ಮಂಗಳೂರು: ಸಂಸದೆ ಸಾಧ್ವೀ‌ ಪ್ರಜ್ಞಾಸಿಂಗ್ ವಿವಿಧ ಕ್ಷೇತ್ರಗಳಿಗೆ ಭೇಟಿ

ಮಂಗಳೂರು: ವಿರಾಟ್ ಹಿಂದೂ ಸಮಾಜೋತ್ಸವದಲ್ಲಿ ಪಾಲ್ಗೊಳ್ಳಲು ಶನಿವಾರ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ ಮಧ್ಯಪ್ರದೇಶದ ಭೋಪಾಲ್ ನ ಸಂಸದೆ‌ ಸಾಧ್ವೀ ಪ್ರಜ್ಞಾಸಿಂಗ್ ‌ಹಿಂದೂ ಸಮಾಜೋತ್ಸವ ಮುಂದೂಡಿದ ಹಿನ್ನೆಲೆಯಲ್ಲಿ ಇಂದು ಜಿಲ್ಲೆಯ ಪುತ್ತೂರು ಲಕ್ಷ್ಮೀದೇವಿ ಬೆಟ್ಟದ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ಕೊರೋನ ವೈರಸ್ ಹರಡದಂತೆ ರಾಜ್ಯಸರಕಾರ ಸಾರ್ವಜನಿಕವಾಗಿ ಯಾವುದೇ ಸಭೆ – ಸಮಾರಂಭಗಳನ್ನು ನಡೆಸದಂತೆ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ನಾಳೆ ವಿಶ್ವ ಹಿಂದೂ ಪರಿಷತ್ ಭಜರಂಗ ದಳದ ವತಿಯಿಂದ ದಕ್ಷಿಣ ಕನ್ನಡದ ವಿಟ್ಲದ […]

ಅನಧಿಕೃತ ವ್ಯಕ್ತಿಗಳಿಂದ ಎಚ್ಚರದಿಂದಿರಿ: ಡಾ.ಸುಧೀರ್ ಚಂದ್ರ ಸೂಡಾ

ಉಡುಪಿ ಮಾ.15: ತಾವು ಆರೋಗ್ಯ ಇಲಾಖೆಯ ಸಿಬ್ಬಂದಿಯಾಗಿದ್ದು, ಆರೋಗ್ಯದ ಕುರಿತು ಮಾಹಿತಿ ಸಂಗ್ರಹಿಸಲು ಮನೆ ಮನೆಗೆ ಭೇಟಿ ನೀಡುತ್ತೇವೆಂದು ಬರುವ ಅನಧಿಕೃತ ವ್ಯಕ್ತಿಗಳಿಗೆ ಯಾವುದೇ ಮಾಹಿತಿ ನೀಡದಂತೆ ಹಾಗೂ ಮನೆಯೊಳಗೆ ಪ್ರವೇಶ ನೀಡದಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡಾ ತಿಳಿಸಿದ್ದಾರೆ. ಭಾನುವಾರ ಬನ್ನಂಜೆಯ ವಯೋವೃದ್ದ ದಂಪತಿಯ ಮನೆಗೆ ಈ ರೀತಿ ಬಂದ ಅಪರಿಚಿತರು ಮಾಹಿತಿ ಕೋರಿದ್ದು, ಸದ್ರಿ ವಯೋ ವೃಧ್ದ ದಂಪತಿ, ಆರೋಗ್ಯ ಇಲಾಖೆಯ ಗುರುತಿನ ಚೀಟಿ, ದಾಖಲಾತಿ ಕೇಳಿದ್ದು, […]

ಕುಂದಾಪುರ:ಬೋಟಿನಲ್ಲಿ ಮಲಗಿದಲ್ಲಿಯೇ ಕಾರ್ಮಿಕ ಸಾವು

ಕುಂದಾಪುರ: ಮೀನುಗಾರ ಕಾರ್ಮಿಕನೋರ್ವ ಬೋಟಿನಲ್ಲಿ ಮಲಗಿದಲ್ಲಿಯೇ ಸಾವನ್ನಪ್ಪಿದ ಘಟನೆ ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಶನಿವಾರ ನಡೆದಿದೆ. ಪಶ್ಚಿಮ ಬಂಗಾಳದ ನಿವಾಸಿ ಬಿನೋಯ್ ಬಿಶ್ವಾಸ್ (೩೫) ಮೃತಪಟ್ಟ ಕಾರ್ಮಿಕ. ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಅಗಸ್ತೇಶ್ವರ ಬೋಟಿನಲ್ಲಿ ಕೆಲಸ ಮಾಡಿಕೊಂಡಿದ್ದ ಈತ ವಿಪರೀತ ಕುಡಿತದ ಚಟ ಹೊಂದಿದ್ದನು. ಮೀನುಗಾರಿಕೆ ಇಲ್ಲದೆ ಕಳೆದ ಒಂದು ವಾರದಿಂದ ಬೋಟಿನಲ್ಲಿಯೇ ಇದ್ದ ಈತ ಶನಿವಾರ ಬೆಳಿಗ್ಗೆ ಬೋಟಿನ ಕ್ಯಾಬಿನ್ ಒಳಗೆ ಮಲಗಿದ್ದಲ್ಲೇ ಮೃತಪಟ್ಟಿದ್ದಾನೆ. ಹೃದಯಾಘಾತದಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಗಂಗೊಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು […]

ಶ್ರೀ ಅದಮಾರು ಮಠಕ್ಕೆ ಹೊರೆಕಾಣಿಕೆ:ಪೂರ್ವಭಾವಿ ಸಭೆ

ಉಡುಪಿ: ಶ್ರೀ ಕೃಷ್ಣ ಮಠ, ಪರ್ಯಾಯ ಶ್ರೀ ಅದಮಾರು ಮಠಕ್ಕೆ ಕಡೆಕಾರ್ ಮತ್ತು ಸುತ್ತಮುತ್ತಲಿನ ಗ್ರಾಮಗಳ  ಭಕ್ತಾದಿಗಳು  ಜೂ. 7 ರಂದು ಹೊರೆಕಾಣಿಕೆಯನ್ನು ಅರ್ಪಿಸಲಿದ್ದಾರೆ.ಆ ಪ್ರಯುಕ್ತ  ಕಡೆಕಾರ್ ಲಕ್ಷ್ಮೀನಾರಾಯಣ ಮಠದಲ್ಲಿ ಶ್ರೀ ಕೃಷ್ಣ ಸೇವಾಬಳಗದ ಗೋವಿಂದರಾಜ್, ವೈ.ಎನ್.ರಾಮಚಂದ್ರ ರಾವ್, ಪ್ರದೀಪ ರಾವ್ ಇವರ ನೇತೃತ್ವದಲ್ಲಿ ಪೂರ್ವಭಾವಿ ಸಭೆಯು ನಡೆಯಿತು.ಶ್ರೀಶ ಭಟ್ ಕಡೆಕಾರ್,ಜಯಪ್ರಕಾಶ್ ಕೆದ್ಲಾಯ,ದಿನೇಶ್ ಅಮೀನ್,ರಾಘವೇಂದ್ರ ಆಚಾರ್ಯ.ಮುರಳಿ ಕಡೆಕಾರ್ ಹಾಗೂ ಸುತ್ತ ಮುತ್ತಲಿನ ಸಂಘ ಸಂಸ್ಥೆಗಳ ಅಧ್ಯಕ್ಷರು,ಕಾರ್ಯದರ್ಶಿಗಳು,ಗ್ರಾಮಸ್ಥರು ಈ ಸಭೆಯಲ್ಲಿ ಭಾಗವಹಿಸಿದ್ದರು.