ಉಡುಪಿ: ಶ್ರೀಅನಂತೇಶ್ವರ ದೇವರ ವಾರ್ಷಿಕ ರಥೋತ್ಸವ
ಉಡುಪಿ: ಶ್ರೀಅನಂತೇಶ್ವರ ದೇವರ ವಾರ್ಷಿಕ ರಥೋತ್ಸವವು ಪರ್ಯಾಯ ಅದಮಾರು ಶ್ರೀಈಶಪ್ರಿಯತೀರ್ಥ ಶ್ರೀಪಾದರು ಮತ್ತು ಪುತ್ತಿಗೆ ಮಠಾಧೀಶರಾದ ಶ್ರೀಸುಗುಣೇಂದ್ರ ತೀರ್ಥ ಶ್ರೀಪಾದರು ರಥವನ್ನು ಎಳೆಯುವದರೊಂದಿಗೆ ಅವರ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ನಡೆಯಿತು.
ಯಕ್ಷೋತ್ಸವ- ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಿಗೆ ಪ್ರಥಮ ಸ್ಥಾನ
ಮೂಡುಬಿದಿರೆ: ಮಂಗಳೂರಿನ ಎಸ್.ಡಿ.ಎಮ್ ಕಾನೂನು ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರದಲ್ಲಿ ನಡೆದ ೨೯ನೇ ವರುಷದ ಯಕ್ಷೋತ್ಸವ-೨೦೨೦, ಅಂತರ್ ಕಾಲೇಜು ತೆಂಕುತಿಟ್ಟು ಯಕ್ಷಗಾನ ಸ್ಫರ್ಧೆಯಲ್ಲ್ಲಿ ಮೂಡುಬಿದರೆಯ ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಆರನೇ ಭಾರಿಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡರು. ತರಣಿಸೇನ ಕಾಳಗ ಪ್ರಸಂಗದಲ್ಲಿ ತರಣಿಸೇನ ಪಾತ್ರದಾರಿ ಶಬರೀಶ್ ಆಚಾರ್ಯಗೆ ಸಮಗ್ರ ವೈಯಕ್ತಿಕ ಪ್ರಥಮ ಬಹುಮಾನ ಮತ್ತು ರಾವಣ ಪಾತ್ರದಾರಿ ಸಾತ್ವಿಕ್ ಎನ್.ಬಿ. ರವರಿಗೆ ವೈಯಕ್ತಿಕ ಬಣ್ಣದ ವೇಷಕ್ಕೆ ಬಹುಮಾನ ದೊರಕಿದೆ. ಬಲಿಪ […]
ಬೈಂದೂರು : ತಂಬಾಕು ನಿಯಂತ್ರಣ ತನಿಖಾ ದಳದಿಂದ ದಾಳಿ
ಉಡುಪಿ: ಜಿಲ್ಲಾ ತಂಬಾಕು ನಿಯಂತ್ರಣಾ ತನಿಖಾ ದಳದ ವತಿಯಿಂದ ಕುಂದಾಪುರ ತಾಲೂಕಿನ ಬೈಂದೂರು ವ್ಯಾಪ್ತಿ ಪ್ರದೇಶಗಳಲ್ಲಿ ತಂಬಾಕು ಮಾರಾಟದ ಅಂಗಡಿಗಳು, ಹೋಟೇಲ್‍ಗಳು, ಬಾರ್ ಮತ್ತು ರೆಸ್ಟೋರೆಂಟ್‍ಗಳಿಗೆ ದಾಳಿ ನಡೆಸಿ ಸೆಕ್ಷನ್ 4, 6 (ಎ) ಮತ್ತು 6(ಬಿ) ಅಡಿಯಲ್ಲಿ 20 ಪ್ರಕರಣ ದಾಖಲಿಸಿ ರೂ. 2400 ದಂಡ ವಸೂಲಿ ಮಾಡಲಾಯಿತು. ಅದರಂತೆ ಸೆಕ್ಷನ್ 4, 6 (ಎ) ಮತ್ತು 6(ಬಿ) ನಾಮಫಲಕಗಳನ್ನು ದಾಳಿಯಲ್ಲಿ ವಿತರಿಸಲಾಯಿತು. ಹಾಗೂ ಎಲ್ಲಾ ಅಂಗಡಿ, ಹೋಟೇಲ್‍ಗಳಲ್ಲಿ ಆಹಾರ ಸುರಕ್ಷತಾ ಪರವಾನಿಗೆಯನ್ನು ಪರೀಕ್ಷಿಸಲಾಯಿತು. ದಾಳಿಯಲ್ಲಿ […]
ಕಾಜಾರಗುತ್ತು ಗೆಳೆಯರ ಬಳಗದ ವಾರ್ಷಿಕೋತ್ಸವ: ಬಡ ಅಂಗವಿಕಲರಿಗೆ ಆರ್ಥಿಕ ನೆರವು
ಉಡುಪಿ: ಕಾಜಾರಗುತ್ತು ಗೆಳೆಯರ ಬಳಗ ಸಂಘದ ನಾಲ್ಕನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಭಾನುವಾರ ನಡೆಯಿತು. ಬಡ ಅಂಗವಿಕಲ ಮಕ್ಕಳ ವೈದ್ಯಕೀಯ ಚಿಕಿತ್ಸೆಗೆ ನೆರವು ನೀಡಲು ಹಾಗೂ ಶಾಲಾಭಿವೃದ್ಧಿ ನಿಧಿಗಾಗಿ ಗೆಳೆಯರ ಬಳಗ ಪ್ರತಿವರ್ಷ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಆಚರಿಸಿಕೊಂಡು ಬರುತ್ತಿದೆ. ಉದ್ಯಮಿ ಅಶ್ವಿನ್ ಆಚಾರ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾಜಾರಗುತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಸಾಧು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಗೆಳೆಯರ ಬಳಗದ ವತಿಯಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಭಾಸ್ಕರ ಪೂಜಾರಿ ಮಾಂಬೆಟ್ಟು ಅವರಿಗೆ 20 […]
ಧರ್ಮಸ್ಥಳ: ಕಂಬಳ ವೀರ ಶ್ರೀನಿವಾಸ ಗೌಡರಿಗೆ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರಿಂದ ಗೌರವ
ಧರ್ಮಸ್ಥಳ: ಕಂಬಳ ವೀರ ಮೂಡಬಿದಿರೆ ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ ಅವರಿಗೆ ನಾಡಿನಾದ್ಯಂತ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಸೋಮವಾರ ಶ್ರೀನಿವಾಸ ಗೌಡ ಅವರು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶಿರ್ವಾದ ಪಡೆದರು. ಈ ಸಂಧರ್ಭದಲ್ಲಿ ಹೆಗ್ಗಡೆಯವರು ತುಳುನಾಡಿನ ಕಂಬಳ ಕ್ರೀಡೆಯಲ್ಲಿ ಸಾಧನೆಗೈದು ವಿಶ್ವವಿಖ್ಯಾತಿ ಪಡೆದ ಶ್ರೀನಿವಾಸ ಗೌಡ ಅವರಿಗೆ ಅಭಿನಂದನೆ ಸಲ್ಲಿಸಿ, ಕಂಬಳ ಕೂಟದಲ್ಲಿ ಇನ್ನಷ್ಟು ಸಾಧನೆಗಳು ಹೊರಹೊಮ್ಮಲಿ ಅಂತ ಶುಭ ಹಾರೈಸಿ ಗೌರವಿಸಿದರು. ಈ ಸಂದರ್ಭದಲ್ಲಿ ಕಂಬಳ ಕ್ರೀಡೆ ತರಬೇತಿ ಕುರಿತು ಕಂಬಳ […]