ಮಾ.11: ಪೆರ್ಡೂರು ಶ್ರೀ ಅನಂತ ಪದ್ಮನಾಭ ದೇವಸ್ಥಾನ: ಲಕ್ಷ ಕದಳೀ ಸಮರ್ಪಣೆ

ಪೆರ್ಡೂರು: ಕದಳೀಪ್ರಿಯ ಪೆರ್ಡೂರು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಮಾ.11ರಂದು ಬುಧವಾರ ಪೂರ್ವಾಹ್ನ ಉಡುಪಿ ಪಲಿಮಾರು ಮಠದ ಶ್ರೀ ವಿದ್ಯಾಧೀಶ ಶ್ರೀಪಾದರಿಂದ ಲಕ್ಷ ಕದಳೀ ಸಮರ್ಪಣೆ, ಶ್ರೀ ಪಲಿಮಾರು ಮಠದ ಪಟ್ಟದ ಶ್ರೀರಾಮ ದೇವರ ಪೂಜೆ ಹಾಗೂ ಸಹಸ್ರ ಕದಳೀಯಾಗವು ದೇವರ ಸನ್ನಿಧಿಯಲ್ಲಿ ನಡೆಯಲಿದೆ. ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಉಡುಪಿ:ಸಿಂಡಿಕೇಟ್‌ ಸರ್ಕಲ್‌–ಇಂದ್ರಾಳಿ ರಸ್ತೆಗೆ ಯು-ಟರ್ನ್ ನೀಡುವಂತೆ ಆಗ್ರಹ

ಉಡುಪಿ: ರಾಷ್ಟ್ರೀಯ ಹೆದ್ದಾರಿ 169 (ಎ)ರ ಮಣಿಪಾಲ ಸಿಂಡಿಕೇಟ್‌ ಸರ್ಕಲ್‌–ಇಂದ್ರಾಳಿ ಮಧ್ಯೆ ಬರುವ ಲಕ್ಷ್ಮೀಂದ್ರ ನಗರ ಹಾಗೂ ವಿಭುದಪ್ರಿಯ ನಗರದಲ್ಲಿ ಯು ಟರ್ನ್‌ ನೀಡುವಂತೆ ಆಗ್ರಹಿಸಿ ಲಕ್ಷ್ಮೀಂದ್ರ ನಗರ ನಾಗರಿಕ ಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಜಿ. ಜಗದೀಶ್‌ ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು. ಹೆದ್ದಾರಿಯ ಮಣಿಪಾಲ ಸಿಂಡಿಕೇಟ್‌ ಸರ್ಕಲ್‌ನಿಂದ ಇಂದ್ರಾಳಿಯವರೆಗೆ ಮೂರು ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ಯು ಟರ್ನ್‌ ನೀಡಿಲ್ಲ. ಇದರಿಂದ ಅರ್ಧ ಕಿ.ಮೀ ದೂರದ ಊರುಗಳನ್ನು ತಲುಪಬೇಕಾದರೆ ಸುಮಾರು ಮೂರು ಕಿ.ಮೀ.ಕ್ಕಿಂತಲೂ ಅಧಿಕ ಹಾದಿಯನ್ನು ಕ್ರಮಿಸಬೇಕಾದ […]

ರಥಬೀದಿ ಆಟೊ ಚಾಲಕರು–ಮಾಲೀಕರ ಸಂಘದ ಅಧ್ಯಕ್ಷರಾಗಿ ನಾಗೇಶ್‌ ಡಿ. ನಾಯಕ್‌ ಆಯ್ಕೆ

ಉಡುಪಿ: ಇಲ್ಲಿನ ರಥಬೀದಿ ಆಟೊ ಚಾಲಕರು ಹಾಗೂ ಮಾಲೀಕರ ಸಂಘದ 2020–21ನೇ ಸಾಲಿನ ನೂತನ ಅಧ್ಯಕ್ಷರಾಗಿ ನಾಗೇಶ್‌ ಡಿ. ನಾಯಕ್‌ ಆಯ್ಕೆಯಾಗಿದ್ದಾರೆ. ಈಚೆಗೆ ನಡೆದ ಸಂಘದ ಮಹಾಸಭೆಯಲ್ಲಿ ಅವರನ್ನು ಆಯ್ಕೆ ಮಾಡಲಾಗಿದೆ. ಇತರ ಪದಾಧಿಕಾರಿಗಳು: ಗೌರವಾಧ್ಯಕ್ಷ– ವೆಂಕಟೇಶ್‌ ಪೈ, ಉಪಾಧ್ಯಕ್ಷ–ಹರೀಶ್‌ ಡಿ. ಅಂಚನ್‌, ಸದಾಶಿವ ಪೂಜಾರಿ ದೆಂದೂರುಕಟ್ಟೆ, ಪ್ರಧಾನ ಕಾರ್ಯದರ್ಶಿ–ನಾಗರಾಜ ಕಾಮತ್‌ ಮರ್ಣೆ, ಜಂಟಿ ಕಾರ್ಯದರ್ಶಿ ರಾಘವೇಂದ್ರ ಬಿ.ಜಿ., ಕೋಶಾಧಿಕಾರಿ–ಸಂತೋಷ್‌ ಚಿಟ್ಪಾಡಿ, ಕ್ರೀಡಾ ಕಾರ್ಯದರ್ಶಿ–ಹರೀಶ್‌ ನಾಯ್ಕ್‌ ದೊಡ್ಡಣಗುಡ್ಡೆ ನೇಮಕಗೊಂಡಿದ್ದಾರೆ. ಗೌರವ ಸಲಹೆಗಾರರಾಗಿ ಶಂಕರ್‌ ಶೇರಿಗಾರ್‌, ಗೋವಿಂದ ಶೇರಿಗಾರ್‌, […]

ಆಳ್ವಾಸ್ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದಿಂದ ಬರಹ ಕೌಶಲ ಕಾರ್ಯಗಾರ

ಅಲಂಗಾರು: ಪತ್ರಿಕೋದ್ಯಮ ವಿದ್ಯಾರ್ಥಿಗಳು ತಮ್ಮ ಜ್ಞಾನದ ಪರಿಧಿಯನ್ನು ಒಂದೇ ವಿಷಯಕ್ಕೆ ಸೀಮಿತವಾಗಿಸದೇ ಎಲ್ಲ ವಿಚಾರಗಳನ್ನು ಅರಿಯುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಮೈಸೂರಿನ ಪ್ರಜಾವಾಣಿ ಪತ್ರಿಕೆಯ ಹಿರಿಯ ಉಪಸಂಪಾದಕ ಡಾ. ಗಣೇಶ್ ಅಮೀನ್‌ಗಡ ಹೇಳಿದರು. ಆಳ್ವಾಸ್ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದಿಂದ ಅಲಂಗಾರಿನ ಪಂಡಿತ್ ರೆಸಾರ್ಟ್‌ನಲ್ಲಿ ಆಯೋಜಿಸಲಾದ ಒಂದು ದಿನದ ಬರಹ ಕೌಶಲ ಕಾರ್ಯಗಾರದಲ್ಲಿ ಮಾತನಾಡಿದರು. ಸತತ ಓದು ಹಾಗೂ ಜಿಜ್ಞಾಸೆಯ ಮನೋಭಾವದಿಂದ ಬರವಣಿಗೆ ಸಾಧ್ಯ. ಪ್ರತಿಯೊಬ್ಬರೂ ತಮ್ಮದೇ ಶೈಲಿಯ ಬರವಣಿಗೆ ಬೆಳೆಸಿಕೊಳ್ಳಬೇಕು. ವಿವಿಧ ಪತ್ರಿಕೆಯ ಅಂಕಣಗಳಿಗೆ ತಮ್ಮ ಬರಹಗಳನ್ನು […]

ಕುಂದಾಪುರ: ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, :ಹೊರಾಂಗಣ ಕಾರ್ಯಕ್ರಮ

ತಲ್ಲೂರು : ತಲ್ಲೂರಿನ ನಾರಾಯಣ ವಿಶೇಷ ಶಾಲೆಯಲ್ಲಿ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರೇಂಜರ್‍ಸ್ ಘಟಕದ ಆಶ್ರಯದಲ್ಲಿ ಒಂದು ದಿನದ ಹೊರಾಂಗಣ ಕಾರ್ಯಕ್ರಮ ನಡೆಯಿತು. ರೇಂಜರ್‍ಸ್ ಘಟಕದ ಸುಮಾರು ೨೮ ವಿದ್ಯಾರ್ಥಿನಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಸಿಗಳನ್ನು ನೆಡುವುದರ ಮೂಲಕ ಶಾಲಾ ಕೈತೋಟ ನಿರ್ಮಾಣ, ಶಾಲಾ ಪರಿಸರದ ಸ್ವಚ್ಛತೆ ಮುಂತಾದ ಕಾರ್ಯಕ್ರಮಗಳಲ್ಲಿ ಶ್ರಮದಾನ ಮಾಡಿದರು ಹಾಗೂ ಅಲ್ಲಿನ ವಿಶೇಷ ಮಕ್ಕಳ ಕುರಿತಾದ ಮಾಹಿತಿಯನ್ನು ಪಡೆದರು. ಶಾಲೆಯ ಮ್ಯಾನೇಜಿಂಗ್ ಟ್ರಸ್ಟಿ ಸುರೇಶ್, ಗೌರವ ಶಿಕ್ಷಕಿ […]