ಚಿಕಿತ್ಸೆ ನಿರಾಕರಿಸಿ ಆಸ್ಪತ್ರೆಯಿಂದ ಪರಾರಿಯಾಗಿದ್ದ ಕೊರೊನಾ ಶಂಕಿತ ವ್ಯಕ್ತಿ ಪತ್ತೆ: ಆತಂಕ ದೂರ
ಉಡುಪಿ: ಕುಂದಾಪುರ ತಾಲ್ಲೂಕಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನಿರಾಕರಿಸಿ ಪರಾರಿಯಾಗಿದ್ದ ಕೊರೊನಾ ಶಂಕಿತ ವ್ಯಕ್ತಿಯನ್ನು ಪೊಲೀಸರು ಪತ್ತೆಹಚ್ಚಿ ಮತ್ತೆ ವೈದ್ಯರ ಮುಂದೆ ಹಾಜರುಪಡಿಸಿದ್ದಾರೆ. ಆತನಿಗೆ ಕಡ್ಡಾಯ ಹೋಂ ಕ್ವಾರಂಟೈನ್ ವಿಧಿಸಲಾಗಿದ್ದು, ಸಾರ್ವಜನಿಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಸ್ಪಷ್ಟಪಡಿಸಿದ್ದಾರೆ.
ಸ್ವಯಂ ಜನತಾ ಕರ್ಪ್ಯೂ ವಿಧಿಸಿಕೊಳ್ಳಿ: ಭಾರತೀಯರಲ್ಲಿ ಪ್ರಧಾನಿ ಮೋದಿ ಮನವಿ
ನವದೆಹಲಿ: ಪ್ರಪಂಚದಾದ್ಯಂತ ಹುಟ್ಟಿಕೊಂಡಿರುವ ಕೊರೊನಾ ವೈರಸ್ ಭಾರತದಲ್ಲಿ ಹರಡುತ್ತಿದ್ದು, ಭಾರತದಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ವೈರಸ್ ನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ಇಂದು (ಗುರುವಾರ) ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕೊರೋನಾವೈರಸ್ ನಿಯಂತ್ರಣ ಹಾಗೂ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಾ.22ರಂದು ಭಾನುವಾರ ಸ್ವಯಂ ‘ಜನತಾ ಕರ್ಫ್ಯೂ’ ವಿಧಿಸಿಕೊಳ್ಳಬೇಕು ಎಂದು ಪ್ರಜೆಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಜನಸಾಮಾನ್ಯರು ಅಂದು ಬೆಳಗ್ಗೆ 7ರಿಂದ ರಾತ್ರಿ 9ರ ವರೆಗೆ ತಮ್ಮ ತಮ್ಮ ಮನೆಯಲ್ಲೇ ಇರಬೇಕು. ಯಾರೂ ಮನೆಯಿಂದ ಹೊರಗಡೆಗೆ ಬರಬೇಡಿ. […]
ಕೊಡಗಿನಲ್ಲಿ ಕೊರೊನ ಪಾಸಿಟಿವ್: ದ.ಕ.ಜಿಲ್ಲೆಯಲ್ಲಿ ಹೈ ಅಲರ್ಟ್
ಮಂಗಳೂರು: ಕೊಡಗಿನಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ದಕ್ಷಿಣ ಕನ್ನಡ-ಕೊಡಗು ಗಡಿಭಾಗದಲ್ಲಿ ಹೆಚ್ಚಿನ ತಪಾಸಣೆ ಮಾಡಲಾಗುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧು.ಬಿ. ರೂಪೇಶ್ ಹೇಳಿದ್ದಾರೆ. ಮಂಗಳೂರಲ್ಲಿರೋ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ಅವರು, ಸುಳ್ಯದಲ್ಲಿ ಸರ್ವೆಲೆನ್ಸ್ ನ್ನು ಹೆಚ್ಚುಗೊಳಿಸಿದ್ದೇವೆ. ಸುಳ್ಯ ಗಡಿಭಾಗದಲ್ಲಿ ನಿಗಾ ಇಡಲಾಗಿದೆ ಎಂದರು. ಮಂಗಳೂರು ಏರ್ ಪೋರ್ಟ್ ನಲ್ಲಿ ಸಹ ಹೈ ಅಲರ್ಟ್ ಇದೆ. ವಿದೇಶದಿಂದ ಬಂದವರನ್ನು ಎ, ಬಿ, ಸಿ ಕ್ಯಾಟಗರಿ ಎಂಬ ವಿಂಗಡಿಸಲಾಗಿದೆ. […]
ಕೊರೋನಾ ಮುನ್ನೆಚ್ಚರಿಕೆ: ಡಾ. ಟಿ ಎಂ ಎ ಪೈ ರೋಟರಿ ಆಸ್ಪತ್ರೆಯಿಂದ ಸಾರ್ವಜನಿಕರಿಗೆ ಮನವಿ
ಉಡುಪಿ/ಕಾರ್ಕಳ: ಡಾ. ಟಿ ಎಂ ಎ ಪೈ ಆಸ್ಪತ್ರೆ , ಉಡುಪಿ ಮತ್ತು ಡಾ. ಟಿ ಎಂ ಎ ಪೈ ರೋಟರಿ ಆಸ್ಪತ್ರೆಯ ಆಡಳಿತ ಮಂಡಳಿಯು ಕರೋನಾ ವೈರಸ್ (ಕೋವಿಡ್ – 19) ಹರಡುವುದನ್ನು ತಡೆಗಟ್ಟುವ ಮುನ್ನೆಚ್ಚರಿಕೆಯ ಕ್ರಮವಾಗಿ, ಎಲ್ಲಾ ಹೊರರೋಗಿ ವಿಭಾಗಗಳನ್ನು ಬೆಳಿಗ್ಗೆ 8.30ರಿಂದ ಮಧ್ಯಾಹ್ನ 1.00ರ ನಡುವೆ ಮಾತ್ರ ಕಾರ್ಯನಿರ್ವಹಿಸಲು ನಿರ್ಧರಿಸಿದೆ. ವೈದ್ಯಕೀಯ ತುರ್ತು / ಎಮರ್ಜೆನ್ಸಿ ಸೇವೆಗಳಿಗಾಗಿ ಮಾತ್ರ ಆಸ್ಪತ್ರೆಗೆ ಭೇಟಿ ನೀಡುವಂತೆ ಸಾರ್ವಜನಿಕರಿಗೆ ಈ ಮೂಲಕ ಸೂಚಿಸಲಾಗಿದೆ. ಒಳ ರೋಗಿಗಳೊಂದಿಗೆ ಒಬ್ಬರಿಗೆ […]
ಇಂಡಿಯನ್ ವೆಲ್ಡಿಂಗ್ ಸೊಸೈಟಿ ಮಂಗಳೂರು ವಿಭಾಗ ಉದ್ಘಾಟನೆ
ನಿಟ್ಟೆ: ಹೆಚ್ಚಿನ ಉದ್ಯೋಗಾವಕಾಶ ಸೃಷ್ಠಿಗೆ ಉಪಯುಕ್ತವಾಗುವ ವಿವಿಧ ಬಗೆಯ ತಂತ್ರಜ್ಞಾನದ ಆಯಾಮಗಳ ಬಗೆಗೆ ನಮ್ಮಲ್ಲಿ ಆಸಕ್ತಿ ಅಗತ್ಯ’ ಎಂದು ನಿಟ್ಟೆ ಸಮೂಹ ಸಂಸ್ಥೆಗಳ ಅಧ್ಯಕ್ಷ ಶ್ರೀ ಎನ್.ವಿನಯ ಹೆಗ್ಡೆ ಅಭಿಪ್ರಾಯಪಟ್ಟರು.ಅವರು ಇಂಡಿಯನ್ ವೆಲ್ಡಿಂಗ್ ಸೊಸೈಟಿಯ ಮಂಗಳೂರು ವಿಭಾಗವನ್ನು ಮಾ.೧೬ ರಂದು ಮಂಗಳೂರಿನ ನಿಟ್ಟೆ ಎಜುಕೇಶನ್ ಇಂಟರ್‌ನ್ಯಾಷನಲ್‌ನಲ್ಲಿ ಉದ್ಘಾಟಿಸಿ ಮಾತನಾಡಿದರು. ‘ಮೆಕ್ಯಾನಿಕಲ್ ವಿಭಾಗದಲ್ಲಿ ಇನ್ನೂ ಹೆಚ್ಚಿನ ಸಂಶೋಧನೆಗಳು ನಡೆದು ವೆಲ್ಡಿಂಗ್‌ನಂತಹ ತಂತ್ರಜ್ಞಾನವನ್ನು ಹೆಚ್ಚೆಚ್ಚು ನವೀನಗೊಳಿಸುವ ಕಾರ್ಯ ನಡೆಯಬೇಕು’ ಎಂದರು. ಉದ್ಘಾಟನಾ ಕಾರ್ಯಕ್ರಮದ ಅನಂತರ ‘ರೀಸೆಂಟ್ ಟ್ರೆಂಡ್ಸ್ ಇನ್ ವೆಲ್ಡಿಂಗ್’ […]