ಜೀವ ನುಂಗಲು ಬಂತು ಹಂಟಾ ವೈರಸ್ :ಚೀನಾದಲ್ಲಿ ಓರ್ವ ವ್ಯಕ್ತಿ ಸಾವು!

ಯುನ್ನಾನ್: ಕೊರೋನಾ ವೈರಸ್ ನಿಂದ ಜಗತ್ತು ತತ್ತರಿಸಿ ಹೋಗಿರುವಾಗ ಈಗ ಹೊಸ ವೈರಸ್ ಚೀನಾದಲ್ಲಿ ಆತಂಕ ಸೃಷ್ಟಿಸಿದೆ. ಅದೇ ಹಂಟಾ ವೈರಸ್. ಚೀನಾದ ಯುನ್ನಾನ್ ನಲ್ಲಿ ಹಂಟಾ ವೈರಸ್ ಪ್ರಕರಣ ವರದಿಯಾಗಿದ್ದು, ಅಲ್ಲಿನ ಪತ್ರಿಕೆ ಚೀನಾದ ಗ್ಲೋಬಲ್ ಟೈಮ್ಸ್ ಪತ್ರಿಕೆಯ ಅಧಿಕೃತ ಟ್ವೀಟ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಲಭ್ಯವಾಗಿದೆ. ಶಾಂಡೊಂಗ್ ಪ್ರಾಂತ್ಯದ ಯುನ್ನಾನ್ ಪ್ರದೇಶದಲ್ಲಿ ಕೆಲಸಕ್ಕೆ ಬರುತ್ತಿದ್ದ ಓರ್ವ ವ್ಯಕ್ತಿ, ಹಂಟಾ ವೈರಸ್ ಗೆ ತುತ್ತಾಗಿ ಬಸ್ ನಲ್ಲೇ ಸಾವನ್ನಪ್ಪಿದ್ದಾನೆ. ಬಸ್ ನಲ್ಲೇ ಇದ್ದ 32 […]

ನವದೆಹಲಿ: ಇಂದು ರಾತ್ರಿ 8 ಗಂಟೆಗೆ ದೇಶವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ

ನವದೆಹಲಿ: ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ವೈರಸ್‌ ಭೀತಿಯ ವಿಚಾರಗಳ ಕುರಿತು ಪ್ರಧಾನಿ ಮೋದಿ ಅವರು ಇಂದು (ಮಾ.24) ರಾತ್ರಿ 8 ಗಂಟೆಗೆ ದೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಭಾರತದಲ್ಲಿ 490ಕ್ಕೂ ಹೆಚ್ಚು ಕೊರೊನಾ ಸೋಂಕಿತರ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಪ್ರಧಾನಿ ಅವರು ಈ ಭಾಷಣಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗಿದೆ. ಮಾ.22 ರಂದು ದೇಶದಲ್ಲಿ ಪ್ರಧಾನಿ ಯವರ ಜನತಾ ಕರ್ಫೂ ಗೆ ವ್ಯಾಪಕ ಬೆಂಬಲ ದೊರಕಿದ್ದು, ಈಗ ದೇಶವ್ಯಾಪಿ ಮಾ.31ರವರೆಗೆ ಲಾಕ್ ಡೌನ್ ಆಗಿರುವ ಕಾರಣ ಈ ವಿಚಾರದ […]

ಬಡವರ ಬಂಧು ಸಾಲಮನ್ನಾ, ವಿಶೇಷ ಪ್ಯಾಕೇಜ್ ಘೋಷಣೆ: ಸಿಎಂ ಯಡಿಯೂರಪ್ಪ

ಬೆಂಗಳೂರು: ವ್ಯಾಪಕವಾಗಿ ಕೊರೊನಾ ವೈರಸ್ ಹರುಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯವನ್ನು ಮಾರ್ಚ್ 31ರವರೆಗೆ ಲಾಕ್ಡೌನ್ ಮಾಡಿರುವುದರಿಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಿಧಾನಸಭೆಯಲ್ಲಿ ಮಂಗಳವಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಬಡವರ ಬಂಧು ಯೋಜನೆಯಡಿ ಪಡೆದಿರುವ ಸಾಲಮನ್ನಾ, ಕಟ್ಟಡ ಕಾರ್ಮಿಕರಿಗೆ ತಿಂಗಳಿಗೆ ತಲಾ 1500 ರೂಪಾಯಿ ನೀಡುವುದು, 2 ತಿಂಗಳ ಪಡಿತರವನ್ನು ಮುಂಚಿತವಾಗಿ ವಿತರಣೆ ಮಾಡುವುದು ಸೇರಿದಂತೆ ಸಾಮಾಜಿಕ ಭದ್ರತಾ ಪಿಂಚಣಿಯನ್ನು ಮುಂಗಡ ಬಿಡುಗಡೆ ಮಾಡುವುದನ್ನು ಘೋಷಣೆ ಮಾಡಿದರು.

ಸರ್ಕಾರದ ಆದೇಶ ಉಲ್ಲಂಘಿಸಿದ ಬಿಗ್ ಬಜಾರ್ ಮಾಲ್ ಗೆ ಡಿಸಿ ದಿಢೀರ್ ದಾಳಿ: ವ್ಯವಸ್ಥಾಪಕರ ವಿರುದ್ಧ ಕೇಸ್ ದಾಖಲಿಸುವಂತೆ ಸೂಚನೆ

ಉಡುಪಿ: ರಾಜ್ಯ ಸರ್ಕಾರ ಲಾಕ್ ಡೌನ್ ಆದೇಶ ಉಲ್ಲಂಘಿಸಿ ಎಸಿ ಹಾಕಿಕೊಂಡು ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದ ನಗರದ ಬಿಗ್ ಬಜಾರ್ ಮಾಲ್ ಗೆ ಇಂದು ದಿಢೀರ್ ದಾಳಿ ನಡೆಸಿದ ಜಿಲ್ಲಾಧಿಕಾರಿ ಜಿ. ಜಗದೀಶ್ ಬಿಗ್ ಬಜಾರ್ ವ್ಯವಸ್ಥಾಪಕರನ್ನು‌ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ ವ್ಯವಸ್ಥಾಪಕರ ಮೇಲೆ ಪ್ರಕರಣ ದಾಖಲಿಸುವಂತೆ ಎಸ್ಪಿ ವಿಷ್ಣುವರ್ಧನ್ ಅವರಿಗೆ ಸೂಚನೆ ನೀಡಿದ್ದಾರೆ. ಸರ್ಕಾರದ ಆದೇಶವನ್ನು ಯಾವುದು ಪಾಲಿಸಿಲ್ಲ. ಎಸಿ ಹಾಕಿಕೊಂಡು ಒಳಗಡೆ ವ್ಯಾಪಾರ ಮಾಡುತ್ತಿದ್ದೀರಾ ಎಂದು ಡಿಸಿ ವ್ಯವಸ್ಥಾಪಕರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. […]

ಭಟ್ಕಳದ ಇಬ್ಬರಿಗೆ ಕೊರೊನಾ ಸೋಂಕು: ಇಬ್ಬರೂ ಬಂದದ್ದು ವಿದೇಶದಿಂದ!

ರಾಜ್ಯ: ಕೊರೋನಾ ರಾಜ್ಯದಲ್ಲಿ ತನ್ನ ಕಬಂಧಬಾಹುವನ್ನು ಇನ್ನಷ್ಟು ವಿಸ್ತರಿಸಿದ್ದು, ಭಟ್ಕಳದ ಇಬ್ಬರು ವ್ಯಕ್ತಿಗಳಿಗೆ ಇದೀಗ ಕೊರೋನಾ ಸೋಂಕು ತಗಲಿರುವುದು ದೃಢಪಟ್ಟಿದೆ. ದುಬೈನಿಂದ ಭಟ್ಕಳಕ್ಕೆ ಬಂದ ಇಬ್ಬರಲ್ಲಿ ಕೊರೊನಾ ಸೋಂಕು ದೃಡಪಟ್ಟಿದೆ ಎಂದು ಜಿಲ್ಲಾಧಿಕಾರಿ ಕೆ ಹರೀಶ್ ಕುಮಾರ್ ತಿಳಿಸಿದ್ದಾರೆ ಇಬ್ಬರಿಗೆ ಬಂತು ಕೊರೋನಾ: ಮಾರ್ಚ್ 21ಕ್ಕೆ ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದ 40 ವರ್ಷದ ಪುರುಷ, ತಮ್ಮದೇ ವಾಹನದಲ್ಲಿ ಸಹೋದರ ಸಂಬಂಧಿ ಭಟ್ಕಳದ ಮನೆಗೆ ಬಂದಿದ್ದರು. ನಂತರ ಅರ್ಧ ಗಂಟೆ ಮನೆಯಲ್ಲಿದ್ದು ತಾಲೂಕು ಆಸ್ಪತ್ರೆಗೆ ಬಂದು […]