆಯಾಗಿ, ಕಾರ್ಮಿಕರಿಗೆ ಹೊಟ್ಟೆ ತುಂಬಾ ಊಟ ಹಾಕಿದ್ರು ಈ ನವದಂಪತಿ!
ಉಡುಪಿ : ದೇಶದಾದ್ಯಂತ ಕೊರೊನ ಲಾಕ್ ಡೌನ್ ಮುಂದುವರಿದಿದ್ದರೆ ಇಲ್ಲೊಂದು ಅಪರೂಪದ ಮದುವೆ ನಡೆದಿದೆ . ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೈಲೂರಿನ ಸಂದೇಶ್ ಶೆಟ್ಟಿ ಹಾಗೂ ಬೆಳ್ತಂಗಡಿಯ ರಕ್ಷಿತಾ ಅವರ ವಿವಾಹವು ಸರಕಾರದ ನಿಯಮಗಳನ್ನು ಪಾಲಿಸಿಕೊಂಡು ಕಣಂಜಾರಿನ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪೂರ್ವ ನಿಗದಿತ ದಿನಾಂಕ ಎ. 12 ರಂದು ನಡೆಯಿತು. ಆದರೆ ಮದುವೆ ಊಟ ಸವಿದಿದ್ದು ಬರೊಬ್ಬರಿ ನಾಲ್ಕುನೂರು ಹೆಚ್ಚು ಜನ, ಕೊರೊನದ ಲಾಕ್ಡೌನ್ ನಡುವೆ ಹಸಿದಿರುವ ವಲಸೆ ಕಾರ್ಮಿಕರು, ಅಸಂಘಟಿತ ವಲಯದ ಕೆಲಸಗಾರರು, ರಸ್ತೆ […]
ಮಣಿಪಾಲ: ರೋಗಿಯನ್ನು ಕರೆದೊಯ್ಯುತ್ತಿದ್ದ ಕಾರಿನಲ್ಲಿ ಬೆಂಕಿ: ಚಾಲಕ, ರೋಗಿ ಅಪಾಯದಿಂದ ಪಾರು
ಉಡುಪಿ: ರೋಗಿಯೊಬ್ಬರನ್ನು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ಕಾರೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಇಡೀ ಕಾರು ಸುಟ್ಟು ಹೋದ ಘಟನೆ ಇಂದು ಬೆಳಿಗ್ಗೆ 9.30ರ ಸುಮಾರಿಗೆ ಮಣಿಪಾಲದ ಟೈಗರ್ ಸರ್ಕಲ್ ಬಳಿ ಸಂಭವಿಸಿದೆ. ಉಡುಪಿ ನಗರದ ಗರಡಿ ರಸ್ತೆಯ ವ್ಯಕ್ತಿಯೊಬ್ಬರು ತಮ್ಮ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ರೋಗಿಯೊಬ್ಬರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಮಾರ್ಗ ಮಧ್ಯೆ ಕಾರಿನ ಇಂಜಿನ್ ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಎಚ್ಚೆತ್ತ ಚಾಲಕ ಕಾರನ್ನು ರಸ್ತೆಯ ಬದಿ ನಿಲ್ಲಿಸಿ, […]