ಉಡುಪಿ ಶ್ರೀ ಕೃಷ್ಣ ಮಠದಲ್ಲಿ ವೈಭವದ ಮೆರವಣಿಗೆ
ಉಡುಪಿ: ಕೃಷ್ಣ ಮಠದಲ್ಲಿ ಮಧ್ವನವಮಿಯ ಪ್ರಯುಕ್ತ ಪಲಿಮಾರು ಮಠದ ಹೃಷಿಕೇಶತೀರ್ಥರ ಸರ್ವಮೂಲ ಗ್ರಂಥದ ಮೂಲಪ್ರತಿಯನ್ನು ಸುವರ್ಣ ರಥದಲ್ಲಿಟ್ಟು ರಥಬೀದಿಯಲ್ಲಿ ಮೆರವಣಿಗೆ ನಡೆಯಿತು. ಪರ್ಯಾಯ ಶ್ರೀ ಅದಮಾರು ಮಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಪಲಿಮಾರು ಹಿರಿಯ ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಹಾಗೂ ಪಲಿಮಾರು ಕಿರಿಯ ಮಠಾಧೀಶರಾದ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಮೆರವಣಿಗೆಯಲ್ಲಿ ಸಾನ್ನಿಧ್ಯ ವಹಿಸಿದ್ದರು.
ಹಿರಿಯಡಕ: ಕವಿ ಬಿ.ಆರ್.ಲಕ್ಷ್ಮಣ್‍ರಾವ್ ರೊಂದಿಗೆ ಆತ್ಮೀಯ ಸಂವಾದ
ಉಡುಪಿ : ಅಮೋಘ (ರಿ.) ಹಿರಿಯಡಕ ಹಾಗೂ ಹಿರಿಯಡಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ನಾಡಿನ ಖ್ಯಾತ ಕವಿ ಬಿ.ಆರ್.ಲಕ್ಷ್ಮಣ್‍ರಾವ್ ಅವರೊಂದಿಗೆ ಆತ್ಮೀಯ ಸಂವಾದ ಕಾವ್ಯ-ಗಾನ-ಕುಂಚ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು. ಹಿರಿಯ ಕವಿ ಬಿ.ಆರ್.ಲಕ್ಷ್ಮಣ್ ರಾವ್ ಅವರು ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ ಪ್ರತಿಯೊಬ್ಬ ಮನುಷ್ಯನಿಗೂ ಹೊರಬಾಳು ಮತ್ತು ಒಳಬಾಳು ಎಂಬುದು ಇರುತ್ತದೆ. ಹೊರಬಾಳಿಗೆ ಉದ್ಯೋಗ, ಸಂಪಾದನೆ, ಮನೆ, ಆಸ್ತಿ-ಪಾಸ್ತಿ ಮೊದಲಾದವು ಮುಖ್ಯವಾಗುತ್ತವೆ. ಕೇವಲ ಇದರಿಂದಷ್ಟೇ ವ್ಯಕ್ತಿ […]
ಕಾಪು ಬೀಚ್, ಲೈಟ್ ಹೌಸ್ ಉತ್ಸವ ಮುಂದೂಡಿಕೆ
ಉಡುಪಿ : ಜಿಲ್ಲಾಡಳಿತ ಉಡುಪಿ, ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ನಗರಸಭೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನಿರ್ಮಿತಿ ಕೇಂದ್ರ, ಕರಾವಳಿ ಪ್ರವಾಸೋದ್ಯಮ ಸಂಘಟನೆ, ಪಶುಪಾಲನಾ ಇಲಾಖೆ ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳು ಉಡುಪಿ ಜಿಲ್ಲೆ ರವರ ಸಹಯೋಗದೊಂದಿಗೆ ಕಾಪು ತಾಲೂಕಿನ ಕಾಪು ಬೀಚ್‍ನಲ್ಲಿ ಫೆಬ್ರವರಿ 8 ಮತ್ತು 9 ರಂದು ಕಾಪು ಲೈಟ್ ಹೌಸ್ ಉತ್ಸವವನ್ನು ಆಚರಿಸಲು ಉದ್ದೇಶಿಸಿದ್ದು, ಕಾರ್ಯಕ್ರಮವನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಸ್-ಕಾರು ಅಪಘಾತ: ಕಾರ್ಕಳದ ಉದ್ಯಮಿ ಸಾವು
ಉಡುಪಿ: ಕಾರ್ಕಳ-ಉಡುಪಿ ರಸ್ತೆಯ ಗುಡ್ಡೆಯಂಗಡಿಯಲ್ಲಿ ಬಸ್ ಮತ್ತು ಕಾರು ಮುಖಾಮಖಿ ಡಿಕ್ಕಿಯಾದ ಪರಿಣಾಮ ಕಾರ್ಕಳದ ಉದ್ಯಮಿ ಸ್ಥಳದಲ್ಲೆ ಮೃತಪಟ್ಟ ಘಟನೆ ಸೋಮವಾರ ಸಂಭವಿಸಿದೆ. ಕಾರ್ಕಳದ ಅಯ್ಯಪ್ಪ ನಗರದ ನಿವಾಸಿ ಕೆ.ಕೃಷ್ಣ ಪೈ (62) ಮೃತಪಟ್ಟವರು. ಅವರು ತಮ್ಮ ಕಾರಿನಲ್ಲಿ ಮಣಿಪಾಲಕ್ಕೆ ತೆರಾಳುತ್ತಿದ್ದ ವೇಳೆ ಹಿರಿಯಡ್ಕ ಗುಡ್ಡೆಂಗಡಿಯ ಸೂರಜ್ ಇಂಡಸ್ಟ್ರೀಸ್ ಬಳಿ ಉಡುಪಿಯಿಂದ ಕಾರ್ಕಳಕ್ಕೆ ಹೋಗುತ್ತಿದ್ದ ಖಾಸಗಿ ಬಸ್ ವಿಶಾಲ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕೆ.ಕೃಷ್ಣ ಪೈ ಸ್ಥಳದಲ್ಲೆ ಮೃತ ಪಟ್ಟಿದ್ದಾರೆ. ಕಾರು ಸಂಪೂರ್ಣ ನಜ್ಜುಗುಜ್ಜು […]