ಕುಂದಾಪುರ: ಜನರಿಗೆ ಮತ್ತೆ ಕರ್ಫ್ಯೂ ಭೀತಿ: ಅಗತ್ಯ ವಸ್ತು ಕೊಂಡುಕೊಳ್ಳಲು ಮುಗಿಬಿದ್ದ ಜನತೆ

ಕುಂದಾಪುರ: ಯಾವ ಕ್ಷಣದಲ್ಲಾದರೂ ಜಿಲ್ಲಾಡಳಿತ ಕರ್ಫ್ಯೂ ಆದೇಶ ಹೊರಡಿಸಬಹುದೆಂಬ ಭೀತಿಯಿಂದಾಗಿ ಸಾರ್ವಜನಿಕರು ಅಗತ್ಯವಸ್ತುಗಳನ್ನು ಕೊಂಡುಕೊಳ್ಳಲು ಮುಗಿಬೀಳುತ್ತಿರುವ ದೃಶ್ಯ ಕುಂದಾಪುರ ನಗರದಲ್ಲಿ ಸೋಮವಾರ ಸಂಜೆ ಕಂಡುಬಂದಿದೆ. ದೇಶದೆಲ್ಲೆಡೆ ವ್ಯಾಪಕವಾಗಿ ಹಬ್ಬುತ್ತಿರುವ ಕೊರೋನಾ ವೈರಸ್ ಅನ್ನು ತಡೆಗಟ್ಟಲು ಭಾನುವಾರ ಪ್ರಧಾನಿ ನರೇಂದ್ರ ಮೋದಿಯವರು ಕರೆಕೊಟ್ಟ ಜನತಾ ಕರ್ಫ್ಯೂಗೆ ಜೈ ಎಂದ ತಾಲೂಕಿನ ಜನತೆ ಇದೀಗ ಮತ್ತೆ ಕರ್ಫ್ಯೂ ವಿಧಿಸಬಹುದು ಎಂದು ಮುನ್ನೆಚ್ಚರಿಕೆಯಿಂದ ದಿನಸಿ ಸಾಮಾಗ್ರಿ, ತರಕಾರಿ, ಮೀನು ಸೇರಿದಂತೆ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲು ಮನೆಯಿಂದ ಸೋಮವಾರ ಸಂಜೆ ನಗರಕ್ಕೆ ಆಗಮಿಸಿದರು. […]

ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸಿದರೆ ಯಾವ್ ರೋಗಾನೂ ಬಾಧಿಸಲ್ಲ: ಇಮ್ಯುನಿಟಿ ಪವರ್ ಹೆಚ್ಚಿಸುವ ಸುಲಭ ಉಪಾಯ ಇಲ್ಲಿದೆ !

ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಂಡರೆ ಯಾವ ರೋಗವೂ ನಮಗೆ ಬಾಧಿಸಲ್ಲ, ಕೊರೋನಾ ಮಾತ್ರವಲ್ಲ ಆಗಾಗ ಕಡುವ ಶೀತ, ಜ್ವರ,ಕೆಮ್ಮು,ತಲೆನೋವು ಇವೆಲ್ಲಾ ನಮಗೆ ಬಂದರೂ ನಮ್ಮ ರೋಗ ನಿರೋಧಕ ಶಕ್ತಿ ಜಾಸ್ತಿ ಇದ್ದರೆ ನಮಗೆ ಯಾವ  ಸಮಸ್ಯೆಯೂ ಆಗಲ್ಲ.ರೋಗ ನಿರೋಧಕ ಶಕ್ತಿ ಹೆಚ್ಚಿಸೋದು ಹೇಗೆ ಎನ್ನುವ ಕುರಿತು ಕಾರ್ಕಳದ ವೈದ್ಯೆ ಡಾ.ಹರ್ಷಾ ಕಾಮತ್ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿ ನೀಡಿದ್ದಾರೆ. ವಿಡಿಯೋ ನೋಡಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಪಣ ತೊಡಿ.  

ರೈತ ಮಕ್ಕಳಿಗೆ ತೋಟಗಾರಿಕೆ ತರಬೇತಿ

ಉಡುಪಿ ಮಾ.23: ತೋಟಗಾರಿಕೆ ಇಲಾಖೆ ವತಿಯಿಂದ ರೈತರ ಮಕ್ಕಳಿಗೆ 10 ತಿಂಗಳ ತರಬೇತಿ ಕಾರ್ಯಕ್ರಮವನ್ನು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ, ತರಬೇತಿ ಪಡೆಯಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಉಡುಪಿ ಜಿಲ್ಲೆಯಿಂದ ಸಾಮಾನ್ಯ ವರ್ಗದ 6 ಹಾಗೂ ಪರಿಶಿಷ್ಟ ಜಾತಿಯ 1 ಒಟ್ಟು 7 ಅಭ್ಯರ್ಥಿಗಳ ಗುರಿ ಇದ್ದು, ಗುಂಪಿನಲ್ಲಿ 5 ಪುರುಷರಿಗೆ ಹಾಗೂ 2 ಮಹಿಳೆಯರಿಗೆ ಮೀಸಲಿರುತ್ತದೆ. ಮಹಿಳೆಯರಿಗಾಗಿ ಮುನಿರಾಬಾದ್ ತರಬೇತಿ ಕೇಂದ್ರ ಕೊಪ್ಪಳ, ಗದಗ ತರಬೇತಿ ಕೇಂದ್ರ ಹಾಗೂ ರಂಗಸಮುದ್ರ ತರಬೇತಿ ಕೇಂದ್ರ ಮೈಸೂರು […]

ಗ್ರಾಹಕರ-ಮಾಲಿಕರ ನಡುವೆ ಕನಿಷ್ಟ 6 ಅಡಿಗಳ ಅಂತರ ಕಡ್ಡಾಯ: ಜಿಲ್ಲಾಧಿಕಾರಿ

ಉಡುಪಿ ಮಾ.23: ಜಿಲ್ಲೆಯ ಇತ್ತೀಚಿನ ವಿದ್ಯಮಾನಗಳನ್ನು ಗಣನೆಗೆ ತೆಗೆದುಕೊಂಡು ಕೊರೋನಾ ವೈರಾಣುಗಳು ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಈ ಕೆಳಕಂಡ ಕಠಿಣ ಕ್ರಮಗಳನ್ನು ತೆಗೆದುಕೊಂಡು ಜಿಲ್ಲಾಧಿಕಾರಿ ಜಿ. ಜಗದೀಶ್ ಆದೇಶ ಹೊರಡಿಸಿರುತ್ತಾರೆ. ಮಾ. 21 ರ ಸಂಜೆ 4 ರಿಂದ ಅನ್ವಯವಾಗುವಂತೆ ಜಿಲ್ಲೆಯಲ್ಲಿ ಎಲ್ಲಾ ಬಾರ್‍ಗಳನ್ನು ಮುಚ್ಚಲು ಈಗಾಗಲೇ ಆದೇಶಿಸಲಾಗಿದೆ. ಮದ್ಯದ ಅಂಗಡಿ (ವೈನ್‍ಶಾಪ್) ಗಳು ತೆರೆದಿದ್ದು, ಅಲ್ಲಿ ಗ್ರಾಹಕರ- ಮಾಲಿಕರ ಮತ್ತು ಗ್ರಾಹಕರು-ಗ್ರಾಹಕರ ನಡುವೆ ಕನಿಷ್ಟ 6 ಅಡಿಗಳ ಅಂತರವನ್ನು ಕಡ್ಡಾಯವಾಗಿ ಕಾಯ್ದುಕೊಳ್ಳಲು ಕ್ರಮ ವಹಿಸಬೇಕು. ತಪ್ಪಿದಲ್ಲಿ […]

ಕೊರೊನಾ ಸೋಂಕು ಹರಡುವ ಭೀತಿ: ಉಡುಪಿ ನಗರದ ಅಂಗಡಿ ಮುಂಗಟ್ಟು ಮುಚ್ಚುವಂತೆ ಪೌರಾಯುಕ್ತರಿಂದ ಸೂಚನೆ

ಉಡುಪಿ: ಮಹಾಮಾರಿ ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ನಗರದ ಜನನಿಬಿಡ ಪ್ರದೇಶಗಳ ಅಂಗಡಿ ಮುಂಗಟ್ಟುಗಳನ್ನು ಉಡುಪಿ ನಗರಸಭೆಯ ಪೌರಾಯುಕ್ತರು ಹಾಗೂ ಅಧಿಕಾರಿಗಳು ಖುದ್ದಾಗಿ ಮುಚ್ಚಿಸಿದರು. ಕೊರೊನಾ ಸೋಂಕು ಹರಡುವ ಭೀತಿ ಇದ್ದು, ಈ ನಿಟ್ಟಿನಲ್ಲಿ ಯಾರು ಗುಂಪು ಗೂಡಬಾರದು ಎಂದು ಅಧಿಕಾರಿಗಳು ಮೈಕ್ ನಲ್ಲಿ ಘೋಷಣೆ ಮಾಡಿದರು. ಸಿಟಿ ಬಸ್ ನಿಲ್ದಾಣದಲ್ಲಿ ತೆರೆಯಲಾಗಿದ್ದ ಬಟ್ಟೆ, ಚಪ್ಪಲಿ ಅಂಗಡಿಗಳನ್ನು ಮುಚ್ಚುವಂತೆ ತಾಕೀತು ಮಾಡಿದರು. ಹೋಟೆಲ್ ಗಳಲ್ಲಿ ಆಹಾರಗಳನ್ನು ಪಾರ್ಸೆಲ್ ಮಾತ್ರ ನೀಡಬೇಕು ಎಂದು ಸೂಚನೆ ನೀಡಿದರು.