ಕುಂದಾಪುರ: ಮೀನುಗಾರಿಕೆಗಾಗಿ ಕೇರಳಕ್ಕೆ ತೆರಳಿದ ಮೀನುಗಾರರು ಮರಳಿ ಮನೆಗೆ!
ಕುಂದಾಪುರ: ಕೆಲ ದಿನಗಳ ಹಿಂದೆ ಮೀನುಗಾರಿಕೆಗಾಗಿ ಕೇರಳಕ್ಕೆ ತೆರಳಿದ ಕರಾವಳಿಯ ಮೀನುಗಾರರು ಮಂಗಳವಾರ ಮಧ್ಯಾಹ್ನ ಬೋಟ್‌ನಲ್ಲೇ ಕುಂದಾಪುರ ಕೋಡಿ ಕಡಲ ಕಿನಾರೆಗೆ ಬಂದಿಳಿದಿದ್ದಾರೆ. ಕೇರಳಕ್ಕೆ ಮೀನುಗಾರಿಕೆಗಾಗಿ ತೆರಳಿದ ಕುಂದಾಪುರ, ಕಾರವಾರ ಹಾಗೂ ಕುಮಟಾದ ಸುಮಾರು ೬೦ ಮಂದಿ ಮೀನುಗಾರರು ೭ ಬೋಟ್‌ಗಳಲ್ಲಿ ಸುರಕ್ಷಿತವಾಗಿ ಬಂದಿಳಿದಿದ್ದಾರೆ. ಕೋಡಿ ಕಡಲ ಕಿನಾರೆಗೆ ಬಂದಿಳಿದ ಅವರನ್ನು ಕೋಡಿಯ ಸಾಮಾಜಿಕ ಕಾರ್ಯಕರ್ತ ಅಶೋಕ್ ಪೂಜಾರಿ ಮತ್ತು ಸ್ನೇಹಿತರು ಎಲ್ಲಾ ಮೀನುಗಾರರನ್ನು ಬಸ್ ಮೂಲಕ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆತಂದರು. ಎಲ್ಲರನ್ನೂ ಪರಿಶೀಲಸಿದ […]
ಉಡುಪಿ: ಹೋಂ ಕ್ವಾರಂಟೈನ್ ನಲ್ಲಿರುವವರನ್ನು ಕಟ್ಟುನಿಟ್ಟಾಗಿ ಪರಿಶೀಲಿಸಿ : ಜಿಲ್ಲಾಧಿಕಾರಿ ಜಿ.ಜಗದೀಶ್
ಉಡುಪಿ : ಕಾರ್ಕಳ ತಾಲೂಕಿನಲ್ಲಿ ಹೋಂ ಕ್ವಾರಂಟೈನ್ ನಲ್ಲಿರುವವರನ್ನು ದಿನದಲ್ಲಿ 2 ಬಾರಿ ಕಡ್ಡಾಯವಾಗಿ ಅವರ ಮನೆಗೆ ತೆರಳಿ ಕಟ್ಟುನಿಟ್ಟಾಗಿ ಪರಿಶೀಲನೆ ನಡೆಸುವಂತೆ ಕಾರ್ಕಳ ತಾಲೂಕಿನ ಕಂದಾಯ ನಿರೀಕ್ಷಕರುಗಳಿಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದ್ದಾರೆ. ಮಂಗಳವಾರ ಕಾರ್ಕಳ ತಾಲೂಕು ಕಚೇರಿಗೆ ಭೇಟಿ ನೀಡಿ, ಸಭೆ ನಡೆಸಿದ ಜಿಲ್ಲಾಧಿಕಾರಿಗಳು, ಹೋಂ ಕ್ವಾರಂಟೈನ್ ನಲ್ಲಿರುವವರು ನಿಗಧಿತ ಅವಧಿಯ ತನಕ ಮನೆ ಬಿಟ್ಟು ಹೊರ ಬರದ ರೀತಿಯಲ್ಲಿ ಎಲ್ಲಾ ಕ್ರಮ ಕೈಗೊಳ್ಳುವಂತೆ ಹಾಗೂ ಪ್ರತಿದಿನ 2 ಬಾರಿ ಅವರ ಮನೆಗಳಿಗೆ ತೆರಳಿ ಪರಿಶೀಲನೆ […]
ಉಡುಪಿ ಜಿಲ್ಲೆ: ಲಾಕ್ ಡೌನ್ ನಿರ್ಬಂದಗಳ ಪಾಲನೆ ಕಡ್ಡಾಯ, ತಪ್ಪಿದಲ್ಲಿ ಕಠಿಣ ಕಾನೂನು ಕ್ರಮ – ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ
ಉಡುಪಿ : ಕೊರೊನಾ ನಿಯಂತ್ರಣ ಕುರಿತಂತೆ, ರಾಜ್ಯ ಸರ್ಕಾರ ಸೂಚಿಸಿರುವ ನಿರ್ಬಂಧಗಳನ್ನು ಉಡುಪಿ ಜಿಲ್ಲೆಯ ನಾಗರೀಕರು ಕಡ್ಡಾಯವಾಗಿ ಪಾಲನೆ ಮಾಡುವಂತೆ ಹಾಗೂ ಈ ನಿರ್ಬಂಧಗಳನ್ನು ಉಲ್ಲಂಘಿಸುವವರ ವಿರುದ್ದ ಕಾನೂನು ರೀತಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದ್ದಾರೆ. ಅವರು ಮಂಗಳವಾರ, ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಜಿಲ್ಲೆಗೆ ವಿದೇಶದಿಂದ ಬಂದಿರುವ 900 ಜನರನ್ನು ಗುರುತಿಸಲಾಗಿದ್ದು, ಈ ಎಲ್ಲರ ಮನೆಗಳಿಗೆ ನೋಟೀಸ್ ಅಂಟಿಸಲಾಗಿದ್ದು, ಕಡ್ಡಾಯವಾಗಿ ಹೋಂ ಕ್ವಾರಂಟೈನ್ ಪಾಲಿಸಲು ಸೂಚಿಸಲಾಗಿದ್ದು, ಪ್ರತಿದಿನ ದಿನಕ್ಕೆ […]
ಉಜಿರೆಯಲ್ಲಿ ಆಲಿಕಲ್ಲು ಮಳೆ, ಪಶ್ಚಿಮ ಘಟ್ಟ ಪ್ರದೇಶದಲ್ಲೂ ಬಂತು ಗಾಳಿ ಮಳೆ
ಉಜಿರೆ: ಕೋರೋನಾ ಭಯದಿಂದ ಪ್ರತೀ ಊರು ತತ್ತರಿಸಿರುವ ಈ ಸಮಯದಲ್ಲಿ ಬೆಳ್ತಂಗಡಿ ತಾಲೂಕಿನ ಉಜಿರೆ ಸೇರಿದಂತೆ ಪಶ್ಚಿಮಘಟ್ಟ ಪ್ರದೇಶಗಳಾದ ಕಳಸ, ಕುದರೆಮುಖ,ಹೊರನಾಡು ಭಾಗಗಳಲ್ಲಿ ಗಾಳಿ ಮಳೆ ಸುರಿದಿದೆ. ಉಡುಪಿ ಜಿಲ್ಲೆಯಾದ್ಯಂತ ಬೆಳಗ್ಗಿನಿಂದಲೇ ಮೋಡದ ವಾತಾವರಣವಿತ್ತು.ಇದು ಈ ಬೇಸಿಗೆಯಲ್ಲಿ ಸುರಿದ ಎರಡನೆಯ ಮಳೆಯಾಗಿದೆ.
ಮಂಗಳೂರಿನಲ್ಲಿ ಮತ್ತೆ ನಾಲ್ವರಲ್ಲಿ ಕೊರೊನಾ ಸೋಂಕು ದೃಢ: ಸೋಂಕಿತರ ಸಂಖ್ಯೆ ಐದಕ್ಕೆ ಏರಿಕೆ
ಮಂಗಳೂರಿನಲ್ಲಿ ಮತ್ತೆ ನಾಲ್ವರಲ್ಲಿ ಕೊರೊನಾ ಸೋಂಕು ದೃಢ: ಸೋಂಕಿತರ ಸಂಖ್ಯೆ ಐದಕ್ಕೆ ಏರಿಕೆ ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ನಾಲ್ವರಲ್ಲಿ ಕೊರೊನಾ ಸೋಂಕು ಕಂಡುಬಂದಿದ್ದು, ಜಿಲ್ಲೆಯಲ್ಲಿ ಸೋಂಕಿತ ಸಂಖ್ಯೆ ಐದಕ್ಕೆ ಏರಿಕೆ ಆಗಿದೆ. ಸೋಂಕು ದೃಢಪಟ್ಟವರನ್ನು ಕೇರಳದ ರಾಜ್ಯದವರೆಂದು ಖಚಿತಗೊಂಡಿದೆ. ಈ ಸೋಂಕಿತರು ಎಲ್ಲೆಲ್ಲಿ ಓಡಾಡಿದ್ದಾರೆ. ಯಾರನ್ನು ಸಂಪರ್ಕಿಸಿದ್ದಾರೆ. ಹಾಗೆಯೇ ಅವರು ಪ್ರಯಾಣ ಮಾಡಿದ ಮಾಹಿತಿ ಲಭ್ಯವಾಗಬೇಕಿದೆ. ಕರ್ನಾಟಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 43ಕ್ಕೆ ಏರಿಕೆ ಆಗಿದೆ. ಇದು ರಾಜ್ಯದ ಜನತೆಯಲ್ಲಿ ಮತ್ತಷ್ಟು ಭೀತಿ […]