ಕೊರೊನಾ ಪಾಸಿಟಿವ್ ವ್ಯಕ್ತಿಯ ಪೋಟೊ, ಹೆಸರನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದವರ ವಿರುದ್ಧ ಕೇಸ್: ಡಿಸಿ ಜಗದೀಶ್

ಉಡುಪಿ: ಉಡುಪಿಯಲ್ಲಿ ಇಂದು ಪತ್ತೆಯಾದ ಕೊರೊನಾ ಪಾಸಿಟಿವ್ ವ್ಯಕ್ತಿಯ ಹೆಸರು, ಪೋಟೊ ಹಾಗೂ ಅವರ ಹೆಂಡಿತಿ ಪೋಟೊ, ಹೆಸರನ್ನು ವಾಟ್ಸಾಪ್ ಹಾಗೂ ಇತರೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.

ಮನೆಯಿಂದ ಹೊರಗಡೆ ಬರಬೇಡಿಯೆಂದ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಪುಂಡರು

ಬೆಂಗಳೂರು: ದೇಶದಾದ್ಯಂತ ಲಾಕ್ ಡೌನ್ ಜಾರಿಯಲ್ಲಿ ಇದ್ದರೂ ಬೆಂಗಳೂರಿನ ಸಂಜಯನಗರ ಠಾಣೆಯ ಪೊಲೀಸರ ಮೇಲೆ ಏಕಾಏಕಿಯಾಗಿ ಕಿಡಿಗೇಡಿಗಳ ಗುಂಪೊಂದು ಹಲ್ಲೆ ನಡೆಸಿ ಅಟ್ಟಹಾಸ ಮೆರೆದಿದೆ. ಕೊರೊನಾ ಸೋಂಕು‌ ಹರಡುವುದನ್ನು ನಿಯಂತ್ರಿಸಲು ಪೊಲೀಸರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡುತ್ತಿದ್ದಾರೆ. ಆದರೆ ಇನ್ನೊಂದೆಡೆ ಪುಂಡ ಯುವಕರು ಸರ್ಕಾರದ ಆದೇಶವನ್ನು‌ ಉಲ್ಲಂಘಿಸಿ ರಸ್ತೆಗಿಳಿಯುತ್ತಿದ್ದು, ಮತ್ತಷ್ಟು ಆತಂಕ ಸೃಷ್ಟಿಸುತ್ತಿದ್ದಾರೆ. ಈ ಕಿಡಿಕೇಡಿಗಳನ್ನು‌ ತಡೆಯಲು ಬರುವ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗುತ್ತಿದ್ದಾರೆ. ಬೆಂಗಳೂರಿನ ಸಂಜಯನಗರ ರಸ್ತೆಯಲ್ಲಿ ಇಂದು ಅಡ್ಡಾದಿಡ್ಡಿಯಾಗಿ ಸಂಚಾರ ಮಾಡುತ್ತಿದ್ದ ಕಿಡಿಗೇಡಿಗಳ ಗುಂಪೊಂದಕ್ಕೆ […]

ಉಡುಪಿಯಲ್ಲಿ ಕೊರೊನಾ ಶಂಕಿತರ ಸಂಖ್ಯೆ 87ಕ್ಕೆ ಏರಿಕೆ: ಓರ್ವನಲ್ಲಿ ಕೊರೊನಾ ಸೋಂಕು‌ ದೃಢ

ಉಡುಪಿ: ಜಿಲ್ಲೆಯಲ್ಲಿ ಇಂದು ಹೊಸದಾಗಿ 11 ಮಂದಿ ಕೊರೊನಾ ಶಂಕಿತರು‌ ಪತ್ತೆಯಾಗಿದ್ದು, ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲ 11 ಮಂದಿಯ ಗಂಟಲಿನ ದ್ರವ ಹಾಗೂ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಜಿಲ್ಲೆಯಲ್ಲಿ ಮಂಗಳವಾರದ ವರೆಗೆ ಒಟ್ಟು 76  ಕೊರೊನಾ ಶಂಕಿತರು ಆಸ್ಪತ್ರೆಗೆ ದಾಖಲಾಗಿದ್ದು, ಅದರಲ್ಲಿ ಒಬ್ಬ ವ್ಯಕ್ತಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಉಳಿದವರೆಲ್ಲರ ವೈದ್ಯಕೀಯ ವರದಿಯಲ್ಲಿ ನೆಗೆಟಿವ್ ಫಲಿತಾಂಶ ಬಂದಿದೆ. ಈವರೆಗೆ ಜಿಲ್ಲೆ 87 ಕೊರೊನಾ ಶಂಕಿತರನ್ನು ಗುರುತಿಸಲಾಗಿದೆ ಎಂದು ಡಿಎಚ್ ಒ ತಿಳಿಸಿದ್ದಾರೆ.

ಕೊರೊನಾ ಭೀತಿ: ಬ್ರಹ್ಮಾವರದಲ್ಲಿ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ಬ್ರಹ್ಮಾವರ: ಕೊರೊನಾ ಸೋಂಕು ತಗುಲಿರಬಹುದೆಂಬ ಭೀತಿಯಿಂದ ವ್ಯಕ್ತಿಯೊಬ್ಬ ಗೇರುಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬ್ರಹ್ಮಾವರ ತಾಲ್ಲೂಕಿನ ಉಪ್ಪೂರು ನರ್ನಾಡಿನಲ್ಲಿ ಇಂದು‌ ಮುಂಜಾನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಉಪ್ಪೂರು ನರ್ನಾಡಿನ ಗೋಪಾಲಕೃಷ್ಣ (56) ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೂ ಮುನ್ನ ಕೊರೊನಾ ಭೀತಿಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ. ಮೃತ ವ್ಯಕ್ತಿ ಮಧ್ಯರಾತ್ರಿವರೆಗೂ ಕುಟುಂಬದ ಸದ್ಯಸರ ಬಳಿ ಕೊರೊನಾ ಹರಡುತ್ತಿರುವ ಆತಂಕದ ವಿಚಾರವಾಗಿ ಮಾತನಾಡಿ, ಬೆಳಗಿನ ಜಾವ‌ ಮನೆಯ ಹಿಂಬದಿಯ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ […]

ನಾಳೆಯಿಂದ ಮಂಗಳೂರಿನಲ್ಲಿ ಎಲ್ಲವೂ ಸಂಪೂರ್ಣ ಬಂದ್: ದ‌.ಕ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿಕೆ

ಮಂಗಳೂರು: ಕೊರೋನಾ ವೇಗವಾಗಿ ಹಬ್ಬುತ್ತಿರುವ ಹಿನ್ನೆಲೆ ನಾಳೆ ಮಂಗಳೂರು ಸಂಪೂರ್ಣ  ಬಂದಗಲಿದೆ ಎಂದು ಸಂಸದ ನಳೀನ್ ಕುಮಾರ್ ಕಟೀಲ್ ಘೋಷಿಸಿದ್ದಾರೆ. ಇವತ್ತು ಅಗತ್ಯ ವಸ್ತು ಖರೀದಿಗೆ ಸಮಯ ಕೊಡಲಾಗಿದೆ, ಆದ್ರೆ ನಾಳೆಯಿಂದ ಅದೂ ಇಲ್ಲ ಈ ಬಗ್ಗೆ ಜಿಲ್ಲೆಯ ಎಲ್ಲಾ ಅಧಿಕಾರಿಗಳ ಜೊತೆ ಮಾತುಕತೆ ಮಾಡುತ್ತಿದ್ದೇವೆ ಜನರಿಗೆ ಬೇಕಾದ ಎಲ್ಲಾ ಸವಲತ್ತುಗಳನ್ನು ನಾವೇ ಮನೆಗೆ ತಲುಪಿಸುತ್ತೇವೆ ಸರ್ಕಾರದ ಕಡೆಯಿಂದ ಹೇಗೆ ತಲುಪಿಸೋದು, ಅಪಾರ್ಟ್ ಮೆಂಟ್ ಗಳಿಗೆ ಹೇಗೆ ತಲುಪಿಸೋದು ಅಂತ ಮಾತುಕತೆ ನಡೆಯುತ್ತಿದೆ ಎಂದವರು ತಿಳಿಸಿದ್ದಾರೆ. ನಿನ್ನೆ […]