ಕೊರೊನಾ ಸಂಬಂಧ ಸರಕಾರ ಗೊಂದಲದ ಹೇಳಿಕೆ ನೀಡಬಾರದು: ಖಾದರ್

ಮಂಗಳೂರು: ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಕ್ರಮ ಕೈಗೊಂಡಿದೆ. ಆದ್ರೆ ಜನರನ್ನು ಗೊಂದಲಕ್ಕೀಡು ಮಾಡುವ ಸಂದೇಶಗಳನ್ನು ನೀಡಬಾರದು ಎಂದು ಮಾಜಿ ಸಚಿವ ಯುಟಿ ಖಾದರ್ ಕಿಡಿಕಾರಿದ್ದಾರೆ. ಮಂಗಳೂರಲ್ಲಿ ಮಾತನಾಡಿದ ಅವರು,  ಸೂಪರ್ ಮಾರ್ಕೆಟ್, ದಿನಸಿ ಅಂಗಡಿ, ಜ್ಯುವೆಲ್ಲರಿಯನ್ನು 24 ಗಂಟೆ ಓಪನ್ ಮಾಡಬಹುದು ಅಂದಿದೆ. ಇದೆಷ್ಟು ಸರಿ..? ಈ ನಿರ್ಧಾರದ ಕುರಿತು ಸರ್ಕಾರ ಪುನರ್ ವಿಮರ್ಶಿಸಬೇಕಾಗಿದೆ ಎಂದರು. ಜನಸಾಮಾನ್ಯರು ಊಟ ಬೇಕಾ..? ವೈರಸ್ ಬೇಕಾ ಎಂದು ಪ್ರಶ್ನಿಸಬೇಕಾಗಿದೆ. ಯಾಕಂದ್ರೆ ನಗರ ಮಟ್ಟದಲ್ಲಿ ಕಾಣಿಸಿಕೊಂಡ ಕೊರೊನಾ ಇಡೀ ದೇಶ […]

ಕೊರೊನ ಭೀತಿ: ಎಚ್ಚೆತ್ತುಕೊಂಡ ಮಂಗಳೂರು ಜನತೆ

ಮಂಗಳೂರು: ಇಷ್ಟು ದಿನ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಬೇಜವಾಬ್ದಾರಿಯುತವಾಗಿ ವರ್ತಿಸುತ್ತಿದ್ದ ಮಂಗಳೂರಿನ ಜನರು ಕೊನೆಗೂ ಎಚ್ಚೆತ್ತುಕೊಂಡಿದ್ದಾರೆ. ಇಂದು ಬೆಳಗ್ಗೆ ಮಂಗಳೂರು ನಗರದ ಮಲ್ಲಿಕಟ್ಟೆ ಮಾರ್ಕೆಟ್ ನಲ್ಲಿ ಅಗತ್ಯ ಸಾಮಾಗ್ರಿಗಳನ್ನು ಕೊಳ್ಳಲು ಬಂದಿರುವ ಜನ ಸಾಮಾಜಿಕ ಅಂತರ ಕಾಯ್ದುಕೊಂಡು ಶಿಸ್ತು ಪಾಲನೆ ಮಾಡಿದ್ದರು. ಅಂಗಡಿ ಮುಂಬಾಗ ಯಾವುದೇ ಸೇಫ್ಟಿ ಲೈನ್ ಇಲ್ಲದಿದ್ದರೂ ಎರಡು ಫೀಟ್ ಅಂತರ ಕಾಯ್ದುಕೊಂಡರು. ಗ್ರಾಹಕರ ಖರೀದಿ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಅಂಗಡಿ ಮಾಲಕರಿಗೆ ಸೂಚಿಸಿದ್ದ ಪಾಲಿಕೆ ಎಚ್ಚರಿಕೆ ನೀಡಿತ್ತು. ಸಾಮಾಜಿಕ ಅಂತರ ಕಾಯ್ದು […]

ರೋಡಿಗಿಳಿಯುವ ಸವಾರರಿಗೆ ಹತ್ತು ಬಸ್ಕಿ: ಇದು ಕುಂದಾಪುರ‌ ಪೊಲೀಸರ ಹೊಸ ಅಸ್ತ್ರ.

-ಶ್ರೀಕಾಂತ ಹೆಮ್ಮಾಡಿ, ಕುಂದಾಪುರ ಕುಂದಾಪುರ: ರಾಜ್ಯದೆಲ್ಲಡೆ ಕೊರೋರಾ ಮಹಾಮಾರಿ ವ್ಯಾಪಕವಾಗುತ್ತಿರುವ ಬೆನ್ನಲ್ಲೇ ಕೊರೋನಾ ನಿಯಂತ್ರಣಕ್ಕಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸರ್ಕಾರ ಹೊರಡಿಸಿರುವ ಕಫ್ರ್ಯೂ ಆದೇಶಕ್ಕೆ ನಗರದ ಸಾರ್ವಜನಿಕರು ಕ್ಯಾರೇ ಅನ್ನುತ್ತಿಲ್ಲ. ಸಾರ್ವಜನಿಕರಿಗೆ ತೊಂದರೆಯಾಗಬಾರೆದೆಂಬ ಉದ್ದೇಶದಿಂದ ಅಗತ್ಯ ವಸ್ತುಗಳನ್ನು ಖರೀದಿಸಲು ಕಫ್ರ್ಯೂ ಸಡಿಲಗೊಳಿಸಿ ಅವಕಾಶ ಕಲ್ಪಿಸಲಾಗಿತ್ತು. ಆದರೆ ಇದನ್ನು ದುರುಪಯೋಗಪಡಿಸಿಕೊಂಡು ಅನಗತ್ಯವಾಗಿ ಕೆಲ ರಸ್ತೆ ಮೇಲೆ ತಿರುಗಾಡುತ್ತಿರುವ ವಾಹನ ಸವಾರರಿಗೆ ಬುಧವಾರದಿಂದಲೇ ಪೊಲೀಸರು ಲಾಠಿ ಚಾರ್ಜ್ ಮಾಡಲಾರಂಭಿಸಿದ್ದಾರೆ. ಬುಧವಾರ ಬೆಳಿಗ್ಗೆ ಲಾಠಿ ಚಾರ್ಜ್ ಮಾಡಿದ್ದರಿಂದ ಕೆಲಹೊತ್ತು ಕುಂದಾಪುರ ನಗರದ […]

ಉಡುಪಿಯಲ್ಲಿ ಮತ್ತೆ 16 ಮಂದಿ ಹೊಸ ಕೊರೊನಾ ಶಂಕಿತರು ಪತ್ತೆ: ಆಸ್ಪತ್ರೆಗೆ ದಾಖಲು

ಉಡುಪಿ: ಜಿಲ್ಲೆಯಲ್ಲಿ ಇಂದು 16 ಮಂದಿ ಕೊರೊನಾ ಶಂಕಿತರು ಪತ್ತೆಯಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದು, ಅವರ ಗಂಟಲಿನ ದ್ರವ ಹಾಗೂ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಡಿಎಚ್ ಒ ಡಾ. ಸುಧೀರ್ ಚಂದ್ರ  ಸೂಡಾ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 103 ಮಂದಿ ಕೊರೊನಾ ಶಂಕಿತರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದು, ಅದರಲ್ಲಿ 80 ಮಂದಿಯ ವೈದ್ಯಕೀಯ ವರದಿ ಬಂದಿದೆ. ಓರ್ವನಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು, ಉಳಿದ 79 ಮಂದಿಯ ವರದಿಯಲ್ಲಿ […]

ಕಫ್ರ್ಯೂ ವಿಧಿಸಿದ ಬಳಿಕ ಕುಂದಾಪುರದಲ್ಲಿ ದಾಖಲಾದ ಮೊದಲ ಪ್ರಕರಣ: ಪೊಲೀಸರೊಂದಿಗೆ ಉಡಾಫೆ ಮಾತನಾಡಿದ ಯುವಕ ಅಂದರ್

ಕುಂದಾಪುರ: ಕೊರೋನಾ ಮಹಾಮಾರಿ ನಿಯಂತ್ರಣಕ್ಕಾಗಿ ಸರ್ಕಾರ ವಿಧಿಸಿರುವ ಕಫ್ರ್ಯೂ ಮೂರನೇ ದಿನಕ್ಕೆ ಕಾಲಿಟ್ಟ ಬೆನ್ನಲ್ಲೆ ಪೊಲೀಸರ ಮಾತಿಗೆ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಯುವಕನೋರ್ವನ ಮೇಲೆ ಕುಂದಾಪುರ ಠಾಣೆಯಲ್ಲಿ ಕೇಸು ದಾಖಲಾಗಿದೆ. ಇಲ್ಲಿನ ಉಪ್ಪಿನಕುದ್ರು ನಿವಾಸಿ ವಿಶ್ವನಾಥ್ ಶೇರುಗಾರ್(23) ಇದೀಗ ಪೊಲೀಸರ ಅತಿಥಿಯಾಗಿದ್ದು, ಕುಂದಾಪುರದಲ್ಲಿ ಕಫ್ರ್ಯೂ ನಿಯಮ ಉಲ್ಲಂಘಿಸಿದ ಪ್ರಥಮ ಪ್ರಕರಣವಾಗಿ ದಾಖಲಾಗಿದೆ. ಗುರುವಾರ ಬೆಳಿಗ್ಗೆ ಎಸಿ ಸಮ್ಮುಖದಲ್ಲೇ ಕುಂದಾಪುರ ಶಾಸ್ತ್ರೀವೃತ್ತದ ಚೆಕ್‍ಪೋಸ್ಟ್‍ನಲ್ಲಿ ವಾಹನ ತಪಾಸಣೆ ನಡೆಸುತ್ತಿರುವ ವೇಳೆಯಲ್ಲಿ ಬೈಕ್‍ನಲ್ಲಿ ಬಂದ ಯುವಕನೋರ್ವ ಪೊಲೀಸರ ಮಾತಿಗೆ ವಾಗ್ವಾದಕ್ಕಿಳಿದಿದ್ದಾನೆ. […]