ಮಲ್ಪೆ ಬಂದರಿನೊಳಗೆ 14 ವರ್ಷ ಕೆಳಗಿನ ಮಕ್ಕಳಿಗೆ ಪ್ರವೇಶವಿಲ್ಲ: ಅಪರ ಜಿಲ್ಲಾಧಿಕಾರಿ

ಉಡುಪಿ 19: ಮಲ್ಪೆ ಬಂದರು ಪ್ರದೇಶದಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳು ಮೀನು ಮಾರಾಟದಲ್ಲಿ ತೊಡಗಿರುವ ದೂರುಗಳು ಬಂದಿದ್ದು, ಈ ಹಿನ್ನೆಲೆಯಲ್ಲಿ ಮಲ್ಪೆ ಬಂದರಿನೊಳಗೆ 14 ವರ್ಷ ಕೆಳಗಿನ ಮಕ್ಕಳಿಗೆ ಯಾವುದೇ ಕಾರಣಕ್ಕೂ ಪ್ರವೇಶ ನೀಡಲಾಗುವುದಿಲ್ಲ ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ತಿಳಿಸಿದರು. ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಮಕ್ಕಳ ರಕ್ಷಣಾ ಘಟಕದ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಮಲ್ಪೆ ವ್ಯಾಪ್ತಿಯ ಹನುಮಂತನಗರ, ನಿಟ್ಟೂರು ಮತ್ತು ಕೊಳ ಮುಂತಾದ ಕಡೆಗಳಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳು  ಬೆಳಗ್ಗಿನ ಜಾವ […]

ಕೊರೋನಾ ವೈರಸ್ ಕುರಿತು ಎಲ್ಲಾ ಸಂಶಯ ನಿವಾರಣೆಗೆ ಸಹಾಯವಾಣಿ ಸಂಪರ್ಕಿಸಿ: ಡಾ. ಸುಧೀರ್ ಚಂದ್ರ ಸೂಡಾ

ಉಡುಪಿ ಮಾ.19: ಉಡುಪಿ ಜಿಲ್ಲೆಯಲ್ಲಿ ಕರೋನಾ ವೈರಸ್ ಕುರಿತು ನಾಗರೀಕರಲ್ಲಿರುವ ಸಂದೇಹಗಳನ್ನು ಪರಿಹರಿಸಲು, ರೋಗದ ಬಗ್ಗೆ ಮಾಹಿತಿ ನೀಡಲು, ಸಂಶಯಾಸ್ಪದ ರೋಗಿಗಳ ಚಲನಗಳ ಮಾಹಿತಿ ಸಂಗ್ರಹಿಸಲು, ಐಸೋಲೇಟೆಡ್ ಬೆಡ್‍ಗಳ ನಿರ್ವಹಣೆ ಕುರಿತಂತೆ ಸಮಗ್ರ ಮಾಹಿತಿ ಸಂಗ್ರಹಿಸಲು ಸಹಾಯವಾಣಿ ತೆರೆಯಲಾಗಿದ್ದು, ಸಹಾಯವಾಣಿಯ ಸಂ. 9663957222 ಅಥವಾ 9663950222 ಆಗಿದ್ದು, ಒಂದೇ ದಿನದಲ್ಲಿ 20 ಕ್ಕೂ ಅಧಿಕ ಕರೆಗಳನ್ನು ಸ್ವೀಕರಿಸಿದ್ದು, ಜಿಲ್ಲೆ ಮಾತ್ರವಲ್ಲದೇ ಹೊರ ರಾಜ್ಯದ ಸಾರ್ವಜನಿಕರೂ ಸಹ ಮಾಹಿತಿ ಕೋರಿ ಸಹಾಯವಾಣಿ ಸಂಪರ್ಕಿಸಿದ್ದಾರೆ. ಗುರುವಾರ ಜಿಲ್ಲಾ ಆರೋಗ್ಯ ಮತ್ತು […]

ಕೊರೊನಾ ಭೀತಿ: ಉಡುಪಿ ಪ್ರಾಂತ್ಯದ ಎಲ್ಲಾ ಚರ್ಚ್ ಗಳ ಬಲಿಪೂಜೆ ರದ್ದು

ಉಡುಪಿ: ಉಡುಪಿ ಪ್ರಾಂತ್ಯದ ಎಲ್ಲಾ ಚರ್ಚ್ ಗಳಲ್ಲಿ ನಿಗದಿತ ಸಮಯದಲ್ಲಿ ನಡೆಯುವ ಎಲ್ಲಾ  ಬಲಿಪೂಜೆಗಳನ್ನು ಮಾರ್ಚ್ 31 ರ ವರೆಗೆ ರದ್ದುಗೊಳಿಸಲಾಗಿದೆ ಎಂದು ಧರ್ಮಾಧ್ಯಕ್ಷ  ಜೆರಾಲ್ಡ್ ಐಸಾಕ್ ಲೋಬೊ ತಿಳಿಸಿದ್ದಾರೆ.

ಕಡಲ ತೀರದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಪ್ರತಿಮೆ ಪ್ರತ್ಯಕ್ಷ

ಕೇರಳ: ಕೇರಳದ ತ್ರಿಕನಪುರ ಕಡಲ ತೀರದಲ್ಲಿ ಇಂದು ಮುಂಜಾನೆ ಧ್ಯಾನ ಮಾಡುವ ಸ್ಥಿತಿಯಲ್ಲಿ ಇರುವ ಬ್ರಹ್ಮಶ್ರೀ ನಾರಾಯಣಗುರುಗಳ ಪ್ರತಿಮೆ ಪ್ರತ್ಯಕ್ಷವಾಗಿದ್ದು, ಹಲವು ವಿಸ್ಮಯಗಳಿಗೆ ಎಡೆಮಾಡಿಕೊಟ್ಟಿದೆ. ಕಡಲ ತೀರದಲ್ಲಿ ಸ್ವಲ್ಪ ಹೂತಿಕೊಂಡ ಸ್ಥಿತಿಯಲ್ಲಿರುವ ನಾರಾಯಣಗುರುಗಳ ಮೂರ್ತಿ ಓರ್ವ ಮನುಷ್ಯ ಧ್ಯಾನ ಮಾಡುವ ರೀತಿಯಲ್ಲಿದೆ.‌ ಎಷ್ಟೇ ಸಮುದ್ರದ ಅಲೆಗಳು ಬಡಿದರೂ ಮೂರ್ತಿ ಅಲುಗಾಡದೆ ಯಥಾಸ್ಥಿತಿಯಲ್ಲಿ ಇರುವುದು ಅಚ್ಚರಿಗೆ ಕಾರಣವಾಗಿದೆ. ಇದು ಭಗ್ನಗೊಂಡ ಪ್ರತಿಮೆಯೇ ಅಥವಾ ವಿಸರ್ಜನೆ ಮಾಡಿದ ಪ್ರತಿಮೆಯೆ ಗೊತ್ತಿಲ್ಲ. ಆದರೆ ಚೈತನ್ಯ ತುಂಬಿದ ಕಣ್ಣುಗಳು, ಪ್ರಕಾಶಮಾನವಾದ ಮುಖವನ್ನು ಹೊಂದಿರುವ […]