ಉಡುಪಿಯಲ್ಲಿ ಕೊರೊನಾ ಆತಂಕ: ನಾಲ್ಕು ಸಂಶಯಾಸ್ಪದ ಪ್ರಕರಣ ಪತ್ತೆ?

ಉಡುಪಿ: ಇಡೀ ಜಗತ್ತನ್ನೇ ಆತಂಕಕ್ಕೆ ದೂಡಿರುವ ಕೊರೊನಾ ವೈರಸ್ ಇದೀಗ ಉಡುಪಿಯಲ್ಲೂ ಭೀತಿ ಸೃಷ್ಟಿಸಲು ಸಜ್ಜಾಗಿದೆಯೇ ಎಂಬ ಅನುಮಾನ ಮೂಡಿದೆ. ಇದಕ್ಕೆ ಪುಷ್ಟಿ ನೀಡುವಂತೆ ಇಂದು ಕಳೆದ 15 ಹಿಂದೆ ಚೀನಾ ಪ್ರವಾಸ ಕೈಗೊಂಡು ಸ್ವದೇಶಕ್ಕೆ ಮರಳಿರುವ ಜಿಲ್ಲೆಯ ನಾಲ್ಕು ಮಂದಿ ಶೀತ ಜ್ವರದಿಂದ ಬಳಲುತ್ತಿದ್ದು,  ಅವರನ್ನು ಸಂಶಯಾಸ್ಪದ ಕೊರೊನಾ ವೈರಸ್  ಪರೀಕ್ಷೆಗೊಳಪಡಿಸಿ ಜಿಲ್ಲಾಸ್ಪತ್ರೆಯ ಪ್ರತ್ಯೇಕ ವಾರ್ಡಿನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಈ ನಾಲ್ಕು ಮಂದಿರ ಪೈಕಿ ಒಬ್ಬರು ಕಾಪು ತಾಲೂಕಿನವರಾಗಿದ್ದು 15 ದಿನಗಳ ಹಿಂದೆ ಚೀನಾದಿಂದ ಊರಿಗೆ […]

ರಾಜ್ಯದ ಸಾಹಿತ್ಯ ಲೋಕ ದರಿದ್ರ ಸ್ಥಿತಿಗೆ ತಲುಪಿದೆ: ಡಾ. ಮಹಾಬಲೇಶ್ವರ ರಾವ್ ಕಳವಳ

ಉಡುಪಿ: ಶೃಂಗೇರಿಯಲ್ಲಿ ಈಚೆಗೆ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಪರಿಸರವಾದಿ ಕಲ್ಕುಳಿ ವಿಠಲ ಹೆಗಡೆಗೆ ವ್ಯವಸ್ಥೆ ನಕ್ಸಲ್‌ ಹಣೆಪಟ್ಟಿ ಕಟ್ಟಿದೆ. ಅವರು ಸಮ್ಮೇಳನದ ಅಧ್ಯಕ್ಷರಾಗಿದ್ದರೆಂಬ ಕಾರಣಕ್ಕೆ ಸರ್ಕಾರ ಅನಗತ್ಯ ವಿವಾದ ಎಬ್ಬಿಸಿ ಅನುದಾನ ನಿಲ್ಲಿಸಿದೆ. ಅಲ್ಲದೆ, ಪೊಲೀಸ್‌ ಸರ್ಪಗಾವಲಿನಲ್ಲಿ ದಾಂದಲೆ ನಡೆಸಿ, ಎರಡು ದಿನ ನಡೆಯಬೇಕಿದ್ದ ಗೋಷ್ಠಿಯನ್ನು ಒಂದೇ ದಿನಕ್ಕೆ ಮುಗಿಸಿದೆ ಎಂದು ಕುಂಜಿಬೆಟ್ಟು ಡಾ. ಟಿಎಂಎ ಪೈ ಶಿಕ್ಷಣ ಕಾಲೇಜಿನ ಸಮನ್ವಯಾಧಿಕಾರಿ, ಲೇಖಕ ಡಾ. ಮಹಾಬಲೇಶ್ವರ ರಾವ್ ಆರೋಪಿಸಿದರು. ಡಾ. ನಿ. ಮುರಾರಿ ಬಲ್ಲಾಳ್ ಮತ್ತು […]

ಫೆ. 10ಕ್ಕೆ ‘ನಾರಸಿಂಹ’ ನೃತ್ಯರೂಪಕ ಪ್ರಯೋಗದ ಅನಾವರಣ 

ಉಡುಪಿ: ಇಲ್ಲಿನ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಇದೇ 10ರಂದು ಸಂಜೆ 6.30ಕ್ಕೆ ನೃತ್ಯನಿಕೇತನ ಕೊಡವೂರು ಸಂಸ್ಥೆಯ ‘ನಾರಸಿಂಹ’ ಎಂಬ ವಿನೂತನ ನೃತ್ಯರೂಪಕ ಪ್ರಯೋಗವನ್ನು ಮೂಡುಬಿದಿರೆ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್‌ ಆಳ್ವ ಅನಾವರಣಗೊಳಿಸುವರು ಎಂದು ಸಂಸ್ಥೆಯ ನಿರ್ದೇಶಕ ಸುಧೀರ್‌ ರಾವ್‌ ಕೊಡವೂರು ತಿಳಿಸಿದರು. ಈ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಇದು ಪುರಾಣದಲ್ಲಿ ಬರುವ ಪ್ರಹ್ಲಾದನ ಕಥೆಯ ನೃತ್ಯರೂಪಕವಾಗಿದ್ದು, ಸಾಂಪ್ರದಾಯಿಕ ಕಥಾವಿನ್ಯಾಸದಲ್ಲಿ ಯಾವ ಬದಲಾವಣೆ ಮಾಡದೆ ಪ್ರಸ್ತುತ ಪಡಿಸಲಾಗುತ್ತಿದೆ. ನೃತ್ಯ, […]

ಫೆ.14,15: ಕರ್ಮಸಿದ್ಧಿ–2020’ ಅಂತರರಾಷ್ಟ್ರೀಯ ಸಮ್ಮೇಳನ

ಉಡುಪಿ: ಕುತ್ಪಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಪಂಚಕರ್ಮ ಮತ್ತು ಜಾನಪದ ಸಂಶೋಧನಾ ಕೇಂದ್ರದ ಜಂಟಿ ಆಶ್ರಯದಲ್ಲಿ ಮಾತೃಶ್ರೀ ರತ್ನಮ್ಮ ಹೆಗ್ಗಡೆಯವರ ಜನ್ಮದಿನ ಅಂಗವಾಗಿ ಇದೇ 14 ಮತ್ತು 15ರಂದು ಕಾಲೇಜಿನ ಭಾವಪ್ರಕಾಶ ಸಭಾಂಗಣದಲ್ಲಿ ‘ಕರ್ಮಸಿದ್ಧಿ–2020’ ಎಂಬ ಅಂತರರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಸಮ್ಮೇಳನದ ಮುಖ್ಯ ಸಂಘಟನಾ ಕಾರ್ಯದರ್ಶಿ ಡಾ. ನಿರಂಜನ್‌ ರಾವ್‌ ಹೇಳಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಈ ಎರಡು ದಿನಗಳ ಸಮ್ಮೇಳನದಲ್ಲಿ 1 ಸಾವಿರ ದೇಶ–ವಿದೇಶಗಳ ಸಂಶೋಧನಾ ವಿದ್ಯಾರ್ಥಿಗಳು, […]

ಮಣಿಪಾಲ ಕೆಎಂಸಿಯಲ್ಲಿ ಕೊರೊನಾ ವೈರಸ್ ಪತ್ತೆಯಾಗಿಲ್ಲ: ವದಂತಿಗೆ ಕಿವಿಗೊಡಬೇಡಿ

ಉಡುಪಿ: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ  ಸುದ್ದಿ ಹರಡುತ್ತಿದೆ. ಇದು ಸುಳ್ಳು ಸುದ್ದಿಯಾಗಿದೆ. ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಇಲ್ಲಿಯವರೆಗೆ ಯಾವುದೇ ರೋಗಿಯಲ್ಲಿ ಕೊರೊನಾ ವೈರಸ್ ಇರುವುದು ದೃಢಪಟ್ಟಿಲ್ಲ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ತಿಳಿಸಿದ್ದಾರೆ.