ಧರ್ಮಸ್ಥಳ: ವ್ಯಸನಮುಕ್ತ ಸಾಧಕರ ಸಮಾವೇಶ ಮತ್ತು ಶತದಿನೋತ್ಸವ
ಮಂಗಳೂರು: ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ ವತಿಯಿಂದ ರಾಜ್ಯಾದ್ಯಂತ ನಡೆಸಲಾದ ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿ ದುಶ್ವಟಮುಕ್ತರಾಗಿ ನವಜೀವನ ನಡೆಸುತ್ತಿರುವ ವ್ಯಸನಮುಕ್ತ ಸಾಧಕರ ಸಮಾವೇಶ ಮತ್ತು ಶತದಿನೋತ್ಸವ ಕಾರ್ಯಕ್ರಮ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಶ್ರೀಮತಿ ಶಶಿಕಲಾ ಜೊಲ್ಲೆ, ಕೆಲವೊಮ್ಮೆ ತಮ್ಮ ಪರಿಸ್ಥಿತಿಯಿಂದಾಗಿ ಕೆಲವರು ವ್ಯಸನಕ್ಕೆ ಬಲಿಯಾಗಿರಬಹುದು. ಆದರೆ ನಂತರ ಅದರಿಂದ ಮುಕ್ತವಾಗುವುದು ತುಂಬಾ ಕಷ್ಟ, ಆದರೆ ಸರಿಯಾದ ಬದುಕಿಗೆ ಕೈ ಹಿಡಿದು ಕರೆದುಕೊಂಡು […]
ವಿಜೇತ ಪೈ ಗೆ ರಾಷ್ಟ್ರ ಮಟ್ಟದ ಚಿನ್ನದ ಪದಕ
ಕಾರ್ಕಳ: ಗುಜರಾತಿನ ವಡೋದರದಲ್ಲಿ ನಡೆದ ಮೂರನೆ ರಾಷ್ಟ್ರೀಯ ಮಟ್ಟದ ಮಾಸ್ಟರ್ಸ್ ನ್ಯಾಶನಲ್ ಗೇಮ್ಸ್ ನಲ್ಲಿ ಈಜು ಸ್ಪರ್ಧೆಯಲ್ಲಿ 50 ಮೀಟರ್ ಹಾಗು 100 ಮೀಟರ್ ವಿಭಾಗದಲ್ಲಿ ಎರಡು ಚಿನ್ನದ ಪದಕಗಳನ್ನು ಹಾಗು ಹಿಮ್ಮಖ ಈಜಿನಲ್ಲಿ 50 ಮೀಟರ್ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ. ವಿಜೇತ ಪೈ ಈಜಿನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಎರಡು ಬಂಗಾರದ ಪದಕ ಹಾಗೂ ಬೆಳ್ಳಿ ಪದಕ ಪಡೆದು ಆಸ್ಟ್ರೇಲಿಯಾ ದಲ್ಲಿ ನಡೆಯುವ ಅಂತರರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ವಿಜೇತ ಪೈ ಮರ್ಣೆ ಗ್ರಾ.ಪಂ ಸದಸ್ಯ ರಾಗಿದ್ದು […]