9ಲಕ್ಷ ಮೆಟ್ರಿಕ್ ಟನ್ ಮರಳು ತೆರವಿಗೆ ಕೆಸಿಎಂಝಡ್ ಅನುಮೋದನೆ: ರಘುಪತಿ ಭಟ್

ಉಡುಪಿ: ಜಿಲ್ಲೆಯ ಸಿಆರ್‌ಝಡ್ ವ್ಯಾಪ್ತಿಯ ನದಿಗಳಲ್ಲಿ ಗುರುತಿಸಲಾದ 9ಲಕ್ಷ ಮೆಟ್ರಿಕ್‌ಟನ್ ಮರಳು ತೆರವುಗೊಳಿಸಲು ರಾಜ್ಯ ಕರಾವಳಿ ನಿಯಂತ್ರಣ ವಲಯ ಪ್ರಾಧಿಕಾರ (ಕೆಸಿಎಂಝಡ್)ದಿಂದ ಅನುಮೋದನೆ ದೊರೆತಿದ್ದು, ಇನ್ನು ಎರಡ್ಮೂರು ದಿನಗಳೊಳಗೆ ಡಿಸಿ ಅಧ್ಯಕ್ಷತೆಯ 7 ಮಂದಿಯ ಜಿಲ್ಲಾ ಮರಳು ಸಮಿತಿ 171 ಪರವಾನಗಿದಾರರಿಗೆ ಮರಳು ದಿಬ್ಬ ತೆರವು ಮಾಡಲು ಪರವಾನಗಿ ನೀಡಲಿದೆ. ಆ ಬಳಿಕ ಆ್ಯಪ್ ಮೂಲಕವೇ ಮರಳು ವಿತರಿಸುವ ಕಾರ್ಯ ನಡೆಯಲಿದೆ ಎಂದು ಉಡುಪಿ ಶಾಸಕ ಕೆ. ರಘುಪತಿ ಭಟ್ ಹೇಳಿದರು. ಉಡುಪಿ ತಾ.ಪಂ. ಸಭಾಂಗಣದಲ್ಲಿ ಸೋಮವಾರ […]
ಡೊನಾಲ್ಡ್ ಟ್ರಂಪ್ ಭಾರತ ಪ್ರವಾಸ: ಅಮೇರಿಕಾ-ಭಾರತ ಭಾಂದವ್ಯ ಗಟ್ಟಿ: ನಳಿನ್

ಉಡುಪಿ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತ ಪ್ರವಾಸದಿಂದ ಅಮೆರಿಕಾ ಹಾಗೂ ಭಾರತದ ಬಾಂಧವ್ಯ ಇನ್ನಷ್ಟು ಗಟ್ಟಿಯಾಗುತ್ತದೆ. ಈ ಭೇಟಿಯ ಮೂಲಕ ಭಾರತಕ್ಕೆ ಅಮೆರಿಕಾದಿಂದ ಎಲ್ಲ ರೀತಿಯ ನೆರವು ಸಿಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು. ಸೋಮವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಇಡೀ ಜಗತ್ತು ಭಾರತದ ಕಡೆಗೆ ನೋಡುತ್ತಿದೆ. ಪ್ರಧಾನಿ ಮೋದಿ ಭಾರತೀಯ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸುವ ಕೆಲಸ ಮಾಡಿದ್ದಾರೆ ಎಂದರು. ವಿಪಕ್ಷಗಳು ವಿರೋಧ ಮಾಡಬೇಕೆಂಬ ಕಾರಣಕ್ಕೆ ವಿರೋಧ […]