ಕಾರ್ಕಳ: ಕೋವಿಡ್-19 ಆರೋಗ್ಯ ಜಾಗೃತಿ ರಥಕ್ಕೆ ಶುಕ್ರವಾರ ಚಾಲನೆ
ಕಾರ್ಕಳ: ತಾಲೂಕು ಆರೋಗ್ಯಾಧಿಕಾರಿ ಕಛೇರಿ, ಕಾರ್ಕಳ ಇವರ ವತಿಯಿಂದ ಮಾರ್ಚ್ 20 ರಂದು ಬೆಳಗ್ಗೆ 10.30 ಕ್ಕೆ ಕಾರ್ಕಳ ತಹಶೀಲ್ದಾರರ ಕಛೇರಿ ಮುಂಭಾಗದಲ್ಲಿ ಕೋವಿಡ್-19 ಆರೋಗ್ಯ ಜಾಗೃತಿ ರಥಕ್ಕೆ ಚಾಲನೆ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಮಾಹೆ: ಮ್ಯಾನೇಜ್ಮೆಂಟ್ ಕಾಂಕ್ಲೇವ್ 2020 ಉದ್ಘಾಟನೆ
ಮಣಿಪಾಲ: ಮಾಹೆಯ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ವತಿಯಿಂದ ವಾರ್ಷಿಕ ವಿಚಾರ ಸಂಕಿರಣ ಮ್ಯಾನೇಜ್ಮೆಂಟ್ ಕಾಂಕ್ಲೇವ್ 2020 ಫೆ. 29 ರಂದು ನಡೆಯಿತು. ಇಲ್ಲಿ ವ್ಯಾಸಂಗ ಮಾಡಿದ ನಾಲ್ವರು ಹಳೆ ವಿದ್ಯಾರ್ಥಿಗಳಾದ ನೀವಿಯಸ್ ಸೊಲ್ಯೂಷನ್ಸ್ ಇದರ ಉಪಾಧ್ಯಕ್ಷರಾದ ಶಾಂಭವಿ ಭಂಡಾರ್ಕರ್, ಎಮ್ಫಸಿಸ್ ಇದರ ಮಾನವ ಸಂಪನ್ಮೂಲ ನಿರ್ವಹಣಾ ವಿಭಾಗದ ಅಧಿಕಾರಿ ಶಿಪ್ರ ರೈ, ಫೂಶಿಯಾ ಸ್ಥಾಪಕರಾದ ಡಾ. ಮೋಹಿತ್ ಭಾಟಿಯಾ ಮತ್ತು ವಾಟಿಕಾ ಇಂಟರ್ ನ್ಯಾಷನಲ್ ಟ್ರಾವೆಲ್ಸ್ ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಾಟಿಕಾ ಪೈ ಸಂಪನ್ಮೂಲ […]
ಉಡುಪಿ, ಪುತ್ತೂರು: ಡಿಪ್ಲೋಮಾ ವಿದ್ಯಾರ್ಥಿನಿ ನಾಪತ್ತೆ
ಉಡುಪಿ ಮಾ.19: ಉಡುಪಿ ತಾಲೂಕು ಪುತ್ತೂರು ಗ್ರಾಮದ ನಿಟ್ಟೂರು ರಾಜೀವ ನಗರದ ಬಾಡಿಗೆ ಮನೆಯ ನಿವಾಸಿ ಜಾನಕಿ ಮಹಾದೇವರ ಮಗಳು ಸಂಪದಾ (21) ಎಂಬುವವರು ಉಡುಪಿ ಪ್ರಸಾದ್ ನೇತ್ರಾಲಯದಲ್ಲಿ ಅಂತಿಮ ವರ್ಷದ ಡಿಪ್ಲೋಮಾ ವಿದ್ಯಾರ್ಥಿನಿಯಾಗಿದ್ದು, ಮಾರ್ಚ್ 14 ರಂದು ಬೆಳಗ್ಗೆ 11.30 ಕ್ಕೆ ಮನೆಯಿಂದ ಹೋದವಳು ಇದುವರೆಗೆ ಮನೆಗೆ ಬಾರದೇ ಕಾಣೆಯಾಗಿರುವುದಾಗಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 5 ಅಡಿ 5 ಇಂಚು ಎತ್ತರ, ಸಾಧಾರಣ ಮೈಕಟ್ಟು, ಬಿಳಿ ಮೈಬಣ್ಣ ಹೊಂದಿದ್ದು, ಕನ್ನಡ, ತುಳು […]
ಕೊರೊನಾ ವೈರಸ್ ಹಿನ್ನೆಲೆ ಉಡುಪಿ ರೈಲ್ವೆ ನಿಲ್ದಾಣದಲ್ಲಿ ತಪಾಸಣೆ
ಉಡುಪಿ ಮಾರ್ಚ್ 19: ಕೊರೊನಾ ವೈರಸ್ ಭೀತಿ ಹಿನ್ನೆಲೆ ರೈಲ್ವೆ ಇಲಾಖೆ ವತಿಯಿಂದ, ಉಡುಪಿ ರೈಲ್ವೆ ನಿಲ್ದಾಣದಲ್ಲಿ ಕೊರೊನಾ ತಪಾಸಣಾ ಮತ್ತು ಸಹಾಯವಾಣಿಯನ್ನು ತೆರೆಯಲಾಗಿದ್ದು, ಪ್ರಯಾಣಿಕರ ಪರೀಕ್ಷೆ ನಡೆಸಲಾಯಿತು.
ಕೊರೊನಾ ಸೋಂಕು ತಡೆಗಟ್ಟಲು ಜನಸಂದಣಿ ಸೇರುವ ಕಾರ್ಯಕ್ರಮಗಳ ನಿಷೇಧ: ಆನಂದ ಕಲ್ಲೋಳಿಕರ್
ಉಡುಪಿ ಮಾರ್ಚ್ 19: ಸರ್ಕಾರದ ಆದೇಶದಂತೆ, ಉಡುಪಿ ಜಿಲ್ಲಾಧಿಕಾರಿಗಳ ಮಾ.18 ರ ಆದೇಶದಲ್ಲಿ ತಿಳಿಸಿರುವಂತೆ, ಕೋವಿಡ್ (ಕೊರೊನಾ ವೈರಾಣು ಕಾಯಿಲೆ-2019) ನ ಸೋಂಕು ಹರಡುವುದನ್ನು ತಡೆಗಟ್ಟಲು, ಜನಸಂದಣಿ ಸೇರುವ ಕಾರ್ಯಗಳಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚು ಇರುವ ಕಾರಣದಿಂದ ಸಾರ್ವಜನಿಕರು ಕೆಲವು ವಿಶೇಷ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಬಗ್ಗೆ ಸೂಚಿಸಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಉಡುಪಿ ಜಿಲ್ಲೆಯಲ್ಲಿ ಜರುಗುವ ಎಲ್ಲಾ ಧಾರ್ಮಿಕ ಸಂಸ್ಥೆಗಳಿಗೆ ಸೇರಿದ ಜಾತ್ರೆಗಳು, ಸಭೆ, ಸಮಾರಂಭಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ವಾರದ ಸಂತೆ, ಜಾತ್ರೆ, […]