ಧರ್ಮಸ್ಥಳ: ಧರ್ಮಶ್ರೀ ವಿಸ್ತೃತ ನೂತನ ಕಟ್ಟಡ ಉದ್ಘಾಟನೆ

ಧರ್ಮಸ್ಥಳ: ಧರ್ಮಸ್ಥಳದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಧರ್ಮಶ್ರೀ ವಿಸ್ತೃತ ನೂತನ ಕಟ್ಟಡವನ್ನು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳ ಒಂದು ಸರಕಾರದ ಆಡಳಿತ ವ್ಯವಸ್ಥೆ ಇದ್ದಂತೆ. ವ್ಯಕ್ತಿಯನ್ನು ಜವಾಬ್ದಾರಿಯುತ ನಾಗರಿಕನನ್ನಾಗಿಸುವಲ್ಲಿ ಸರಕಾರಕ್ಕಿಂತಲೂ ಹೆಚ್ಚಿನ ಕೆಲಸ ಮಾಡುತ್ತಿದೆ. ಡಾ. ಹೆಗ್ಗಡೆ ಅವರ ಸ್ವಚ್ಛ ಶ್ರದ್ಧಾಕೇಂದ್ರ ಸ್ವಾತಂತ್ರ‍್ಯ ಆಂದೋಲನದಂತೆ ಪರಿವರ್ತನೆಯಾಗಿದೆ. ಸೈನಿಕರು ದೇಶರಕ್ಷಣೆ ಮಾಡುತ್ತಿದ್ದಾರೆ ನಾವು ಸ್ವಚ್ಛತೆ ಮೂಲಕ ಸಮಾಜ ರಕ್ಷಣೆ ಮಾಡೋಣ ಎಂದು ಕರೆ ನೀಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ […]

ಅವೈಜ್ಙಾನಿಕ ಕಾಮಗಾರಿ: ಜಾಲಾಡಿಯಲ್ಲಿ ಯೂ ಟರ್ನ್ ನೀಡಲು ಆಗ್ರಹ,ಸಾರ್ವಜನಿಕರಿಂದ ಬೃಹತ್ ಕಾಲ್ನಡಿಗೆ ಜಾಥಾ, ಬಹಿರಂಗ ಸಭೆ.

ಕುಂದಾಪುರ: ಹೆಮ್ಮಾಡಿಯ ಮೂವತ್ತುಮುಡಿಯಿಂದ -ಜಾಲಾಡಿ ತನಕ ಸರ್ವೀಸ್ ರಸ್ತೆ ಹಾಗೂ ಜಾಲಾಡಿಯಲ್ಲಿ ಕ್ರಾಸಿಂಗ್ ನೀಡಲು ಆಗ್ರಹಿಸಿ ಶುಕ್ರವಾರ ದಾರಿಗಾಗಿ ಧ್ವನಿ ಹೋರಾಟ ಸಮಿತಿ ನೇತೃತ್ವದಲ್ಲಿ ಬೃಹತ್ ಕಾಲ್ನಡಿಗೆ ಜಾಥಾ ನಡೆಯಿತು. ಜಾಲಾಡಿ ಸರ್ಕಲ್‌ನಿಂದ ಆರಂಭಗೊಂಡ ಕಾಲ್ನಡಿಗೆ ಜಾಥಾ ಸಂತೋಷನಗರ, ಹೆಮ್ಮಾಡಿ ಪೇಟೆ ಸುತ್ತುವರಿದು ಪಂಚಾಯತ್ ತನಕ ಸಾಗಿ ಅಲ್ಲಿ ಬಹಿರಂಗ ಸಭೆ ನಡೆಯಿತು. ಹೆಮ್ಮಾಡಿ ಪಂಚಾಯತ್ ಎದುರು ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಪತ್ರಕರ್ತ ಶಶಿಧರ ಹೆಮ್ಮಾಡಿ, ಕರಾವಳಿಯಲ್ಲಿ ಚತುಷ್ಪಥ ಕಾಮಗಾರಿ ಆರಂಭವಾದ ದಿನದಿಂದಲೂ ಸಾರ್ವಜನಿಕರು ಒಂದಿಲ್ಲೊಂದು […]

ಸರ್ವೋತ್ತಮ ಸೇವಾ ಪ್ರಶಸ್ತಿಗೆ ಶ್ರೀ ಪ್ರಕಾಶ್ ನಾಯಕ್ ಆಯ್ಕೆ 

ಮಂಗಳೂರು: ಕರ್ನಾಟಕ ರಾಜ್ಯ ಸರಕಾರಿ ನೌಕರರ ಪೈಕಿ ಅತ್ಯುತ್ತಮ ಸೇವೆ ನೀಡಿ ಸಾಧನೆಗೈದು ನಾಡಿನ ಜನತೆಯ ಮುಖದಲ್ಲಿ ಮುಗುಳ್ನಗೆ ತಂದು ಸರಕಾರಿ ಕೆಲಸದಲ್ಲಿ ವಿನೂತನ ಪದ್ಧತಿ, ನಾಗರಿಕ ಸ್ನೇಹಿ, ಗುಣಾತ್ಮಕ, ಭ್ರಷ್ಟಾಚಾರ ರಹಿತ ಕಾರ್ಯವೆಸಗಿದ ನೌಕರರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ಕರ್ನಾಟಕ ರಾಜ್ಯ ಸರಕಾರವು ಪ್ರತಿ ವರ್ಷ ನೀಡುತ್ತಿದ್ದು 2019-2020 ನೆಯ ಸಾಲಿನ ಈ ಪ್ರಶಸ್ತಿಗೆ ನ್ಯಾಯಾಂಗ ಇಲಾಖೆಯ ಶಿರಸ್ತೆದಾರ್  ಪ್ರಕಾಶ್ ನಾಯಕ್ ಅವರು ಆಯ್ಕೆಯಾಗಿದ್ದಾರೆ. ಕಳೆದ ಮೂರು ದಶಕಗಳಿಂದ ನ್ಯಾಯಾಂಗ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಕಾಶ್ […]

ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಅರಿಯಲು ಜನ ಜಾಗೃತಿ ಸಭೆಯಲ್ಲಿ ಪಾಲ್ಗೊಳ್ಳಿ: ಶಾಸಕ ಕಾಮತ್

ಮಂಗಳೂರು: ಸೋಮವಾರ ಕೂಳೂರು ಗೋಲ್ಡ್ ಫಿಂಚ್‌ ಸಿಟಿ ಮೈದಾನದಲ್ಲಿ ನಡೆಯಲಿರುವ ಬೃಹತ್ ಜನ ಜಾಗೃತಿ ಸಮಾವೇಶಕ್ಕೆ ಆಹ್ವಾನಿಸಲು ಮಂಗಳೂರು ನಗರ ದಕ್ಷಿಣ ಶಾಸಕ ಡಿ.ವೇದವ್ಯಾಸ್ ಕಾಮತ್ ಅವರು ಕುದ್ರೋಳಿ ವಾರ್ಡಿನಲ್ಲಿ ಮನೆ ಮನೆಗೆ ಭೇಟಿ ನೀಡಿ ಮಾಹಿತಿ ನೀಡಿದರು. ಈ ಸಂಧರ್ಭದಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷಗಳು ತಮ್ಮ ಸಾಂವಿಧಾನಿಕ ಕರ್ತವ್ಯವನ್ನು ಮರೆತು ಸಾರ್ವಜನಿಕರೊಳಗೆ ಗೊಂದಲ‌ಮೂಡಿಸುತ್ತಿದೆ. ಪೌರತ್ವ ತಿದ್ದುಪಡಿ ಕಾಯ್ದೆಯ ವಿಚಾರ ಅರಿಯದೆ ಜನರ ಮನಸ್ಸಿನೊಳಗೆ ಭೇದ ಭಾವ ಮೂಡಿಸುತ್ತಿರುವ ವಿರೋಧ ಪಕ್ಷಗಳ ನಡೆ ಖಂಡನೀಯ ಎಂದರು. […]

ಕುಂದಾಪುರ: ಗಲಾಟೆ ಗದ್ದಲದಲ್ಲೇ ಮುಳುಗಿದ ತಾ.ಪಂ ಸಾಮಾನ್ಯ ಸಭೆ ಅಧ್ಯಕ್ಷರ ಕಾರ್ಯವೈಖರಿಯ ಬಗ್ಗೆ ತೀವ್ರ ಅಸಮಧಾನ

ಕುಂದಾಪುರ: ಆಡಳಿತ ಪಕ್ಷದ ಸದಸ್ಯರು ಹಾಗೂ ಅಧ್ಯಕ್ಷರ ನಡುವಿನ ಸಮನ್ವಯದ ಕೊರತೆಯಿಂದಾಗಿ ಶುಕ್ರವಾರ ನಡೆದ ತಾ.ಪಂ ಸಾಮಾನ್ಯ ಸಭೆ ಗಲಾಟೆ-ಗದ್ದಲದಲ್ಲೇ ಮುಗಿಯಿತು. ಪ್ರತೀ ತಾ.ಪಂ ಸಭೆಯಲ್ಲೂ ಅಧ್ಯಕ್ಷರ ಕಾರ್ಯವೈಖರಿಯ ಬಗ್ಗೆ ಅಸಮಧಾನ ಹೊರಹಾಕುವ ಆಡಳಿತ ಪಕ್ಷದ ಸದಸ್ಯರು ಈ ಭಾರಿಯೂ ವಿರೋಧ ಪಕ್ಷದ ಕೆಲಸ ನಿರ್ವಹಿಸಿ ಅಧ್ಯಕ್ಷರ ನಡೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಕುಂದಾಪುರ ತಾಲೂಕು ಪಂಚಾಯಿತಿ ಡಾ ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಅಧಿಕಾರಿಗಳ ಅಸಮರ್ಪಕ ಉತ್ತರ, ಕುಂದಾಪುರ […]