2022ನೇ ಸಾಲಿನೊಳಗೆ ಉಡುಪಿ ಜನತೆಗೆ ವಾರಾಹಿ ನೀರು: ವಿಳಂಬ ಮಾಡುವ ಅಧಿಕಾರಿಗಳ ವಿರುದ್ಧ ಕ್ರಮ: ಎಚ್ಚರಿಕೆ

ಉಡುಪಿ: ವಾರಾಹಿಯಿಂದ ಉಡುಪಿ ನಗರಕ್ಕೆ ಕುಡಿಯುವ ನೀರು ಪೂರೈಸುವ ಯೋಜನೆಯ ಕಾಮಗಾರಿಯನ್ನು‌ ತ್ವರಿತವಾಗಿ ಮಾಡಬೇಕು. 2022ನೇ ಸಾಲಿನೊಳಗೆ ಜನರಿಗೆ ಶುದ್ದ ಕುಡಿಯುವ ನೀರು ಒದಗಿಸಬೇಕು. ಯೋಜನೆಯ ಅನುಷ್ಠಾನದಲ್ಲಿ ವಿಳಂಬ ಮಾಡುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ವಿಧಾನ ಪರಿಷತ್‌ ಉಪಸಭಾಪತಿ ಎಸ್‌.ಎಲ್‌. ಧರ್ಮೇಗೌಡ ಎಚ್ಚರಿಸಿದರು. ವಾರಾಹಿಯಿಂದ ಉಡುಪಿ ನಗರಕ್ಕೆ ಕುಡಿಯುವ ನೀರು ಪೂರೈಸುವ ಯೋಜನೆಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ, ಉಡುಪಿ ನಗರದ ಜನತೆಗೆ ಕುಡಿಯುವ ನೀರು ಒದಗಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು […]

ಕಟೀಲು ದೇವಸ್ಥಾನದಲ್ಲಿ ಸಂಭ್ರಮದ ಬ್ರಹ್ಮಕಲಶೋತ್ಸವ: ಆಚಾರ ವಿಚಾರಗಳು ದೇವಸ್ಥಾನಗಳಿಂದ ಆರಂಭವಾಗಲಿ: ಯಧುವೀರ್

ಕಟೀಲು: ಧಾರ್ಮಿಕ ಆಚಾರ ವಿಚಾರ ಪರಿಸರ ಕಾಳಜಿಗಳು ದೇವಸ್ಥಾನಗಳಿಂದ ಪ್ರಾರಂಭವಾಗಬೇಕು ಎಂದು  ಮೈಸೂರು ಸಂಸ್ಥಾನದ ಶ್ರೀ ಯದುವೀರ ಕೃಷ್ಣ ದತ್ತ ಚಾಮರಾಜ ಒಡೆಯರ್ ಹೇಳಿದರು. ಅವರು ಕಟೀಲು ಬ್ರಹ್ಮಕಲಶೋತ್ಸವ ದ ಉಗ್ರಾಣ ಮುಹೂರ್ತ, ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟಿಸಿ ಮಾತನಾಡಿದರು. ದಕ್ಷಿಣ ಕನ್ನಡದ ಸಾಂಸ್ಕೃತಿಕ ಹಾಗೂ ಧಾರ್ಮಿಕ  ಕಾರ್ಯಕ್ರಮಕ್ಕೆ ಎಷ್ಟು ಒತ್ತು ನೀಡುತ್ತಾರೋ ಆಷ್ಟೇ ಪ್ರಕೃತಿಯ ಬಗ್ಗೆ ಕಾಳಜಿಯುಳ್ಳವರು ಹಾಗು ಜೀವ ವೈವಿದ್ಯ ಜೊತೆಗೆ ತುಂಬಾ ಹೊಂದಾಣಿಕೆ ಇರುವವರು. ಧಾರ್ಮಿಕ ಆಚಾರ ವಿಚಾರ ಪರಿಸರ ಕಾಳಜಿಗಳು ದೇವಸ್ಥಾನಗಳಿಂದ ಪ್ರಾರಂಭವಾಗಬೇಕು. […]

ಜ. 30ಕ್ಕೆ ‘ನಾವು ಭಾರತೀಯರು’ ಬೃಹತ್ ಪ್ರತಿಭಟನಾ ಸಭೆ: ಅಮೃತ್‌ ಶೆಣೈ

ಉಡುಪಿ: ಕೇಂದ್ರ ಸರ್ಕಾರದ ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್‌ ಕಾಯ್ದೆಯನ್ನು ವಿರೋಧಿಸಿ ‘ನಾವು ಭಾರತೀಯರು’ ಪ್ರತಿಭಟನಾ ಸಭೆಯನ್ನು ಉಡುಪಿ ಕ್ರಿಶ್ಚಿಯನ್‌ ಹೈಸ್ಕೂಲ್‌ ಮೈದಾನದಲ್ಲಿ ಜ. 30ರಂದು ಸಂಜೆ 4 ಗಂಟೆಗೆ ಆಯೋಜಿಸಲಾಗಿದೆ ಎಂದು ಸಹಬಾಳ್ವೆ ಉಡುಪಿ ಸಂಘಟನೆಯ ಅಧ್ಯಕ್ಷ ಅಮೃತ್‌ ಶೆಣೈ ಹೇಳಿದರು. ಬುಧವಾರ ಆದಿಉಡುಪಿಯ ಅಂಬೇಡ್ಕರ್‌ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪ್ರತಿಭಟನಾ ಸಭೆಗೂ ಮೊದಲು ಮಧ್ಯಾಹ್ನ 2.30ಕ್ಕೆ ಉಡುಪಿ ಎಸ್ಪಿ ಕಚೇರಿಯಿಂದ ಬಹೃತ್‌ ಪಾದಯಾತ್ರೆ ಹೊರಡಲಿದೆ. ಪಾದಯಾತ್ರೆಯು ಎಸ್ಪಿ ಕಚೇರಿಯಿಂದ ಆರಂಭಗೊಂಡು ಬನ್ನಂಜೆ, ಸಿಟಿ […]

ಕುಂದಾಪುರ: ಶಿಕ್ಷ ಪ್ರಭಾ ಶಿಕ್ಷಣ ಸಂಸ್ಥೆಯಲ್ಲಿ ಜಿ.ಎಸ್.ಟಿ- ಕಂಪ್ಯೂಟರ್ ಮಾಹಿತಿ ಕಾರ್ಯಗಾರ

ಕುಂದಾಪುರ:  ಕುಂದೇಶ್ವರ ದೇವಸ್ಥಾನ ರಸ್ತೆಯ ಉತ್ತಮ ಕ್ಲಿನಿಕ್ ಬಿಲ್ಡಿಂಗ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷ ಪ್ರಭಾ ಅಕಾಡೆಮಿ ಆಫ್ ಕಾಮರ್ಸ್ ಎಜುಕೇಶನ್ (ಸ್ಪೇಸ್) ಸಿಎ/ಸಿಎಸ್/ಸಿಎಂಎ ಮತ್ತು ಬ್ಯಾಂಕಿಂಗ್ ತರಬೇತಿ ಸಂಸ್ಥೆ ಮತ್ತು ಜುವೆಲ್ಲರಿ ಅಸೋಸಿಯೇಷನ್ಸ್ ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ ಜಿ.ಎಸ್.ಟಿ ಮತ್ತು ಕಂಪ್ಯೂಟರ್ ಮಾಹಿತಿ ಕಾರ್ಯಾಗಾರ ತರಬೇತಿ ನಡೆಯಿತು. ಶಿಕ್ಷ ಪ್ರಭಾ ಅಕಾಡೆಮಿಯ ಪ್ರಾಧ್ಯಾಪಕ ಸಿಎ ಅರುಣ್ ನಾಯಕ್ ಕಾರ್ಯಕ್ರಮ ಉದ್ಘಾಟಿಸಿ, ಜಿ.ಎಸ್.ಟಿ ಹೊಂದಿರುವ ವರ್ತಕರು ತಮ್ಮ ಖರೀದಿ ಮತ್ತು ಮಾರಾಟದ ಮೇಲೆ ಜಿ.ಎಸ್.ಟಿ.ಯನ್ನು ಹೇಗೆ ಅಳವಡಿಸಿಕೊಳ್ಳಬೇಕು ಎನ್ನುವ […]

ಮಂಗಳೂರಿನ ಹೋಟೆಲ್ ನಲ್ಲಿ ಕೆಲಸ‌ನಿರ್ವಹಿಸುತ್ತಿದ್ದ ಬಾಂಬರ್ ಆದಿತ್ಯ ರಾವ್

ಮಂಗಳೂರು: ಮಂಗಳೂರಿನ ಬಜ್ಪೆಯಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬ್ಯಾಗ್‌ವೊಂದರಲ್ಲಿ ಸ್ಫೋಟಕ ಇರಿಸಿದ್ದ ಪ್ರಕರಣದ ಪ್ರಮುಖ ಆರೋಪಿ ಮಣಿಪಾಲದ ಆದಿತ್ಯ ರಾವ್, ಮಂಗಳೂರಿನ ಹೊಟೇಲ್‌ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ವಿಷಯ ಬಹಿರಂಗವಾಗಿದೆ. ಬಲ್ಮಠದ ಹೋಟೆಲ್‌ವೊಂದರಲ್ಲಿ ಒಂದು ತಿಂಗಳು ಕೆಲಸ ಮಾಡಿದ್ದಾನೆ. ಹೋಟೆಲ್‌ನ ಬಿಲ್ಲಿಂಗ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಆರೋಪಿ, ಅಚ್ಚುಕಟ್ಟಾಗಿಯೇ ಕೆಲಸ ನಿರ್ವಹಿಸುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಆರೋಪಿ ತಲೆಗೆ ಸದಾ ಕ್ಯಾಪ್ ಧರಿಸುತ್ತಿದ್ದ. ಯಾರ ಜತೆಗೂ ಮಾತುಕತೆಯಲ್ಲಿ ತೊಡಗುತ್ತಿರಲಿಲ್ಲ. ತಂತ್ರಜ್ಞಾನದ ಬಗ್ಗೆ ಬಹಳಷ್ಟು ತಿಳಿದುಕೊಂಡಿದ್ದ. ಅಲ್ಲದೆ, ಆನ್‌ಲೈನ್ ಶಾಪಿಂಗ್‌ವೊಂದರಿಂದ […]