ಉಡುಪಿ: ಶ್ರೀಕೃಷ್ಣ ಪ್ರಸಾದ -ಚಿಣ್ಣರ ಸಂತರ್ಪಣೆ ಉದ್ಘಾಟನೆ
ಉಡುಪಿ: ಶ್ರೀ ಕೃಷ್ಣ ಮಠ,ರಾಜಾಂಗಣದ ಶ್ರೀನರಹರಿತೀರ್ಥ ವೇದಿಕೆಯಲ್ಲಿ,ಪರ್ಯಾಯ ಶ್ರೀಅದಮಾರು ಮಠ ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಸರಕಾರದ ಸಹಾರದೊಂದಿಗೆ ನಡೆಯುವ ಶ್ರೀಕೃಷ್ಣ ಪ್ರಸಾದ -ಚಿಣ್ಣರ ಸಂತರ್ಪಣೆಯನ್ನು ಪರ್ಯಾಯ ಶ್ರೀಅದಮಾರು ಮಠದ ಹಿರಿಯ ಮಠಾಧೀಶರಾದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು ಹಾಗೂ ಕಿರಿಯ ಮಠಾಧೀಶರಾದ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಉದ್ಘಾಟಿಸಿ ಅನುಗ್ರಹ ಸಂದೇಶ ನೀಡಿದರು. ಸಭೆಯಲ್ಲಿ ಉಡುಪಿ ಶಾಸಕರಾದ ಕೆ.ರಘುಪತಿ ಭಟ್,ಡಾ.ಜಿ.ಶಂಕರ್,ಯಶಪಾಲ್ ಸುವರ್ಣ,ಡಾ.ಎಂ.ಹರಿಶ್ಚಂದ್ರ,ರಮೇಶ್ ಎ.ಬಂಗೇರ,ಪ್ರಕಾಶ್ಚಂದ್ರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.ಗೋವಿಂದರಾಜ್ ರವರು ಸ್ವಾಗತಿಸಿ ಸಂತೋಷ್ ರವರು ಧನ್ಯವಾದ ಸಮರ್ಪಿಸಿದರು.ವಿಜಯಸಿಂಹಾಚಾರ್ಯರು ಕಾರ್ಯಕ್ರಮ ನಿರೂಪಿಸಿದರು.
ಕುಂದಾಪುರ ತಾಲೂಕು ಗಾಣಿಗ ಸಂಘದ ಅಧ್ಯಕ್ಷರಾಗಿ ಪ್ರಭಾಕರ ಬಿ.ಕುಂಭಾಶಿ ಆಯ್ಕೆ
ಕುಂದಾಪುರ:ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ವಾರ್ಷಿಕ ಮಹಾಸಭೆ ಕುಂದಾಪುರ ವೇಣುಗೋಪಾಲಕೃಷ್ಣ ಹವಾನಿಯಂತ್ರಿತ ಸಭಾಭವನದಲ್ಲಿ ಸಂಘದ ಅಧ್ಯಕ್ಷ ಕೊಗ್ಗ ಗಾಣಿಗ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಗಾಣಿಗ ವರದಿ ವಾಚಿಸಿದರು. ಕೋಶಾಧಿಕಾರಿ ಪರಮೇಶ್ವರ ಲೆಕ್ಕಪತ್ರ ಮಂಡಿಸಿದರು. ಇದೇ ಸಂದರ್ಭದಲ್ಲಿ ನೂತನ ಆಡಳಿತ ಮಂಡಳಿ ರಚಿಸಲಾಗಿದ್ದು,ನೂತನ ಅಧ್ಯಕ್ಷರಾಗಿ ಪ್ರಭಾಕರ ಬಿ.ಕುಂಭಾಶಿ ಆಯ್ಕೆಗೊಂಡರು.ಗೌರವಾಧ್ಯಕ್ಷರಾಗಿ ಉದ್ಯಮಿ ಕೆ.ಎಂ.ಲಕ್ಷ್ಮಣ, ಪ್ರಧಾನ ಕಾರ್ಯದರ್ಶಿಯಾಗಿ ಬಸ್ರೂರು ನಾಗರಾಜ ಗಾಣಿಗ, ಕೋಶಾಧಿಕಾರಿಯಾಗಿ ಹಿಲ್ಕೋಡು ನಾಗರಾಜ ಗಾಣಿಗ, ಉಪಾಧ್ಯಕ್ಷರಾಗಿ ರವಿ ಗಾಣಿಗ ಆಜ್ರಿ, ಪ್ರಮೋದ್ ಗಾಣಿಗ […]
ಉಸೇನ್ ಬೋಲ್ಟ್ ಓಟ ಮೀರಿಸಿದ ಶ್ರೀನಿವಾಸ ಗೌಡ: ಕಂಬಳದ ಓಟಗಾರನಿಗೆ ಭಾರೀ ಪ್ರಶಂಸೆ
ಮಂಗಳೂರು: ಜಗತ್ತಿನಲ್ಲಿ ಅತ್ಯಂತ ವೇಗದ ಓಟಗಾರರ ಅಂದ್ರೆ ತಟ್ಟನೆ ನೆನಪಿಗೆ ಬರುವುದು ಉಸೇನ್ ಬೋಲ್ಟ್. ವೇಗದ ಓಟದಲ್ಲಿ ಈತನದ್ದು ವಿಶ್ವದಾಖಲೆ. ಆದ್ರೆ ಈತನನ್ನು ಮೀರಿಸಿದ ಓಟಗಾರ ಇದ್ದಾನೆ ಅದು ಕಡಲ ನಗರಿ ನಮ್ಮ ಮಂಗಳೂರಿನಲ್ಲಿ. ಅದು ಬರೀ ಕಾಲಿನಲ್ಲಿ. ಕೆಸರು ಗದ್ದೆಯಲ್ಲಿ. ಜನಪದ ಕ್ರೀಡೆ ಕಂಬಳ ಕೂಟದಲ್ಲಿ. ಹೌದು ಉಸೇನ್ ಬೋಲ್ಟ್ 2009ರಲ್ಲಿ 100 ಮೀಟರ್ ಓಟವನ್ನು ಕೇವಲ 9.58 ಕ್ರಮಿಸಿದ್ದು ವಿಶ್ವದಾಖಲೆ. ಆದರೆ ಈ ದಾಖಲೆ ಮೀರಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ಮಿಜಾರು ಶ್ರೀನಿವಾಸ […]