ಕಡಬ: ಅನಾರೋಗ್ಯದಿಂದ ಪ್ರತಿಭಾನ್ವಿತ ಯುವತಿ ಸಾವು
ಪುತ್ತೂರು: ಕಳೆದೆರಡು ವರ್ಷಗಳಿಂದ ಅನಾರೋಗ್ಯದಿಂದ ಬಳಲುತಿದ್ದ ಪ್ರತಿಭಾನ್ವಿತ ಯುವತಿ ವೀಕ್ಷಿತಾ(27) ಅವರು ಮಾ. 20 ರಂದು ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ. ಅನಾರೋಗ್ಯಕ್ಕೆ ತುತ್ತಾಗುವ ಮೊದಲು ಈಕೆ ಪ್ರತಿಷ್ಠಿತ ಇನ್ಪೋಸಿಸ್ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದು, ಆಮೇರಿಕಾ ಹಾಗೂ ಬೆಂಗಳೂರಿನಲ್ಲಿ ಉದ್ಯೋಗ ನಿರ್ವಹಿಸಿದ್ದರು. ಕಡಬ ಪಿಜಕ್ಕಳ ಕಲ್ಲರ್ಪೆ ನಿವಾಸಿ ಪುಟ್ಟಣ್ಣ ಗೌಡರ ಪುತ್ರಿಯಾದ ವೀಕ್ಷಿತಾ ರವರು ಇಂಜಿನಿಯರಿಂಗ್ ನಲ್ಲಿ ಪದವಿ ಪಡೆದಿದ್ದರು. ಬಳಿಕ ಇನ್ಫೋಸಿಸ್ ನಲ್ಲಿ ಉದ್ಯೋಗಿಯಾಗಿದ್ದರು. ಇದರ ಮಧ್ಯೆ ಎರಡು ವರ್ಷಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾದ ಈಕೆ ವಾಪಸು ಮನೆಗೆ […]
ಕೊರೊನಾ ಭೀತಿ: ಹೋಂ ಕ್ವಾರಂಟೈನ್ ಸೀಲ್ ಹಾಕಿಸಿಕೊಂಡವರು ಸುತ್ತಾಡಿದರೆ ಪೊಲೀಸ್ ವಶಕ್ಕೆ: ಕೋಟ
ಮಂಗಳೂರು: ಕೊರೊನಾ ತಡೆಗಟ್ಟಲು ಹೋಂ ಕ್ವಾರಂಟೈನ್ ಸೀಲ್ ಹಾಕಿಸಿಕೊಂಡವರು ಮನೆಯಲ್ಲಿ ಇರಬೇಕು. ಒಂದು ವೇಳೆ ಸುತ್ತಾಡುವುದು ಕಂಡುಬಂದರೆ ಪೊಲೀಸ್ ವಶಕ್ಕೆ ನೀಡಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಕೆ ನೀಡಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೋಂ ಕ್ವಾರಂಟೈನ್ ಸೀಲ್ ಹಾಕಿಸಿಕೊಂಡವರು ಗೃಹಬಂಧನದಲ್ಲಿದ್ದಂತೆ ಮನೆಯಲ್ಲಿ ಇರಬೇಕು. ಹೊರಗೆ ತಿರುಗಾಡಬಾರದು ಎಂದು ಸೂಚಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಿಂದ ಕೇರಳ ಸಂಪರ್ಕಿಸುವ 17 ರಸ್ತೆಗಳನ್ನು ಮುಚ್ಚಲಾಗಿದ್ದು, ತುರ್ತು ಅಗತ್ಯವಿದ್ದರೆ ಮಾತ್ರ ತಲಪಾಡಿ ರಸ್ತೆಯಲ್ಲಿ ಬಿಡಲಾಗುವುದು ಎಂದರು. ದಕ್ಷಿಣ […]
ಮಂಗಳೂರು: ಪ್ರೆಸ್ ಕ್ಲಬ್ ಪತ್ರಿಕಾಗೋಷ್ಠಿ ತಾತ್ಕಾಲಿಕ ಸ್ಥಗಿತ
ಮಂಗಳೂರು: ಕೊರೊನಾ ವೈರಸ್ ಕಾಯಿಲೆ (ಕೋವಿಡ್-19) ಆತಂಕದ ಹಿನ್ನೆಲೆಯಲ್ಲಿ ಮಂಗಳೂರು ಪ್ರೆಸ್ ಕ್ಲಬ್‌ನಿಂದ ಪತ್ರಿಕಾ ಭವನದಲ್ಲಿ ನಡೆಸುವ ಪತ್ರಿಕಾಗೋಷ್ಠಿಗಳನ್ನು ಮಾರ್ಚ್ 23ರಿಂದ ಮಾರ್ಚ್ 31ರ ತನಕ ರದ್ದುಪಡಿಸಲಾಗಿದೆ. ನೆರೆಯ ಕಾಸರಗೋಡು, ಕೊಡಗು ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಈಗಾಗಲೇ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಪ್ರೆಸ್‌ಕ್ಲಬ್ ಕೂಡ ಹಲವು ಮಂದಿ ಸೇರುವ ಜಾಗವಾದ ಕಾರಣ, ಪತ್ರಕರ್ತರ ಆರೋಗ್ಯದ ದೃಷ್ಠಿಯಿಂದ ಈ ಅನಿವಾರ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಮಾರ್ಚ್ 31ರ ನಂತರ ಪರಿಸ್ಥಿತಿ ಅವಲೋಕಿಸಿ, […]
ಶನಿವಾರ ಸಂತೆಗೆ ನಿಷೇಧ: ಜನರಿಲ್ಲದೇ ಬಣಗುಟ್ಟಿದ ಕುಂದಾಪುರದ ಎಪಿಎಂಸಿ ವಠಾರ ಜನತಾ ಕಫ್ರ್ಯೂ ಆತಂಕ: ಮೀನಂಗಡಿಗಳಲ್ಲಿ ಮೀನು ಖರೀದಿ ಬಲುಜೋರು!
ಶ್ರೀಕಾಂತ ಹೆಮ್ಮಾಡಿ, ಕುಂದಾಪುರ ಕುಂದಾಪುರ: ಕೊರೋನಾ ವೈರಸ್ ಹರಡದಂತೆ ಮುಂಜಾಗೃತ ಕ್ರಮವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಜನದಟ್ಟಣೆ ಉಂಟಾಗದಂತೆ ಜಿಲ್ಲಾಧಿಕಾರಿಯವರು ವಿಧಿಸಿರುವ 144(3) ಸೆಕ್ಷನ್‍ನಿಂದಾಗಿ ಶನಿವಾರ ನಡೆಯಬೇಕಿದ್ದ ಕುಂದಾಪುರ ಸಂತೆ ರದ್ದುಗೊಂಡಿದೆ. ಈ ಬಗ್ಗೆ ಎಪಿಎಂಸಿ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ ಬಾಳಿಕೆರೆ ನಾಲ್ಕು ದಿನ ಮುಂಚಿತವಾಗಿಯೇ ಎಲ್ಲಾ ವ್ಯಾಪರಸ್ಥರಿಗೂ ನೋಟೀಸ್ ನೀಡಿದ್ದರಿಂದ ಶನಿವಾರ ಸಂತೆ ನಡೆಯುವ ಕುಂದಾಪುರದ ಎಪಿಎಂಸಿ ವಠಾರ ವ್ಯಾಪಾರಸ್ಥರು-ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿತ್ತು. ಎಲ್ಲೆಲ್ಲೂ ಕೊರೋನಾ ವೈರಸ್ ಭೀತಿ ಎದುರಾಗುತ್ತಿದ್ದಂತೆಯೇ ಸಾರ್ವಜನಿಕ ಸ್ಥಳಗಳಲ್ಲಿ ಜನದಟ್ಟಣೆ ವಿರಳವಾಗಿದ್ದು, […]
ಕೊರೋನಾ ಪತ್ತೆಗೆ ಜಿಲ್ಲೆಯಲ್ಲಿ ಪ್ರಯೋಗಾಲಯ ಸ್ಥಾಪನೆ: ಶೋಭಾ ಕರಂದ್ಲಾಜೆ
ಉಡುಪಿ : ಉಡುಪಿ ಜಿಲ್ಲೆಯಲ್ಲಿ ಶಂಕಿತ ಕೊರೋನ ರೋಗಿಗಳಲ್ಲಿನ , ಕರೋನಾ ಪತ್ತೆ ಹಚ್ಚಲು , ಅವರು ಗಂಟಲಿನ ಮಾದರಿಯನ್ನು ಪರೀಕ್ಷಿಸಲು ಜಿಲ್ಲೆಯಲ್ಲಿಯೇ ಪ್ರಯೋಗಾಲಯ ತೆರೆಯುವ ಕುರಿತಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು. ಅವರು ಶನಿವಾರ, ಉಡುಪಿ ನಗರಸಭೆಯಿಂದ ಕೊರೋನಾ ನಿಯಂತ್ರಣ ಕುರಿತಂತೆ ಸುರಕ್ಷಿತವಾಗಿ ಕೈ ತೊಳೆಯುವ ಕುರಿತಂತೆ ಜನಜಗೃತಿ ಮೂಡಿಸಲು ಆರಂಭಿಸಿರುವ, ಸ್ಯಾನಿಟೈಸರ್ ಸಹಿತ ನಳ್ಳಿ ನೀರು ಸೌಲಭ್ಯ ಉದ್ಘಾಟಿಸಿ ಮಾತನಾಡಿದರು. ಉಡುಪಿಯ ಜಿಲ್ಲಾಸ್ಪತ್ರೆ […]