ಮಾ.7 ಮತ್ತು 8 ರಂದು ಮಂಗಳೂರಿನಲ್ಲಿ ಪತ್ರಕರ್ತರ ರಾಜ್ಯ ಸಮ್ಮೇಳನ: ಕರಾವಳಿಯಲ್ಲಿ ಮೊದಲ ಬಾರಿ ರಾಜ್ಯ ಸಮ್ಮೇಳನಕ್ಕೆ ಸಿದ್ಧ
ಮಂಗಳೂರು: ಪತ್ರಕರ್ತರ 35ನೇ ರಾಜ್ಯ ಸಮ್ಮೇಳನ 2020, ಮಾ.7 ಮತ್ತು 8ರಂದು ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆತಿಥ್ಯದಲ್ಲಿ ಕರಾವಳಿ ಭಾಗದಲ್ಲಿ ಪ್ರಥಮ ಬಾರಿಗೆ ರಾಜ್ಯ ಸಮ್ಮೇಳನ ನಡೆಯುತಿದೆ. 1976 ಅಕ್ಟೋಬರ್ 6ರಂದು ಉದಯಿಸಿದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಇದೀಗ ನಿರಂತರ ರಚನಾತ್ಮಕ ಚಟುವಟಿಕೆಗಳ ಆಗರದಂತಿದೆ. ಈಗಾಗಲೇ ದೇಶದಲ್ಲೇ ಅಭೂತಪೂರ್ವ ಎನಿಸಿದ ಎರಡು ಗ್ರಾಮ ವಾಸ್ತವ್ಯ ಕಾರ್ಯಗಳಿಂದ ಮನೆ ಮಾತಾಗಿದೆ. 2019ರ […]
ದತ್ತು ಪುತ್ರಿಯನ್ನು ಹಿಂದೂ ಹುಡುಗನ ಜತೆ ಮದುವೆ ಮಾಡಿಸಿದ ಮುಸ್ಲಿಂ ದಂಪತಿ
ಮಂಗಳೂರು: ಪೋಷಕರಿಲ್ಲದೇ ಅನಾಥಳಾಗಿದ್ದ ಹಿಂದೂ ಹೆಣ್ಣು ಮಗುವನ್ನು ದತ್ತು ಪಡೆದಿದ್ದ ಮುಸ್ಲಿಂ ದಂಪತಿ ಕೊನೆಗೆ ಆಕೆಯ ಇಷ್ಟದಂತೆ ಹಿಂದೂ ಹುಡುಗನ ಜೊತೆಯಲ್ಲಿಯೇ ವಿವಾಹ ಮಾಡಿರುವ ಅಪರೂಪದ ಕೋಮು ಸೌಹಾರ್ದತೆಯ ಘಟನೆ ಕೇರಳದ ಕಾಸರಗೋಡಿನಲ್ಲಿ ನಡೆದಿದೆ. ಇಲ್ಲಿನ ಅಬ್ದುಲ್ಲಾ ಮತ್ತು ಖದೀಜಾ ಮುಸ್ಲಿಂ ದಂಪತಿ ತಮ್ಮ ಸಾಕು ಮಗಳು ರಾಜೇಶ್ವರಿಗೆ ಹಿಂದೂ ಹುಡುಗನ ಜೊತೆ ವಿವಾಹ ಮಾಡಿದ್ದಾರೆ. ಕೇರಳದ ಭಾಗವತಿ ದೇವಸ್ಥಾನದಲ್ಲಿ ವಿವಾಹ ಸಮಾರಂಭ ನಡೆದಿದ್ದು, ಮುಸ್ಲಿಂ ದಂಪತಿಯ ಸಾಕು ಮಗಳು ರಾಜೇಶ್ವರಿ ಹಿಂದೂ ಸಂಪ್ರದಾಯದಂತೆ ವಿಷ್ಣು ಪ್ರಸಾದ್ […]
ಶ್ರೀನಿವಾಸ್ ಗೌಡ ದಾಖಲೆ ಉಡೀಸ್ ಮಾಡಿದ ನಿಶಾಂತ್ ಶೆಟ್ಟಿ: ಕಂಬಳ ಗದ್ದೆಯಲ್ಲಿ ಮತ್ತೊಬ್ಬ ಬೋಲ್ಟ್ ನ ಉದಯ
ಉಡುಪಿ: ಕಂಬಳ ಗದ್ದೆಯಲ್ಲಿ ಮತ್ತೊಬ್ಬ ಹುಸೇನ್ ಬೋಲ್ಟ್ ಉದಯವಾಗಿದ್ದು, ವೇಣೂರಿನಲ್ಲಿ ನಡೆದ ಸೂರ್ಯ ಚಂದ್ರ ಕಂಬಳದಲ್ಲಿ ಕಾರ್ಕಳ ತಾಲ್ಲೂಕಿನ ಬಜೆಗೋಳಿಯ ನಿವಾಸಿ ನಿಶಾಂತ್ ಶೆಟ್ಟಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಶ್ರೀನಿವಾಸ್ ಗೌಡ ಈಚೆಗೆ ಮೂಡುಬಿದಿರೆ ಮಿಜಾರಿನಲ್ಲಿ ನಡೆದ ಕಂಬಳದಲ್ಲಿ ಹೊಸ ದಾಖಲೆ ನಿರ್ಮಿಸಿದ್ದರು. ಆದರೆ ಇದೀಗ ಆ ದಾಖಲೆಯನ್ನು ನಿಶಾಂತ್ ಉಡೀಸ್ ಮಾಡಿದ್ದಾರೆ. ವೇಣೂರಿನಲ್ಲಿ ನಡೆದ ಕಂಬಳದಲ್ಲಿ ಶ್ರೀನಿವಾಸ ಗೌಡ 13.62 ಸೆಕೆಂಡ್ ನಲ್ಲಿ 142.5 ಮೀಟರ್ ಕ್ರಮಿಸಿದ್ದರು. ನಿಶಾಂತ್ 13.61 ಸೆಕೆಂಡ್ ನಲ್ಲಿ 143 ಮೀಟರ್ […]
ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ರಥೋತ್ಸವ ಸಂಭ್ರಮ
ಬ್ರಹ್ಮಾವರ: ಶ್ರೀ ಕ್ಷೇತ್ರ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ರಥೋತ್ಸವವು ವಿಜ್ರಂಭಣೆಯಿಂದ ಫೆ.14ರಂದು ನಡೆಯಿತು. ಸಹಸ್ರಾರು ಭಕ್ತರು ಈ ರಥೋತ್ಸವದಲ್ಲಿ ಭಾಗಿಯಾಗಿದ್ದರು.
ಹಾಲಾಡಿಯಲ್ಲಿ ಶಾಲಿನಿ ಜಿ.ಶಂಕರ್ ಕನ್ವೆನ್ಶನ್ ಸೆಂಟರ್’ ಉದ್ಘಾಟನೆ
ಉಡುಪಿ: ಕುಂದಾಪುರ ತಾಲೂಕಿನ ಹಾಲಾಡಿಯಲ್ಲಿ ನೂತನವಾಗಿ ನಿರ್ಮಿಸಲಾದ ಅತ್ಯಾ ಧುನಿಕ ಸೌಕರ್ಯಗಳನ್ನೊಳಗೊಂಡ ಸುಸಜ್ಜಿತ ಹಾಗೂ ಸಂಪೂರ್ಣ ಹವಾ ನಿಯಂತ್ರಿತ ಸಭಾಭವನ ‘ಶಾಲಿನಿ ಜಿ.ಶಂಕರ್ ಕನ್ವೆನ್ಶನ್ ಸೆಂಟರ್’ ಇದರ ಉದ್ಘಾಟನೆ ಸೋಮವಾರ ನೆರವೇರಿತು. ಮಣಿಪಾಲ ಮಾಹೆಯ ಪ್ರೊಚಾನ್ಸೆಲರ್ ಡಾ.ಎಚ್.ಎಸ್. ಬಲ್ಲಾಳ್ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶವಾಗಿರುವ ಹಾಲಾಡಿ ಯಲ್ಲಿ ಉತ್ತಮ ಸೌಕರ್ಯಗಳನ್ನು ಒಳಗೊಂಡ ಹಾಲ್ ನಿರ್ಮಿಸುವ ಮೂಲಕ ಬಡ ಜನರಿಗೆ ಕಡಿಮೆ ದರದಲ್ಲಿ ಸಭಾಂಗಣವನ್ನು ಒದಗಿಸಿಕೊಡಲಾಗಿದೆ. ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಬಡವರು ಇದರ ಸದುಪಯೋಗ ಮಾಡಿ ಕೊಳ್ಳಬೇಕು. ಸಮಾಜದಲ್ಲಿ […]