ಮಾ.12ರಿಂದ ತೆಂಕಪೇಟೆಯ ಶ್ರೀಲಕ್ಷ್ಮೀ ವೆಂಕಟೇಶ ದೇವಸ್ಥಾನ ಸುತ್ತುಪೌಳಿ ಜೀರ್ಣೋದ್ಧಾರ, ಪುನಃ ಪ್ರತಿಷ್ಠೆ ಮಹೋತ್ಸವ
ಉಡುಪಿ: ತೆಂಕಪೇಟೆಯ ಶ್ರೀಲಕ್ಷ್ಮೀ ವೆಂಕಟೇಶ ದೇವಸ್ಥಾನದ ಸುತ್ತು ಪೌಳಿ ಜೀರ್ಣೋದ್ಧಾರ ಮತ್ತು ಪರಿವಾರ ದೇವರುಗಳ ಪುನಃ ಪ್ರತಿಷ್ಠಾ ಮಹೋತ್ಸವ ಮಾರ್ಚ್ 12ರಿಂದ 15ರ ವರೆಗೆ ನಡೆಯಲಿದೆ ಎಂದು ದೇಗುಲದ ಆಡಳಿತ ಮೊಕ್ತೇಸರ, ಸುತ್ತು ಪೌಳಿ ಜೀರ್ಣೋದ್ಧಾರ ಸಮಿತ ಕಾರ್ಯಾಧ್ಯಕ್ಷ ಪಿ. ವಿಠಲದಾಸ ಶೆಣೈ ತಿಳಿಸಿದರು. ಭಾನುವಾರ ದೇವಸ್ಥಾನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ. 12ರಂದು ಬೆಳಿಗ್ಗೆ 8 ಗಂಟೆಗೆ ಪ್ರಾರ್ಥನೆ, ಗುರುಗಣಪತಿ ಪೂಜನಾ, ಆದ್ಯ ಗಣಯಾಗ, ಕೂಪಶುದ್ಧಿ, ಮೃತ್ತಿಕಾ ಹರಣ, ಮಹಾಪೂಜೆ, ಬ್ರಾಹ್ಮಣ ಸಂತರ್ಪಣೆ ನೆರವೇರಲಿದ್ದು, […]
ಕರ್ನಾಟಕದ ಮಾಜಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ನಿಧನ
ನವದೆಹಲಿ: ಕರ್ನಾಟಕದ ಮಾಜಿ ರಾಜ್ಯಪಾಲ, ಮಾಜಿ ಕೇಂದ್ರ ಸಚಿವ ಹಂಸರಾಜ್ ಭಾರದ್ವಾಜ್ ಅವರು ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ರಾತ್ರಿ ನಿಧನರಾದರು. 2009ರಿಂದ 2014ರವರೆಗೆ ಕರ್ನಾಟಕದ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸಿದ್ದಾರೆ. ಪ್ರಣವ್ ಮುಖರ್ಜಿ ಅವರು ಟ್ವೀಟ್ ನಲ್ಲಿ ಬರೆದು “ಅನಾರೋಗ್ಯದಿಂದ ಬಳಲುತ್ತಿದ್ದ ಭಾರದ್ವಾಜ್ ಅವರು ನಿಧನರಾಗಿದ್ದು, ಅವರು ಕೇಂದ್ರ ಕಾನೂನು ಸಚಿವರಾಗಿ ದೇಶಕ್ಕೆ ಸಲ್ಲಿಸಿದ ಸೇವೆ ಸ್ಮರರ್ಣಾಹ ಎಂದು ಸಂತಾಪ ಸೂಚಿಸಿದ್ದು, ಅವರ ಕುಟುಂಬ ವರ್ಗಕ್ಕೆ ಹಾಗೂ ಸ್ನೇಹಿತರಿಗೆ ಸಾಂತ್ವನ ಹೇಳಿದ್ದಾರೆ. ಭಾರದ್ವಾಜ್ ಅವರ ಅಂತ್ಯಸಂಸ್ಕಾರವು ಸೋಮವಾರ […]
ಉಡುಪಿ: ಮಹಿಳಾ ಸಾಧಕರೊಂದಿಗೆ ಸಂವಾದ, ಸನ್ಮಾನ, ವಿದ್ಯಾರ್ಥಿ ವೇತನ ವಿತರಣೆ
ಉಡುಪಿ: ಸಮಾಜದಲ್ಲಿ ಇಂದು ಆತ್ಮೀಯತೆ, ಪ್ರೀತಿ, ಸಂಬಂಧಗಳು ಕಡಿಮೆ ಆಗುತ್ತಿದ್ದು, ಅವುಗಳನ್ನು ಬೆಸೆಯುವ ಕೆಲಸ ಮಾಡಬೇಕು ಎಂದು ಹಿರಿಯ ಸಾಹಿತಿ ವೈದೇಹಿ ಹೇಳಿದರು. ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ ಉಡುಪಿ ಮಳಿಗೆಯಲ್ಲಿ ಭಾನುವಾರ ಆಯೋಜಿಸಿದ್ದ ಮಹಿಳಾ ಸಾಧಕರೊಂದಿಗೆ ಸಂವಾದ, ಸನ್ಮಾನ ಮತ್ತು ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ವಿತರಣೆ ಸಮಾರಂಭದಲ್ಲಿ ಮಾತನಾಡಿದರು. ಒಳ್ಳೆಯ ಮನಸ್ಸಿದ್ದರೆ ದೇಶ, ಸಮಾಜ, ಮನೆ ಸೇರಿದಂತೆ ಎಲ್ಲರನ್ನು ಕೂಡ ಗೆಲ್ಲಬಹುದು. ಮನಸ್ಸು ಹಾಳಾದರೆ ಅದಕ್ಕಿಂತ ದೊಡ್ಡ ಪ್ರಳಯ ಬೇರೊಂದಿಲ್ಲ. […]
ಉಡುಪಿಯ ಲೆಕ್ಕಪರಿಶೋಧಕರ ಸಂಘ:ಮಹಿಳಾ ದಿನಾಚರಣೆ
ಉಡುಪಿ: ಮಹಿಳಾ ಸಬಲೀಕರಣ ಎನ್ನುವುದು ಹಿಂದಿಕ್ಕಿಂತಲೂ ಇಂದು ಹೆಚ್ಚು ವೇಗವನ್ನು ಪಡೆದುಕೊಂಡಿದ್ದು, ಎಲ್ಲ ಕ್ಷೇತ್ರದಲ್ಲಿಯೂ ಮಹಿಳೆಯರು ತಮ್ಮ ಸಾಧನೆಯನ್ನು ತೋರ್ಪಡಿಸುತ್ತಿದ್ದಾರೆ. ಆದರೆ ಇಷ್ಟೆಲ್ಲ ಬದಲಾವಣೆಗಳು ಆಗಿದ್ದರೂ ಸಹ ಭಾರತದಲ್ಲಿ ಓರ್ವ ಮಹಿಳೆ ರಾತ್ರಿ ವೇಳೆ ಸುರಕ್ಷಿತವಾಗಿ ಹೋಗುವಂತಹ ಪರಿಸ್ಥಿತಿ ಇನ್ನೂ ನಿರ್ಮಾಣ ಆಗಿಲ್ಲ ಎಂದು ವಕೀಲೆ ಹಾಗೂ ಮಾನವ ಹಕ್ಕುಗಳ ಹೋರಾಟಗಾರ್ತಿ ವಿಜಯಲಕ್ಷ್ಮೀ ಹೇಳಿದರು. ಭಾರತೀಯ ಲೆಕ್ಕಪರಿಶೋಧಕರ ಸಂಘದ ಉಡುಪಿ ಜಿಲ್ಲಾ ಶಾಖೆಯ ಆಶ್ರಯದಲ್ಲಿ ಉಡುಪಿಯ ಲೆಕ್ಕಪರಿಶೋಧಕರ ಸಂಘದ ಕಚೇರಿಯಲ್ಲಿ ಭಾನುವಾರ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ […]
ಬಂಗಾಡಿ ಕೊಲ್ಲಿ “ಸೂರ್ಯ-ಚಂದ್ರ” ಜೋಡುಕರೆ ಕಂಬಳ ಕೂಟ ಫಲಿತಾಂಶ
ಬೆಳ್ತಂಗಡಿ: ಮಾ.7ರಂದು ಬೆಳ್ತಂಗಡಿಯ ಬಂಗಾಡಿ ಕೊಲ್ಲಿಯಲ್ಲಿ ರಂಜನ್ ಜಿ. ಗೌಡ ಅವರ ನೇತೃತ್ವದಲ್ಲಿ ನಡೆದ 23’ನೇ ವರ್ಷದ “ಸೂರ್ಯ-ಚಂದ್ರ” ಜೋಡುಕರೆ ಬಯಲು ಕಂಬಳ ಕೂಟದ ಫಲಿತಾಂಶ ಹೀಗಿದೆ. ಕೂಟದಲ್ಲಿ ಭಾಗವಹಿಸಿದ ಒಟ್ಟು ಕೋಣಗಳ ಸಂಖ್ಯೆ: 150 ಜೊತೆ ನೇಗಿಲು ಅತೀ ಕಿರಿಯ: 62 ಜೊತೆ ನೇಗಿಲು ಕಿರಿಯ: 44 ಜೊತೆ ಹಗ್ಗ ಕಿರಿಯ: 09 ಜೊತೆ ನೇಗಿಲು ಹಿರಿಯ: 22 ಜೊತೆ ಹಗ್ಗ ಹಿರಿಯ: 06 ಜೊತೆ ಅಡ್ಡಹಲಗೆ: […]