ಆರ್ ಟಿಓ ಕಛೇರಿಯಲ್ಲಿ ಕಲಿಕಾ ಲೈಸನ್ಸ್, ಚಾಲನಾ ಲೈಸನ್ಸ್ ಪರೀಕ್ಷೆ ರದ್ದು
ಉಡುಪಿ ಮಾ.20: ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು, ಬೆಂಗಳೂರು ಇವರ ಮಾರ್ಚ್ 19 ರ ಸುತ್ತೋಲೆಯಂತೆ, ಕೊರೊನಾ ವೈರಸ್ ಹರಡದಂತೆ ಮುಂಜಾಗೃತ ಕ್ರಮ ಜರುಗಿಸುವ ಸಂಬಂಧ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಹೆಚ್ಚಿನ ಜನದಟ್ಟಣೆಯನ್ನು ನಿರ್ಭಂಧಿಸಲು, ಉಡುಪಿ ಜಿಲ್ಲೆಯ ಸಾರಿಗೆ ಕಛೇರಿಯಲ್ಲಿ ಮಾರ್ಚ್ 20 ರಿಂದ ಮುಂದಿನ ಆದೇಶದವರೆಗೆ ಹೊಸದಾಗಿ ಕಲಿಕಾ ಲೈಸನ್ಸ್ ಮತ್ತು ಚಾಲನಾ ಲೈಸನ್ಸ್‍ಗಳಿಗಾಗಿ ಪರೀಕ್ಷೆಗೆ ಹಾಜರಾಗುವುದನ್ನು ಕಡ್ಡಾಯವಾಗಿ ನಿರ್ಭಂಧಿಸಲಾಗಿದೆ. ಏಪ್ರಿಲ್ 15 ರ ವರೆಗೆ ಸಿಂಧುತ್ವ ಹೊಂದಿರುವ ಕಲಿಕಾ ಲೈಸನ್ಸ್ ಹೊಂದಿರುವ ಅಭ್ಯರ್ಥಿಗಳಿಗೆ […]
ಕೊರೋನಾ : ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಅರಿವು ಮೂಡಿಸಿ- ಜಿಲ್ಲಾಧಿಕಾರಿ ಜಿ.ಜಗದೀಶ್
ಉಡುಪಿ : ಕೊರೋನಾ ವೈರಸ್ ಮತ್ತು ಅದರ ನಿಯಂತ್ರಣ ಕ್ರಮಗಳ ಬಗ್ಗೆ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಅರಿವು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಉಡುಪಿ ರೆಡ್ ಕ್ರಾಸ್ ಸಂಸ್ಥೆಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದರು. ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ರೆಡ್‍ಕ್ರಾಸ್ ಉಡುಪಿ ಜಿಲ್ಲಾ ಘಟಕ ವತಿಯಿಂದ ಕೊರೋನಾ ವೈರಸ್ ಜಾಗೃತಿ ಅಭಿಯಾನದ ಅಂಗವಾಗಿ ಸಿದ್ದಪಡಿಸಿರುವ, ಕರಪತ್ರ, ಮಾಸ್ಕ್ ಮತ್ತು ಸ್ಯಾನಿಟೈಸರ್ ಬಿಡುಗಡೆಗೊಳಿಸಿ ಮಾತನಾಡಿದರು. ಜಿಲ್ಲೆಯಲ್ಲಿ 158 ಗ್ರಾಮ ಪಂಚಾಯತ್‍ಗಳಲ್ಲಿ ಕೊರೋನಾ ನಿಯಂತ್ರಣ ಕ್ರಮಗಳ ಕುರಿತ ಕರಪತ್ರಗಳನ್ನು ಮನೆ […]
ಕೊರೋನಾ ಆತಂಕ: ಸೋಶಿಯಲ್ ಮೀಡಿಯಾ ಸುಳ್ಳು ಸುದ್ದಿಗಳಿಂದ ಬೆಚ್ಚಿ ಬೀಳುತ್ತಿರುವ ಜನತೆ: ಕುಂದಾಪುರದಲ್ಲಿ ವ್ಯಾಪಾರ ವಹಿವಾಟು ಸ್ಥಬ್ಧ
– ಶ್ರೀಕಾಂತ ಹೆಮ್ಮಾಡಿ, ಕುಂದಾಪುರ ಕುಂದಾಪುರ: ಚೀನಾದಲ್ಲಿ ಸಾವಿನ ಕರೆಗಂಟೆ ಭಾರಿಸಿದ ಕೊರೋನಾ ಮಹಾಮಾರಿ ಇದೀಗ ಇಡೀ ಜಿಲ್ಲೆಯನ್ನೇ ತಲ್ಲಣಗೊಳಿಸಿದೆ. ಕೊರೋನಾದಿಂದಾಗಿ ವ್ಯಾಪಾರ ವಹಿವಾಟು ಸಂಪೂರ್ಣ ನೆಲಕಚ್ಚಿ ಹೋದ ಬೆನ್ನಲ್ಲೇ ಕೆಲ ದುಷ್ಕರ್ಮಿಗಳು ಸೋಶೀಯಲ್ ಮೀಡಿಯಾಗಳಲ್ಲಿ ಹರಿದುಬಿಡುತ್ತಿರುವ ಕೆಲವು ಸುಳ್ಳು ಸುದ್ಧಿಗಳಿಂದಾಗಿ ಜನರು ಬೆಚ್ಚಿ ಬೀಳುತ್ತಿದ್ದಾರೆ. ಕ್ಷಣಕ್ಷಣಕ್ಕೂ ಹರಡುತ್ತಿರುವ ಗಾಳಿ ಸುದ್ಧಿಗಳಿಂದಾಗಿ ಸಾರ್ವಜನಿಕರು ಅಕ್ಷರಶಃ ಆತಂಕಕಕ್ಕೀಡಾಗಿದ್ದಾರೆ. ಪರಿಣಾಮವಾಗಿ ಸದಾ ಜನರಿಂದ ತುಂಬಿ ತುಳುಕುತ್ತಿದ್ದ ಕುಂದಾಪುರದ ಬಹುತೇಕ ಜನನಿಬಿಡ ಪ್ರದೇಶಗಳಲ್ಲಿ ಇದೀಗ ಸ್ವಯಂಘೋಷಿತ ತುರ್ತುಪರಿಸ್ಥಿತಿಯ ವಾತಾವರಣ ನಿರ್ಮಾಣವಾಗಿದೆ. ಕುಂದಾಪುರ […]
ಕೊರೊನಾ ಭೀತಿ: ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಮಾರ್ಚ್ 23 ರಿಂದ ತುರ್ತು ಚಿಕಿತ್ಸೆಗೆ ಮಾತ್ರ ಅವಕಾಶ
ಮಣಿಪಾಲ: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಆಡಳಿತ ಮಂಡಳಿಯು ಕೊರೊನಾ ವೈರಸ್ (ಕೋವಿಡ್ – 19) ಹರಡುವುದನ್ನು ತಡೆಗಟ್ಟುವ ಮುನ್ನೆಚ್ಚರಿಕೆಯ ಕ್ರಮವಾಗಿ ಮಾರ್ಚ್ 23ರಿಂದ ಅನ್ವಯವಾಗುವಂತೆ ವೈದ್ಯಕೀಯ ತುರ್ತು ಚಿಕಿತ್ಸೆ ಮತ್ತು ಎಮರ್ಜೆನ್ಸಿ ಚಿಕಿತ್ಸೆ ಮಾತ್ರ ನೀಡಲಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ತಿಳಿಸಿದ್ದಾರೆ ಆಸ್ಪತ್ರೆಗೆ ಬರುವ ಪ್ರತಿಯೊಬ್ಬರನ್ನು ಹೊರಭಾಗದಲ್ಲಿ ಹಾಕಿರುವ ತಾತ್ಕಾಲಿಕ ತಪಾಸಣಾ ಕೇಂದ್ರದಲ್ಲಿ ಪರೀಕ್ಷಿಸಿ ನಂತರ ಮುಂದಿನ ಚಿಕಿತ್ಸೆ ಅವಶ್ಯವಿದ್ದಲ್ಲಿ ಆಸ್ಪತ್ರೆಯ ಸಂಬಂಧಿಸಿದ ವಿಭಾಗದ ವ್ಯೆದ್ಯರಿಂದ ಚಿಕಿತ್ಸೆಗೆ ಅವಕಾಶ ನೀಡಲಾಗುವುದು. ಅತ್ಯವಶ್ಯ ಚಿಕಿತ್ಸೆಯ ಅಗತ್ಯ ಇರದೆ […]