“ಸಾರ್ವಜನಿಕರು ಕರ್ಪ್ಯೂ ಸಡಿಲಿಕೆಗೊಂಡ ಸಮಯದಲ್ಲಾದರೂ ನಾಯಿಗಳಿಗೆ ಆಹಾರ ನೀಡುವುದು ಉತ್ತಮ”
ಉಡುಪಿ: ಸರಕಾರದ ನಿಷೇಧಾಜ್ಞೆಯಿಂದ ಅಂಗಡಿ ಹೋಟೆಲುಗಳು ಮುಚ್ಚಿವೆ. ಅವುಗಳನ್ನು ಅವಲಂಬಿಸಿ ಬದುಕು ಸಾಗಿಸುತ್ತಿರುವ ಬೀದಿ ನಾಯಿಗಳ ಪಾಡೂ ಹೇಳದಂತಾಗಿದೆ. ಒಂದಡೆ ಬೀದಿ ನಾಯಿಗಳಿಗೆ ಆಹಾರ ಒದಗಿಸುತ್ತಿರುವ ಶ್ವಾನ ಪ್ರಿಯರು ನಿಷೇಧಾಜ್ಞೆ ಕಾರಣದಿಂದ ರಸ್ತೆಗೆ ಸುಳಿದಾಡುವಂತಿಲ್ಲ.ಆದರೂ ಸಾರ್ವಜನಿಕರು ಕರ್ಪ್ಯೂ ಸಡಿಲಿಕೆಗೊಂಡ ಸಮಯದಲ್ಲಾದರೂ ನಾಯಿಗಳಿಗೆ ನೀಡುವುದು ಉತ್ತಮ ಎಂದು ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ತಿಳಿಸಿದ್ದಾರೆ. ಉಡುಪಿ ನಗರದಲ್ಲಿ ನೂರಾರು ಬೀದಿ ನಾಯಿಗಳಿವೆ. ಅವುಗಳು ಹಸಿವೆಯಿಂದ ಬಳಲುತ್ತಿರುವುದನ್ನು ಕಂಡು ಉಡುಪಿ ಜಿಲ್ಲಾ ನಾಗರಿಕ ಸಮಿತಿ ಅವುಗಳಿಗೆ ನಿತ್ಯವು ಆಹಾರ […]
ರಾತ್ರೋರಾತ್ರಿ ಕಾರ್ಮಿಕರ ನೆರವಿಗೆ ಧಾವಿಸಿದ ಅಧಿಕಾರಿಗಳು: ಉ.ಕ ಪ್ರವೇಶಕ್ಕೆ ಉಡುಪಿ ಜಿಲ್ಲಾಡಳಿತದ ಪ್ರಯತ್ನ ಪ್ಲಾಫ್!
-ಶ್ರೀಕಾಂತ ಹೆಮ್ಮಾಡಿ, ಕುಂದಾಪುರ ಕುಂದಾಪುರ: ಜಿಲ್ಲೆಯ ವಿವಿಧ ಭಾಗಗಳಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದ ಸಾವಿರಾರು ವಲಸೆ ಕಾರ್ಮಿಕರು ಊರಿಗೆ ಮರಳಲಾಗದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಉತ್ತರಕನ್ನಡ ಜಿಲ್ಲೆಗೆ ಪ್ರವೇಶ ನಿರ್ಬಂದ ಹೇರಲಾದ ಪರಿಣಾಮ ಶನಿವಾರ ನಸುಕಿನ ಜಾವ ಜಿಲ್ಲೆಯ ಗಡಿಭಾಗವಾದ ಶಿರೂರು ಚೆಕ್ಪೋಸ್ಟ್ ಬಳಿ ವಲಸೆ ಕಾರ್ಮಿಕರು ಅತಂತ್ರಕ್ಕೆ ಸಿಲುಕಿದ ಘಟನೆ ನಡೆದಿದೆ. ದೇಶದೆಲ್ಲೆಡೆ ವ್ಯಾಪಕವಾಗಿ ಹಬ್ಬುತ್ತಿರುವ ಕೊರೋನಾ ಮಹಾಮಾರಿಯನ್ನು ನಿಯಂತ್ರಿಸಲು ಪ್ರಧಾನಮಂತ್ರಿ ಹೊರಡಿಸಿರುವ ಲಾಕ್ಡೌನ್ ಆದೇಶ ಜಾರಿಗೊಂಡ ದಿನದಿಂದಲೂ ವಲಸೆ ಕಾರ್ಮಿಕರು ಒಂದಲ್ಲ ಒಂದು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. […]
ಕೋವಿಡ್-19 ಮಾಹಿತಿಗಾಗಿ ವೆಬ್ಸೈಟ್ ಹಾಗೂ ಕೂಲಿ ಕಾರ್ಮಿಕರ ಹಸಿವು ಇಂಗಿಸಲು ಶುಲ್ಕ-ರಹಿತ ದೂರವಾಣಿ ಲೋಕಾರ್ಪಣೆ
ಮುಖ್ಯಮಂತ್ರಿಯವರ ಸೂಚನೆಯ ಮೇರೆಗೆ, ಕರ್ನಾಟಕದಲ್ಲಿ ಕೊರೊನಾ ವೈರಾಣು 19 (ಕೋವಿಡ್-19) ಕುರಿತ ಅಧಿಕೃತ ಮಾಹಿತಿಗಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ರೂಪಿಸಿರುವ ವೆಬ್ಸೈಟ್ ಹಾಗೂ ಅನ್ನವಿಲ್ಲದ ಬಡ ಕೂಲಿ ಕಾರ್ಮಿಕರ ಹಸಿವು ಇಂಗಿಸಲು ಕಾರ್ಮಿಕ ಇಲಾಖೆ ಸ್ಥಾಪಿಸಿರುವ ಶುಲ್ಕ-ರಹಿತ ದೂರವಾಣಿಯನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಅವರು ಶನಿವಾರ ಲೋಕಾರ್ಪಣೆ ಮಾಡಿದರು. ಇಡೀ ವಿಶ್ವವನ್ನೇ ಕಾಡುತ್ತಿರುವ ಕೋವಿಡ್-19 ರ ಉಪಟಳ ಅತೀ ಶೀಘ್ರದಲ್ಲೇ ಅಂತ್ಯಗೊಳ್ಳಲಿ. ಮುಂದೆಂದೂ ಮನುಕುಲಕ್ಕೆ ಇಂತಹ ಸಮಸ್ಯೆಗಳು ಕಾಡದಿರಲಿ ಎಂಬ […]
‘ಮಗನ ಬರ್ತ್ ಡೇ ನನ್ನ ಡೆತ್ ಡೇ’ ವ್ಯಾಟ್ಸಾಪ್ ಸಂದೇಶ ರವಾನಿಸಿ ಆತ್ಮಹತ್ಯೆಗೆ ಶರಣಾದ ಮಾರ್ಪಳ್ಳಿ ನಿವಾಸಿ
ಉಡುಪಿ,ಮಾ.28: ಮಾರ್ಪಳ್ಳಿ- ನಂದಗೋಕಲ ಇಲ್ಲಿಯ ಬಾಡಿಗೆ ಮನೆಯೊಂದರಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ವ್ಯಕ್ತಿಯೊರ್ವರು ಜಂತಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡಿ ವ್ಯಕ್ತಿ ದಿನೇಶ್ ಶೆಟ್ಟಿ (52 ವ) ತಂದೆ ವಿಠಲ ಶೆಟ್ಟಿ, ಶ್ರೀದುರ್ಗಾ- ಕಬ್ಯಾಡಿಯ ನಿವಾಸಿ ಎಂದು ಗುರುತಿಸಲಾಗಿದೆ. ಮೃತನು ಮಂಚಕಲ್ಲ್ ಇಲ್ಲಿಯ ಸಿದ್ಧ ಉಡುಪು ಮಳಿಗೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಕೆಲವು ಸಮಯಗಳಿಂದ ಮಾರ್ಪಳ್ಳಿಯ ಬಾಡಿಗೆ ಮನೆಯಲ್ಲಿ ಒಂಟಿಯಾಗಿ ವಾಸವಾಗಿದ್ದ. ಇಂದು ಮೃತನ ಮಗನ ಹುಟ್ಟು ಹಬ್ಬದ ದಿನವಾಗಿತ್ತು. ಮಿತ್ರರೆಲ್ಲರಿಗೂ “ಮಗನ ಬರ್ತ್ […]