ಆಳ್ವಾಸ್ ಕಾಲೇಜಿನಲ್ಲಿ ‘ಬಯೊ-ಕೈಮೆರಾ’- ಹ್ಯಾಂಡ್ಸ್ ಆನ್ ಕಾರ್ಯಾಗಾರ
ಮೂಡಬಿದ್ರೆ : ನಾವು ಪ್ರಯೋಗಾತ್ಮಕವಾಗಿ ಹೇಗೆ ಬಳಸಿಕೊಳ್ಳುತ್ತೇವೆ ಎನ್ನುವುದರಲ್ಲಿ ಬಯೊಕೆಮಿಸ್ಟ್ರಿಯ ಎಲ್ಲಾ ವಿಷಯಗಳು ನಿಂತಿವೆ ಎಂದು ಆಳ್ವಾಸ್ ಕಾಲೇಜಿನ ಇನ್‌ವೆನ್ಶಿಯೋ ರಿಸರ್ಚ್ ಕ್ಲಬ್‌ನ ಸಂಯೋಜಕ ಡಾ. ಸುಕೇಶ್ ಹೇಳಿದರು. ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಬಯೋಕೆಮಿಸ್ಟ್ರಿ ವಿಭಾಗ ಆಯೋಜಿಸಿದ ‘ಬಯೊ-ಕೈಮೆರಾ’- ಹ್ಯಾಂಡ್ಸ್ ಆನ್ ವರ್ಕಶಾಫ್‌ನಲ್ಲಿ ಅವರು ಮಾತನಾಡಿದರು. ಸಂಶೋಧನೆ ಆರಂಭವಾಗುವುದೇ ನಮ್ಮ ಸುತ್ತ ಮುತ್ತಲಿನ ಪ್ರಕೃತಿಯಲ್ಲಿ. ಸಂಶೋಧನೆ ಗುಣಾತ್ಮಕವಾಗಿರಬೇಕೆಂದರೆ ಕ್ರಿಯೆ ಮತ್ತು ಪ್ರತಿಕ್ರಿಯೆಗಳ ಮೂಲಕ ಸಮರ್ಥಿಸಿಕೊಳ್ಳಬೇಕು, ಆಗ ಮಾತ್ರ ಪ್ರಯೋಗ ಸಾಫಲ್ಯ ಕಾಣುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ […]
ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಕ್ರೀಡಾಕೂಟಕ್ಕೆ ಚಾಲನೆ
ನಿಟ್ಟೆ: ಪಠ್ಯ ವಿಷಯದಲ್ಲಿನ ಪ್ರಾವೀಣ್ಯತೆಯೊಂದಿಗೆ ದೈಹಿಕ ಸದೃಢತೆಯ ಬಗೆಗೂ ವಿದ್ಯಾರ್ಥಿಗಳು ಗಮನಹರಿಸಬೇಕು. ಇಂದಿನ ವಿದ್ಯಾರ್ಥಿಗಳು ಆಟವಾಡಲು ಮೈದಾನವನ್ನು ಬಳಸದೆ ಕಂಪ್ಯೂಟರ್‌ನನ್ನು ಬಳಸುತ್ತಿರುವುದು ಖೇದಕರವಿಚಾರ” ಎಂದು ನಿಟ್ಟೆಯ ಡಾ.ಎನ್.ಎಸ್.ಎ.ಎಂ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ವೀಣಾಕುಮಾರಿ ಬಿ.ಕೆ ಅಭಿಪ್ರಾಯಪಟ್ಟರು. ಅವರು ಜ.೨೨ರಂದು ಎನ್.ಇ.ಟಿ ಕ್ಯಾಂಪಸ್‌ನ ಬಿ.ಸಿ.ಆಳ್ವಾ ಕ್ರೀಡಾಸಂಕೀರ್ಣದಲ್ಲಿ ನಡೆದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ೩೪ನೇ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ನಿರಂಜನ್ ಎನ್. ಚಿಪ್ಳೂಣ್ಕರ್, ವಿದ್ಯಾರ್ಥಿಗಳು ನಮ್ಮ […]
ನಿಟ್ಟೆ ಮಹಾವಿದ್ಯಾಲಯಕ್ಕೆ ಜಪಾನ್ ನೈಡೆಕ್ ಕಂಪೆನಿ ಪ್ರತಿನಿಧಿಗಳ ಭೇಟಿ
ನಿಟ್ಟೆ: ಜಪಾನ್ ಮೂಲದ ನೈಡೆಕ್ ಕಾರ್ಪೊರೇಶನ್‌ನ ಪ್ರತಿನಿಧಿಗಳು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯಕ್ಕೆ ಜ.೨೧ ರಂದು ಭೇಟಿನೀಡಿ ನಿಟ್ಟೆ ಸಂಸ್ಥೆಯಲ್ಲಿ ನೈಡೆಕ್ ವತಿಯಿಂದ ಒಂದು ‘ಸೆಂಟರ್ ಆಫ್ ಎಕ್ಸಲೆನ್ಸ್’ ಸ್ಥಾಪಿಸುವ ಬಗೆಗೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಳೂಣ್ಕರ್, ನಿಟ್ಟೆಯ ಇಂಟರ್‌ನ್ಯಾಷನಲ್ ಕೊಲ್ಯಾಬೊರೇಶನ್ ವಿಭಾಗದ ನಿರ್ದೇಶಕ ಹರಿಕೃಷ್ಣ ಭಟ್, ಉಪಪ್ರಾಂಶುಪಾಲ ಡಾ.ಶ್ರೀನಿವಾಸ ರಾವ್, ಸಹಪ್ರಾಧ್ಯಾಪಕ ಡಾ.ವೇಣೂಗೋಪಾಲ ಉಪಸ್ಥಿತರಿದ್ದರು. ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ೪ ಮಂದಿ ವಿದ್ಯಾರ್ಥಿಗಳು […]
ಕಾರ್ಕಳ: ಬೀದಿನಾಟಕ ಪ್ರದರ್ಶನ
ಉಡುಪಿ : ಕರ್ನಾಟಕ ಸರ್ಕಾರ ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ, ಉಡುಪಿ ಜಿಲ್ಲೆ ಇದರ ಆಶ್ರಯದಲ್ಲಿ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಪದ್ಧತಿ ನಿರ್ಮೂಲನೆಯ ಅರಿವು ಮೂಡಿಸುವ ಸಲುವಾಗಿ ಬೀದಿನಾಟಕವನ್ನು ಬುಧವಾರ ಕಾರ್ಕಳ ತಾಲೂಕಿನ ಪ್ರಮುಖ ಸ್ಥಳಗಳಲ್ಲಿ ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಕಾರ್ಕಳ ತಹಶೀಲ್ದಾರರು ಹಾಗೂ ತಾಲೂಕು ದಂಡಾಧಿಕಾರಿ ಪುರಂಧರ ಹೆಗ್ಗಡೆ ಉದ್ಘಾಟಿಸಿದರು. ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಯ ಕುರಿತು, ಮಕ್ಕಳಿಗೆ ಕಡ್ಡಾಯ ಶಿಕ್ಷಣವನ್ನು ನೀಡುವ ಕುರಿತು ನಾಟಕ, ನೃತ್ಯ, ಹಾಡಿನ ಮೂಲಕ ಬೀದಿನಾಟಕವನ್ನು ಸ್ವಸ್ತಿಕ್ ಪ್ರೊಡಕ್ಷನ್ಸ್, […]
ಅತ್ತೂರು ವಾರ್ಷಿಕ ಮಹೋತ್ಸವದ ಸಿದ್ಧತೆ ಭರದಿಂದ ಸಾಗಿದೆ: ಫಾ| ಜಾರ್ಜ್ ಡಿ’ಸೋಜಾ
ಕಾರ್ಕಳ: ಅತ್ತೂರಿನ ಸಂತ ಲಾರೆನ್ಸ್ ಬಸಿಲಿಕಾದ ವಾರ್ಷಿಕ ಮಹೋತ್ಸವ ವು ಜ. 27ರಿಂದ 31ರ ವರೆಗೆ ಜರಗಲಿದ್ದು ಇದರ ಸಿದ್ಧತೆ ಭರದಿಂದ ಸಾಗುತ್ತಿದೆ ಎಂದು ಬಸಿಲಿಕಾದ ನಿರ್ದೇಶಕ ಫಾ| ಜಾರ್ಜ್ ಡಿ’ಸೋಜಾ ಅವರು ತಿಳಿಸಿದ್ದಾರೆ. ಜ. 20ರಂದು ವಿವಿಧ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದೆ.5 ದಿವ್ಯ ಬಲಿಪೂಜೆಗಳು ಕೊಂಕಣಿಯಲ್ಲಿ,11 ಕನ್ನಡದಲ್ಲಿ ನಡೆಯಲಿವೆ. ಶಿವಮೊಗ್ಗ, ಬೆಳ್ತಂಗಡಿ, ಮೈಸೂರು, ಮಂಗಳೂರು ಹಾಗೂ ಉಡುಪಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರು ಬಲಿಪೂಜೆ ನೆರವೇರಿಸಲಿದ್ದಾರೆ. ಜ. 28ರಂದು ಪೂರ್ವಾಹ್ನ10ಕ್ಕೆ ಅಸ್ವಸ್ಥರಿಗಾಗಿ ಪೂಜೆ ನಡೆಯಲಿದೆ ಎಂದವರು ಮಾಹಿತಿ ನೀಡಿದರು. […]