ಚಾಲಕ, ನಿರ್ವಾಹಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕನ ಜೀವ ಉಳಿಯಿತು
ಉಡುಪಿ: ದಾರಿ ಮಧ್ಯೆ ಬಸ್ ನಲ್ಲಿ ಮೂರ್ಛೆತಪ್ಪಿ ಬಿದ್ದ ಪ್ರಯಾಣಿಕನೊಬ್ಬನನ್ನು ಬಸ್ ಚಾಲಕ ಹಾಗೂ ನಿರ್ವಾಹಕ ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಪ್ರಾಣ ಉಳಿಸಿದ ಘಟನೆ ಇಂದು ದೊಡ್ಡಣಗುಡ್ಡೆ ಸಮೀಪ ನಡೆದಿದೆ. ಉಡುಪಿಯಿಂದ ಪೆರಂಪಳ್ಳಿಗೆ ಹೋಗುತ್ತಿದ್ದ ದೇವಿಪ್ರಸಾದ್ ಖಾಸಗಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಗೆ ಮಾರ್ಗ ಮಧ್ಯೆ ಪ್ರಜ್ಞೆ ತಪ್ಪಿದ್ದು, ಇದನ್ನು ಗಮಿಸಿದ ಚಾಲಕ ಸತೀಶ್ ಹಾಗೂ ನಿರ್ವಾಹಕ ಅಭಿಷೇಕ್ ಬಸ್ ಅನ್ನು ಎಲ್ಲೂ ನಿಲ್ಲಿಸದೆ ಅದೇ ದಾರಿಯಲ್ಲಿ ಬರುವ ದೊಡ್ಡಣಗುಡ್ಡೆಯ ಬಾಳಿಗಾ ಆಸ್ಪತ್ರೆಗೆ ಸೇರಿದ್ದಾರೆ. ಚಾಲಕ ಹಾಗೂ ನಿರ್ವಾಹಕನ ಸಮಯಪ್ರಜ್ಞೆಯಿಂದ […]
ಹಿರಿಯ ಸಾಹಿತಿ, ಪತ್ರಕರ್ತ ಪಾಟೀಲ ಪುಟ್ಟಪ್ಪ ವಿಧಿವಶ
ಉಡುಪಿ: ಹಿರಿಯ ಸಾಹಿತಿ, ಪತ್ರಕರ್ತ, ನಾಡೋಜ ಪಾಟೀಲ ಪುಟ್ಟಪ್ಪ (101) ಅವರು ವಯೋಸಹಜ ಅನಾರೋಗ್ಯದಿಂದಾಗಿ ಇಂದು ರಾತ್ರಿ ಹುಬ್ಬಳಿಯ ಕೀಮ್ಸ್ ಆಸ್ಪತ್ರೆಯಲ್ಲಿ ನಿಧನರಾದರು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಪಾಪು, ಕಳೆದು ಒಂದು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆಗೆ ಫಲಿಸದೆ ಇಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಪಾಪು ಅವರು ವಿದೇಶದಲ್ಲಿ ಪತ್ರಿಕೋದ್ಯಮ ಪದವಿ ಪಡೆದು, ಸ್ವಂತ ಪತ್ರಿಕೆಯನ್ನು ಆರಂಭಿಸಿದ್ದರು. ಹಲವಾರು ಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ.
ರಾಷ್ಟ್ರಮಟ್ಟದ ಕ್ರೀಡೆ: ಹೆಡ್‌ಕಾನ್‌ಸ್ಟೇಬಲ್ ಶಂಕರ ಪೂಜಾರಿಗೆ ಚಿನ್ನ ಪದಕ
ಉಡುಪಿ: ಗುಜರಾತಿನ ವಡೋದರಾದಲ್ಲಿ ಈಚೆಗೆ ನಡೆದ 3ನೇ ರಾಷ್ಟ್ರೀಯ ಮಾಸ್ಟರ್ಸ್ ಗೇಮ್ಸ್‌ನಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಽಸಿದ್ದ ಜಿಲ್ಲಾ ಪೊಲೀಸ್ ಸಶಸ್ತ್ರ ಮೀಸಲು ಪಡೆ ಹೆಡ್‌ಕಾನ್‌ಸ್ಟೇಬಲ್ ಶಂಕರ ಪೂಜಾರಿ ಬಿಜೂರು 4*100 ರಿಲೇ ಓಟದಲ್ಲಿ ಚಿನ್ನ ಹಾಗೂ 200 ಮೀ. ಓಟದಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ.
ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್‌ನ ಕೊರೊನಾ ಜನಜಾಗೃತಿ ಅಭಿಯಾನಕ್ಕೆ ಚಾಲನೆ
ಉಡುಪಿ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಉಡುಪಿ ವಲಯದ ವತಿಯಿಂದ ಹಮ್ಮಿಕೊಂಡ ಕೊರೊನಾ ಬಗ್ಗೆ ಜನಜಾಗೃತಿ ಮೂಡಿಸುವ ಕರಪತ್ರ ಹಂಚುವ ಅಭಿಯಾನಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಹಾಗೂ ಎಎಸ್ಪಿ ಕುಮಾರಚಂದ್ರ ಅವರಿಗೆ ಸೋಮವಾರ ಕರಪತ್ರ ಹಸ್ತಾಂತರಿಸುವ ಮೂಲಕ ಚಾಲನೆ ನೀಡಲಾಯಿತು. ಸಂಸ್ಥೆಯ ವತಿಯಿಂದ ಸುಮಾರು 5 ಸಾವಿರ ಕರಪತ್ರಗಳನ್ನು ನಗರದಾದ್ಯಂತ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಉಡುಪಿ ವಲಯ ಅಧ್ಯಕ್ಷ ಪ್ರಕಾಶ್ ಕೊಡಂಕೂರು, ಕಾರ್ಯದರ್ಶಿ ಸುಖೇಶ್ ಅಮೀನ್, ಗೌರವಾಧ್ಯಕ್ಷ ಶಿವ ಕೆ. ಅಮೀನ್, ಜಿಲ್ಲಾ […]
ಕೊರೊನಾ ಶಂಕೆ: ದುಬೈನಿಂದ ಬಂದ ಗರ್ಭಿಣಿ ಆಸ್ಪತ್ರೆಗೆ ದಾಖಲು
ಉಡುಪಿ: ಈಚೆಗೆ ದುಬೈನಿಂದ ಬಂದಿದ್ದ 26 ವರ್ಷದ ಗರ್ಭಿಣಿ ಮಹಿಳೆಯಲ್ಲಿ ಶಂಕಿತ ಕೊರೊನಾ ಲಕ್ಷಣ ಕಾಣಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಮಹಿಳೆಯನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾರ್ಚ್ 13ರಂದು ದುಬೈನಿಂದ ಉಡುಪಿಗೆ ಆಗಮಿಸಿದ್ದ ಮಹಿಳೆಯಲ್ಲಿ ಶೀತ ಮತ್ತು ಕೆಮ್ಮು ಕಾಣಿಸಿಕೊಂಡಿತ್ತು. ಮಹಿಳೆಯ ಗಂಟಲಿನ ದ್ರವವನ್ನು ಲ್ಯಾಬ್ ಗೆ ರವಾನಿಸಿದ್ದು, ವರದಿಯ ನಿರೀಕ್ಷೆಯಲ್ಲಿದ್ದೇವೆ ಎಂದು ಡಿಎಚ್ ಒ ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.