5ನೇ ವಿಶ್ವದಾಖಲೆಗೆ ಯೋಗಪಟು ತನುಶ್ರೀ ಪಿತ್ರೋಡಿ ಸಜ್ಜು
ಉಡುಪಿ: ಯೋಗಾಸನದ ಮೂಲಕ ನಾಲ್ಕು ವಿಶ್ವದಾಖಲೆಗಳನ್ನು ಮಾಡಿರುವ ಯೋಗಪಟು ತನುಶ್ರೀ ಪಿತ್ರೋಡಿ ಅವರು ಇದೇ 22ರಂದು ಸಂಜೆ 4.30ಕ್ಕೆ ಉದ್ಯಾವರ ಗ್ರಾಮ ಪಂಚಾಯಿತಿ ಮೈದಾನದಲ್ಲಿ ‘ಚಕ್ರಾಸನ ರೇಸ್’ ವಿಭಾಗದಲ್ಲಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಗೆ ಪ್ರಯತ್ನಿಸಲಿದ್ದಾರೆ. ಈ ಬಗ್ಗೆ ತನುಶ್ರೀ ಅವರ ತಂದೆ ಉದಯಕುಮಾರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ‘ಚಕ್ರಾಸನ ರೇಸ್’ ವಿಭಾಗದಲ್ಲಿ ವಿಶ್ವದಾಖಲೆ ಮಾಡಿದ ಸಾಧನೆ ಹಿಮಾಚಲ ಪ್ರದೇಶದ ಆಶೀಶ್ ಎಂಬುವವರ ಹೆಸರಿನಲ್ಲಿದೆ. ಅವರು 2019ರಲ್ಲಿ 3.34 ನಿಮಿಷದಲ್ಲಿ 100 ಮೀ. ಕ್ರಮಿಸುವ […]
ಸರ್ಕಾರದಿಂದ ರೈತರ ಕಡೆಗಣನೆ: ಭಾಕಿಸಂ ಆಕ್ರೋಶ
ಉಡುಪಿ: ಜಿಲ್ಲೆಯ ರೈತರ ಪ್ರಮುಖ ಬೇಡಿಕೆಗಳಾದ ಕುಮ್ಕಿ ಭೂಮಿ, ಗೇರು ಲೀಸ್ ಭೂಮಿಗಳ ಮಂಜೂರಾತಿ, ಕಾಡುಪ್ರಾಣಿಗಳ ಉಪಟಳಕ್ಕೆ ಪರಿಹಾರ, ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನರಾರಂಭ, ವಾರಾಹಿ ನೀರಾವರಿ ಯೋಜನೆಯ ಶೀಘ್ರ ಅನುಷ್ಠಾನ ಹಾಗೂ ಕಸ್ತೂರಿ ರಂಗನ್ ವರದಿ ಅನುಷ್ಠಾನದ ತೊಡಕುಗಳಿಗೆ ಸಂಬಂಧಿಸಿದಂತೆ ಸರ್ಕಾರ ಸ್ಪಂದಿಸುತ್ತಿಲ್ಲ. ಇದರಿಂದ ರೈತರು ತೀವ್ರ ಸಂಕಷ್ಟಗೀಡಾಗಿದ್ದಾರೆ ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ. ಜಿಲ್ಲಾಧ್ಯಕ್ಷ ನವೀನ್ಚಂದ್ರ ಜೈನ್ ಅವರ ಅಧ್ಯಕ್ಷತೆಯಲ್ಲಿ ಈಚೆಗೆ ನಡೆದ ಸಭೆಯಲ್ಲಿ ಸರ್ಕಾರವು ರೈತರ ಬಗ್ಗೆ […]
ಮಹಾಲಕ್ಷ್ಮೀ ಕೋ–ಆಪರೇಟಿವ್ ಬ್ಯಾಂಕ್: ಸ್ವಸಹಾಯ ಸಂಘಗಳಿಗೆ 2.5 ಕೋಟಿ ಮೊತ್ತದ ಶೂನ್ಯ ಬಡ್ಡಿದರ ಸಾಲ ವಿತರಣೆ
ಉಡುಪಿ: ಮಹಿಳಾ ಮೀನುಗಾರರ ಸ್ವ ಸಹಾಯ ಸಂಘಗಳಿಗೆ ಮಹಾಲಕ್ಷ್ಮೀ ಕೋ–ಆಪರೇಟಿವ್ ಬ್ಯಾಂಕ್ ಮೂಲಕ ಮಂಜೂರುಗೊಂಡ ಶೂನ್ಯ ಬಡ್ಡಿದರದ ಸಾಲ ಯೋಜನೆಯ 2.5 ಕೋಟಿ ಮೊತ್ತದ ಚೆಕ್ಗಳನ್ನು ಬ್ಯಾಂಕ್ನ ಅಧ್ಯಕ್ಷ ಯಶ್ಪಾಲ್ ಸುವರ್ಣ ಈಚೆಗೆ ವಿತರಿಸಿದರು. ಬಳಿಕ ಮಾತನಾಡಿದ ಅವರು, ರಾಜ್ಯ ಸರ್ಕಾರದ ಮಹಿಳಾ ಮೀನುಗಾರರ ಶೂನ್ಯ ಬಡ್ಡಿದರ ಸಾಲ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸುವ ನಿಟ್ಟಿನಲ್ಲಿ ಮಹಾಲಕ್ಷ್ಮೀ ಬ್ಯಾಂಕ್ ವಿಶೇಷ ಮುತುವರ್ಜಿಯಿಂದ ಕಾರ್ಯನಿರ್ವಹಿಸುತ್ತಿದ್ದು, ಅರ್ಹ ಮಹಿಳಾ ಮೀನುಗಾರರಿಗೆ ಈ ಸಾಲ ಸೌಲಭ್ಯವನ್ನು ತಲುಪಿಸಲು ಕೆಲಸ ಮಾಡುತ್ತಿದೆ. ಇದನ್ನು ಫಲಾನುಭವಿಗಳು […]
ಸ್ಕೂಟಿಗೆ ಖಾಸಗಿ ಬಸ್ ಡಿಕ್ಕಿ: ಸ್ಕೂಟಿ ಸವಾರೆ ಗರ್ಭಿಣಿ ಸ್ಥಳದಲ್ಲೇ ಸಾವು
ಉಡುಪಿ: ಸ್ಕೂಟಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸವಾರೆ ಗರ್ಭಿಣಿ ಸ್ಥಳದಲ್ಲೇ ಮೃತಪಟ್ಟ ಘಟನೆ ಉಡುಪಿ ಕಿನ್ನಿಮೂಲ್ಕಿ ಬಳಿ ಗುರುವಾರ ರಾತ್ರಿ ನಡೆದಿದೆ. ಮೃತ ಸ್ಕೂಟಿ ಸವಾರೆಯನ್ನು ಅಲೆವೂರು ಗ್ರಾಮ ಪಂಚಾಯಿತಿ ಸದಸ್ಯ ನಂದಗೋಕುಲ ಸುಧಾಕರ ಪೂಜಾರಿ ಪತ್ನಿ ಕೆಮ್ತೂರು ನಿವಾಸಿ ಮಮತ ಪೂಜಾರಿ (35) ಎಂದು ಗುರುತಿಸಲಾಗಿದೆ. ಇಂದು ರಾತ್ರಿ 9 ಗಂಟೆ ಸುಮಾರಿಗೆ ಮಮತಾ ಅವರು ತನ್ನ ಸ್ಕೂಟಿಗೆ ಕಿನ್ನಿಮೂಲ್ಕಿ ಪೆಟ್ರೋಲ್ ಪಂಪ್ ನಲ್ಲಿ ಪೆಟ್ರೋಲ್ ಹಾಕಿಸಿಕೊಂಡು ಗೋವಿಂದ ಕಲ್ಯಾಣ ಮಂಟಪ […]
ನಂದಿನಿ ಪಾರ್ಲರ್ ಘಟಕ ಸ್ಥಾಪನೆ: ಅರ್ಜಿ ಆಹ್ವಾನ
ಉಡುಪಿ, ಫೆ.20: ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮಗಳ ಸಹಯೋಗದೊಂದಿಗೆ ನಿರುದ್ಯೋಗಿ ಪ.ಜಾತಿ/ ಪ.ಪಂಗಡದ ಯುವಕ/ ಯುವತಿಯರಿಗೆ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳನ್ನು ಅಭಿವೃದ್ಧಿ ಪಡಿಸಲು ಗ್ರಾಮೀಣ ಭಾಗದಲ್ಲಿ ಗ್ರಾಮ ಪಂಚಾಯತ್ ಅಂಗಡಿ ಕೋಣೆಗಳಲ್ಲಿ/ ಖಾಲಿ ಸ್ಥಳಗಳಲ್ಲಿ ಲೀಸ್/ ಬಾಡಿಗೆ ಆಧಾರದಲ್ಲಿ ನಂದಿನಿ ಪಾರ್ಲರ್ಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿರುತ್ತದೆ. ಆಸಕ್ತಿಯಿರುವ ಅಭ್ಯರ್ಥಿಗಳು ಮಾರ್ಚ್ 5 ರ ಒಳಗೆ ಅರ್ಜಿಯನ್ನು ಡಾ: ಬಿ. ಆರ್. ಅಂಬೇಡ್ಕರ್ ಅಭಿವೃದ್ದಿ ನಿಗಮ, ಜಿಲ್ಲಾ […]