ಮಾ.21 ರಂದು ಮೂಡ್ಲಕಟ್ಟೆಯಲ್ಲಿ ಯಕ್ಷಗಾನ ಕಲಾವಿದರಿಗೆ ಯಕ್ಷ ಕುಸುಮ ಪ್ರಶಸ್ತಿ ಕಾರ್ಯಕ್ರಮ

ಕುಂದಾಪುರ:  ಕಾಡಿನಕೊಂಡ ಮೂಡ್ಲಕಟ್ಟೆಯಲ್ಲಿ ದಿನಕರ ಮತ್ತು ರಾಜಶ್ರೀ ಬಳ್ಕೂರು ಇವರ ಮನೆಯ ನೂತನಗೃಹ ಪ್ರವೇಶದ ಪ್ರಯುಕ್ತ  ಮಾ.21 ರಂದು ಶ್ರೀ ಬ್ರಹ್ಮಲಿಂಗೇಶ್ವರ ದಶಾವತಾರ ಯಕ್ಷಗಾನ ಮೇಳ ಮಾರಣಕಟ್ಟೆ ಇವರಿಂದ’ಮಾರಣಕಟ್ಟೆ ಕ್ಷೇತ್ರ ಮಹಾತ್ಮೆ’ಎಂಬ ಯಕ್ಷಗಾನ ನಡೆಯಲಿದೆ. ಇದೇ ಸಂದರ್ಭ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸೌಕೂರು ವಾದ್ಯವಾದಕ  ಗೋಪಾಲ ದೇವಾಡಿಗ ಮತ್ತು ಮಾರಣ ಕಟ್ಟೆಮೇಳದ ಹಿರಿಯ ಕಲಾವಿದರಾದ  ಕೊಳಾಳಿ ಕೃಷ್ಣ ಶೆಟ್ಟಿ, ನಂದೀಶ್ ಮೊಗವೀರಜನ್ನಾಡಿ, ಮೇಳದ ನೇಪಥ್ಯ ಕಲಾವಿದರಾದ ಮೊಳಳ್ಳಿ   ರಮೇಶ ಮರಾಠ, ಗೋಳಿಹೊಳೆ ರಾಮ ನಾಯ್ಕಇವರನ್ನು […]

ಕೊಲ್ಲೂರಿನಲ್ಲಿ ಕಳೆಗುಂದಿತು ಜಾತ್ರೆಯ ವೈಭವ: ಎಲ್ಲೆಲ್ಲೂ ಕೊರೋನಾ ಭಯದ್ದೇ ಹವಾ !

ಕುಂದಾಪುರ : ಬಹಳ ವಿಜೃಂಭಣೆಯಿಂದ ಮಂಗಳವಾರ ನಡೆಯಬೇಕಾಗಿದ್ದ ಇತಿಹಾಸ ಪ್ರಸಿದ್ದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವಾರ್ಷಿಕ ಬ್ರಹ್ಮ ರಥೋತ್ಸವವು ಕೊರೊನಾ ವೈರಸ್ ಭೀತಿಯಿಂದಾಗಿ ಸರಳವಾಗಿ ಸೀಮಿತ ಸಂಖ್ಯೆಯ ಉಪಸ್ಥಿತಿಯಲ್ಲಿ ಮಂಗಳವಾರ ಜರುಗಿತು. ತಂತ್ರಿ ನಿತ್ಯಾನಂದ ಅಡಿಗರು ಪ್ರಾಯಶ್ಚಿತ್ತ ವಿಧಿಗಳನ್ನು ಪೂರೈಸಿದ ಬಳಿಕ, ರಥೋತ್ಸವದ ಧಾರ್ಮಿಕ ವಿಧಿಗಳನ್ನು ಪ್ರಾರಂಭಿಸಲಾಯಿತು. ಮುಹೂರ್ತ ಬಲಿ, ಕ್ಷಿಪ್ರ ಬಲಿ ಹಾಗೂ ರಥ ಬಲಿಯ ಬಳಿಕ ೧.೦೫ ಕ್ಕೆ ಕೊಲ್ಲೂರಿನ ರಥೋತ್ಸವದ ಪರಂಪರೆಯಂತೆ ಜೋಡಿ (ಎರಡು) ಉತ್ಸವ ಮೂರ್ತಿಗಳನ್ನು ಬ್ರಹ್ಮ ರಥದಲ್ಲಿ ಕುಳ್ಳಿರಿಸಿ […]

ವಸತಿ ಶಾಲೆಗೆ ಅರ್ಜಿ ಸಲ್ಲಿಸಲು ಏಪ್ರಿಲ್ 3 ಕೊನೆಯ ದಿನ: ಅಪರ ಜಿಲ್ಲಾಧಿಕಾರಿ

ಉಡುಪಿ ಮಾ.17: ಕರ್ನಾಟಕ ರಾಜ್ಯ ಸರ್ಕಾರವು ಉಡುಪಿ ಜಿಲ್ಲೆಯಲ್ಲಿ ನಡೆಸುತ್ತಿರುವ ಆಂಗ್ಲ ಮಾಧ್ಯಮದ ಮೊರಾರ್ಜಿ ದೇಸಾಯಿ, ಡಾ. ಬಿ.ಆರ್. ಅಂಬೇಡ್ಕರ್, ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಗಳ ಆರನೇ ತರಗತಿ ಪ್ರವೇಶ ಪರೀಕ್ಷೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಏಪ್ರಿಲ್ 3 ಕೊನೆಯ ದಿನವಾಗಿರುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ತಿಳಿಸಿದ್ದಾರೆ. ಅವರು ಮಂಗಳವಾರ, ಜಿಲ್ಲಾಧಿಕಾರಿ ಕಚೇರಿಯಲ್ಲಿ, ಜಿಲ್ಲಾ ಮಟ್ಟದ ಅಧಿಕಾರಿಗಳ ಹಾಗೂ ವಸತಿ ಶಾಲೆಗಳ ಪ್ರಾಂಶುಪಾಲರ, ನಿಲಯ ಪಾಲಕರ, ಕಂಪ್ಯೂಟರ್ ಶಿಕ್ಷಕರ ಮತ್ತು ಪ್ರಥಮ […]

ಮಾರ್ಚ್ 17ರಿಂದ ಮುಂದಿನ ಆದೇಶದವರೆಗೆ ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ಎಲ್ಲ ಸೇವೆಗಳು ರದ್ದು

ಮಂಗಳೂರು: ದಕ್ಷಿಣ ಭಾರತದ ಪವಿತ್ರ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ದೇವರ ದರ್ಶನ ಹೊರತುಪಡಿಸಿ ಎಲ್ಲಾ ಸೇವೆಗಳನ್ನು ಮುಂದಿನ ಆದೇಶದವರೆಗೆ ರದ್ದು ಪಡಿಸಲಾಗಿದ್ದು, ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ತಂಗಲು ಅವಕಾಶ ಇರುವುದಿಲ್ಲ ಎಂದು ಆದೇಶ ಹೊರಡಿಸಲಾಗಿದೆ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಇವರ ಆದೇಶದಂತೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುವ ಉತ್ಸವಗಳಲ್ಲಿ ಸಾರ್ವಜನಿಕ ಭಕ್ತಾದಿಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ದೇವಸ್ಥಾನದಲ್ಲಿ ಕೇವಲ ದೇವರ ದರ್ಶನ ಹೊರತುಪಡಿಸಿ ಭಕ್ತಾದಿಗಳು ನೆರವೇರಿಸುವ ಎಲ್ಲಾ ರೀತಿಯ ಸೇವೆಗಳನ್ನು ಮುಂದಿನ […]

ಕೊರೋನ ಭೀತಿ: ಜನಸಂಚಾರ ವಿರಳ, ಬಸ್ಸುಗಳು ಖಾಲಿ ಖಾಲಿ

ಮಂಗಳೂರು: ವೈರಸ್ ಜಗತ್ತನ್ನು ತಲ್ಲಣಗೊಳಿಸಿದ ಮಹಾಮಾರಿ, ಕೊರೊನಾ ವೈರಸ್ ವಿರುದ್ದ ಎಲ್ಲರೂ ಜಾಗೃತರಾಗುತ್ತಿದ್ದಾರೆ. ಇದೇ ಭಯದಿಂದ ಬಸ್ ಗಳಲ್ಲಿ‌ಸಂಚಾರ ಮಾಡುವ ಪ್ರಯಾಣಿಕ ಸಂಖ್ಯೆ ಕೂಡ ಕಡಿಮೆ ಆಗಿದ್ದು, ಜನರು ಮನೆ ಬಿಟ್ಟು ಹೋಗುದಕ್ಕೂ ಭಯ ಪಡುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗವಾದ ಕೇರಳದ ಕಾಸರಗೋಡು ಮಂಗಳೂರು ಭಾಗದಿಂದ ದಿನಂಪ್ರತಿ ಸಾವಿರಾರು ಮಂದಿ ಪ್ರಯಾಣ ಬೆಳಸುತ್ತಾರೆ. ಆದ್ರೆ ಕೊರೊನಾದಿಂದಾಗಿ ಜಿಲ್ಲೆಯಿಂದ ಕಾಸರಗೋಡು ಕಡೆಗೆ ಹೋಗುವ ಪ್ರಯಾಣಿಕರ ಸಂಖ್ಯೆಯಲ್ಲಿ ಬಾರಿ ಪ್ರಮಾಣದ ಇಳಿಕೆ ಕಂಡಿದೆ.‌ ಕರ್ನಾಟಕಕ್ಕಿಂತಲೂ ಕೇರಳದಲ್ಲಿ ಹೆಚ್ಚು ಜನರಲ್ಲಿ […]