ಉಡುಪಿಯಲ್ಲಿ ಶಂಕಿತ ಕೊರೊನಾ ಪ್ರಕರಣ ಪತ್ತೆ: ವಿದೇಶದಿಂದ ಬಂದ ಕಾರ್ಕಳದ ವ್ಯಕ್ತಿಯಲ್ಲಿ ಕೊರೊನಾ ಲಕ್ಷಣ

ಉಡುಪಿ: ಜಗತ್ತಿನಾದ್ಯಂತ ಭಯಾನಕತೆ ಸೃಷ್ಟಿಸಿದ ಕೊರೊನಾ ಸೋಂಕಿನ ಭೀತಿ ಇದೀಗ ಉಡುಪಿಯಲ್ಲೂ ಆತಂಕ ಉಂಟು ಮಾಡಿದೆ. ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಶಂಕಿತ ಕೊರೊನಾ ಪ್ರಕರಣ ದಾಖಲಾಗಿದೆ. ಈಚೆಗೆ ವಿದೇಶದಿಂದ ಬಂದಿದ್ದ ಕಾರ್ಕಳ ಮುನಿಯಾಲು ಗ್ರಾಮದ ವ್ಯಕ್ತಿಯೊಬ್ಬರಲ್ಲಿ ಕೊರೊನಾ ಲಕ್ಷಣಗಳು ಕಂಡುಬಂದಿದ್ದು, ಈ ಹಿನ್ನೆಲೆಯಲ್ಲಿ ವ್ಯಕ್ತಿಗೆ ಅಜ್ಜರಕಾಡಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ವಿಶೇಷ ಕೊಠಡಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶೀತ, ಜ್ವರದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ನಿಗಾ ವಹಿಸಿದ್ದು, ವ್ಯಕ್ತಿಯ ಮಾದರಿಯನ್ನು ಬೆಂಗಳೂರಿನ ಲ್ಯಾಬ್ […]

ನಿಟ್ಟೆ ತಾಂತ್ರಿಕ ಕಾಲೇಜಿಗೆ ಕೊ-ಕೊ ದಲ್ಲಿ ದ್ವಿತೀಯ ಸ್ಥಾನ

ನಿಟ್ಟೆ: ಮಂಗಳೂರಿನ ಶ್ರೀನಿವಾಸ ತಾಂತ್ರಿಕ ಕಾಲೇಜಿನಲ್ಲಿ ನಡೆದ ವಿಟಿಯು ಅಂತರ್‌ಕಾಲೇಜು ಮಂಗಳೂರು ಝೋನ್ ಕೊ-ಕೊ ಪಂದ್ಯಾಟದಲ್ಲಿ ನಿಟ್ಟೆ ತಾಂತ್ರಿಕ ಕಾಲೇಜಿನ ತಂಡವು ದ್ವಿತೀಯ ಬಹುಮಾನ ಪಡೆದುಕೊಂಡಿದೆ

ಕುಂದಾಪುರ: ನೆರೆಹೊರೆ ಯುವ ಸಂಸತ್ತು ಕಾರ್ಯಕ್ರಮ

ಕುಂದಾಪುರ: ಪರಿಸರ – ಜೀವಜಲ ರಕ್ಷಣೆ, ಸಾರ್ವಜನಿಕ ಸಂಪತ್ತಿನ ರಕ್ಷಣೆ, ರಾಷ್ಟ್ರ ಧ್ವಜ, ಗೀತೆ ಗೌರವ ನೀಡುವುದು ಎಲ್ಲವೂ ನಿಜವಾದ ರಾಷ್ಟ್ರ ನಿರ್ಮಾಣದ ಕಾರ್ಯ ಎಂದು ನಿವೃತ್ತ ಯೋಧ ಬೈಂದೂರು ಚಂದ್ರಶೇಖರ ನಾವಡ ಹೇಳಿದರು. ಅವರು ನೆಹರು ಯುವ ಕೇಂದ್ರ ಉಡುಪಿ ಹಾಗೂ ಡಾ. ಬಿ. ಆರ್. ಅಂಬೇಡ್ಕರ್ ಮಹಿಳಾ ಸಂಘ ರಿ. ಬೈಂದೂರು ಆಶ್ರಯದಲ್ಲಿ ಬುಧವಾರ ಬೈಂದೂರಿನ ಶ್ರೀ ರಾಜರಾಜೇಶ್ವರ ಸಭಾಭವನದಲ್ಲಿ ಆಯೋಜಿಸಿದ್ದ ನೆರೆಹೊರೆ ಯುವ ಸಂಸತ್ತು ಕಾರ್ಯಕ್ರಮದಲ್ಲಿ ಯುವ ಜನತೆ ಮತ್ತು ರಾಷ್ಟ್ರನಿರ್ಮಾಣ ಎಂಬ […]

ನನ್ ಮನಿಗ್ ಕರ್ಕಂಡ್ ಹೊಯ್ನಿ ಅಮ್ಮ: ಮಗುವಿನಂತೆ ಅತ್ತ ರಾಘವೇಂದ್ರ ಗಾಣಿಗ

ಕುಂದಾಪುರ: ಇಲ್ಲಿನ ಮಿನಿ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿ ನ್ಯಾಯಾಂಗ ಬಂಧನದಲ್ಲಿದ್ದ ರಾಘವೇಂದ್ರ ಗಾಣಿಗನನ್ನು ಬುಧವಾರ ಬೆಳಿಗ್ಗೆ ಕುಂದಾಪುರ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆತನನನ್ನು ಜಿಲ್ಲಾ ಸರ್ಜನ್ ನಿಗಾಕ್ಕೆ ಹಸ್ತಾಂತರಿಸಿದೆ. ಪಾಕ್ ಪರ ಘೋಷಣೆ ಕೂಗಿದ ಕೋಡಿ ನಿವಾಸಿ ರಾಘವೇಂದ್ರ ಗಾಣಿಗನಿಗೆ ಯಾರದ್ದಾದರೂ ಪ್ರೇರಣೆ ಇದೆಯೇ ಎಂಬಿತ್ಯಾದಿ ವಿಚಾರದ ಕುರಿತು ಹೆಚ್ಚಿನ ತನಿಖೆ ನಡೆಸಲು ಪೊಲೀಸ್ ಕಸ್ಟಡಿಗೆ ನೀಡುವಂತೆ ಕೋರಿದ್ದರು. ಆದರೆ ನ್ಯಾಯಾಲಯ ಆತನ ಆರೋಗ್ಯದ ಸ್ಥಿತಿಯನ್ನು ಪರಿಗಣಿಸಿ ಆರೋಪಿ ರಾಘವೇಂದ್ರ ಗಾಣಿಗನನ್ನು ಮಾರ್ಚ್ […]

ಪುಣ್ಯ.. ಔಟ್ ಆಫ್ ಸಿಲೇಬಸ್ ಯಾವ್ದೂ ಕೊಡ್ಲಿಲ್ಲ… ಎಕ್ಸಾಮ್ ಬರೆದು ಬಂದ ಮಕ್ಕಳ ಸಂಭ್ರಮ!

– ಶ್ರೀಕಾಂತ ಹೆಮ್ಮಾಡಿ ಕುಂದಾಪುರ: ಪರೀಕ್ಷಾ ಸಮಯ ಮುಗಿಯುತ್ತಿದ್ದಂತೆ ಕಾಲೇಜು ಕಾಂಪೌಂಡ್ ಹೊರಗೆ ನಿಂತು ಮಕ್ಕಳ ಬರುವಿಕೆಗಾಗಿ ಕಾದು ಸುಸ್ತಾದ ಪೋಷಕರು.. ಪರೀಕ್ಷೆ ಮುಗಿಸಿ ಬಂದ ಎಲ್ಲಾ ವಿದ್ಯಾರ್ಥಿಗಳ ಮೊಗದಲ್ಲೂ ಮಂದಹಾಸ.. ಪ್ರಶ್ನೆ ಪತ್ರಿಕೆ ಹಿಡಿದು ಗುಂಪುಗುಂಪಾಗಿ ವಿಶ್ಲೇಷಣೆಯಲ್ಲಿ ತೊಡಗಿಕೊಂಡಿರುವ ವಿದ್ಯಾರ್ಥಿಗಳ ತಂಡ.. ಜೊತೆಗೆ ತಮ್ಮ ಶಿಕ್ಷಕಿಯ ಬಳಿ ಕೇಳಿ ಅಂಕಗಳನ್ನು ಖಚಿತಪಡಸಿಕೊಳ್ಳುತ್ತಿರುವ ದೃಶ್ಯ..…ಇವೆಲ್ಲವೂ ಒಂದೆಡೆ ಕಂಡುಬಂದದ್ದು ಇಲ್ಲಿನ ಬೋರ್ಡ್ ಹೈಸ್ಕೂಲು ಆವರಣದಲ್ಲಿ.. ಬುಧವಾರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಎದುರಿಸಿ ಮಧ್ಯಾಹ್ನ ಇಲ್ಲಿನ ಜೂನಿಯರ್ ಕಾಲೇಜು […]