ಕಚ್ಚೂರು ಶ್ರೀ ಮಾಲ್ತಿದೇವಿ ದೇವಸ್ಥಾನ ಶ್ರೀ ಬಬ್ಬುಸ್ವಾಮಿ ಮೂಲ ಕ್ಷೇತ್ರ: ಅದ್ದೂರಿ ಬ್ರಹ್ಮಕಲಶೋತ್ಸವ
ಬ್ರಹ್ಮಾವರ: ಕಚ್ಚೂರು ಶ್ರೀ ಮಾಲ್ತಿದೇವಿ ದೇವಸ್ಥಾನ ಶ್ರೀ ಬಬ್ಬುಸ್ವಾಮಿ ಮೂಲ ಕ್ಷೇತ್ರದಲ್ಲಿ ಶನಿವಾರ ಅಷ್ಟಬಂಧ ಬ್ರಹ್ಮಕಲಶೋತ್ಸವ ಜರಗಿತು. ಸಂಸದೆ ಶೋಭಾ ಕರಂದ್ಲಾಜೆ, ಆಡಳಿತ ಮಂಡಳಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಗೋಕುಲ್ ದಾಸ್ ಬಾರ್ಕೂರು, ಗೌರವಾಧ್ಯಕ್ಷ, ಜಿ. ಪಂ. ಅಧ್ಯಕ್ಷ ದಿನಕರ್ ಬಾಬು, ಪದಾಧಿಕಾರಿಗಳಾದ ಚನ್ನಪ್ಪ ಮೂಲ್ಕಿ, ಪ್ರೇಮಾನಂದ್, ರಘುರಾಮ್, ಕಮಲಾಕ್ಷ, ಬಾಬು ಮಲ್ಲಾರ್, ಶಿವಪ್ಪ ನಂತೂರು, ರವಿರಾಜ್, ಶಶಿಕಾಂತ್, ವಾಸುದೇವ ಹಂಗಾರಕಟ್ಟೆ, ದಯಾನಂದ್, ಶಂಕರ ಬೆಳಕು, ಕೆ.ಆರ್. ಕೃಷ್ಣ, ಜನಾರ್ಧನ ಬಿಜೈ ಮೊದಲಾದವರು ಉಪಸ್ಥಿತರಿದ್ದರು. ವೇ.ಮೂ. ರಮೇಶ್ […]
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಜೆ.ಪಿ. ನಡ್ಡಾ ಆಯ್ಕೆ; ಮೋದಿ-ಶಾ ನಂಬಿಕಸ್ಥನಿಗೆ ಒಲಿದ ಬಿಜೆಪಿ ಪಟ್ಟ
ನವದೆಹಲಿ: ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಜಗತ್ ಪ್ರಕಾಶ್ ನಡ್ಡಾ (ಜೆ.ಪಿ.ನಡ್ಡಾ) ಅವರು ಸೋಮವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆ ಮೂಲಕ ಪಕ್ಷದ ಸಂಘಟನೆ ವಿಚಾರದಲ್ಲಿ ಮೋದಿ ಮತ್ತು ಅಮಿತ್ ಶಾ ಅವರಿಗೆ ಅತ್ಯಂತ ನಂಬಿಕಸ್ಥ ನಾಯಕನಿಗೆ ಬಿಜೆಪಿ ಪಟ್ಟ ಒಲಿದಂತಾಗಿದೆ. ಬಿಜೆಪಿಯ ಕಾರ್ಯಾಧ್ಯಕ್ಷರಾಗಿದ್ದ ಜೆ.ಪಿ.ನಡ್ಡಾ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿರುವುದನ್ನು ಬಿಜೆಪಿ ಚುನಾವಣೆ ಸಮಿತಿಯ ಉಸ್ತುವಾರಿ ರಾಧಾ ಮೋಹನ್ ಸಿಂಗ್ ಘೋಷಣೆ ಮಾಡಿದ್ದಾರೆ. ದೆಹಲಿಯ ಬಿಜೆಪಿ ಮುಖ್ಯಕಚೇರಿಯಲ್ಲಿ ಪಕ್ಷದ ಹಿರಿಯ ನಾಯಕರು, ಗೃಹ ಸಚಿವ ಅಮಿತ್ ಶಾ […]
ಜೇಸಿಐ ಉಡುಪಿ ಇಂದ್ರಾಳಿ ಘಟಕದ ವತಿಯಿಂದ ವಿದ್ಯಾರ್ಥಿ ವೇತನ ನಿಧಿ ಸಂಗ್ರಹಣಾ ಅಭಿಯಾನ
ಉಡುಪಿ: ಜೇಸಿಐ ಉಡುಪಿ ಇಂದ್ರಾಳಿ ಘಟಕದ ವತಿಯಿಂದ ಉಡುಪಿ ಅದಮಾರು ಪರ್ಯಾಯ ಮಹೊತ್ಸವದ ಅಂಗವಾಗಿ ಮೀಸಲಾತಿ ರಹಿತ ಆರ್ಥಿಕವಾಗಿ ಹಿಂದುಳಿದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನಿಧಿ ಸಂಗ್ರಹಣಾ ಅಭಿಯಾನ”. ಕಾರ್ಯಕ್ರಮ ನಡೆಯಿತು. ರೋಯಾನ್ ಉದಯ ಕ್ರಾಸ್ತಾ ಕಾರ್ಯಕ್ರಮ ಉದ್ಘಾಟಿಸಿದರು. 2020ರ ವರ್ಷದ ಅಧ್ಯಕ್ಷರಾದ ಎಂ. ಏನ್. ನಾಯಕ್ , ಸ್ಥಾಪಕರಾದ ಮನೋಜ್ ಕಡಬ ಅವರ ನೇತೃತ್ವದಲ್ಲಿ ವಹಿಸಿದ್ದರು.ಜೆಸಿ ಐ ಸದಸ್ಯರು ಗಳಾದ ಶೆರ್ಲಿ ಮನೋಜ್ ,ಅಶೋಕ್ ಪೂಜಾರಿ , ನಾಗರಾಜ್ ಉಪಾದ್ಯಾಯ, ಉದಯ ಕೆ ಶೆಟ್ಟಿ […]
ಹಿಂದೂ ಧರ್ಮದ ರಕ್ಷಣೆ ದೊಡ್ಡ ಮಟ್ಟದಲ್ಲಿ ಆಗಬೇಕಿದೆ: ಸುನಿಲ್ ಕುಮಾರ್
ಉಡುಪಿ: ಪ್ರಸ್ತುತ ಹಿಂದೂ ಧರ್ಮ ರಕ್ಷಣೆಯ ಕೆಲಸ ದೊಡ್ಡಮಟ್ಟದಲ್ಲಿ ಆಗಬೇಕಿದ್ದು, ಅದು ಕೃಷ್ಣನೂರಿನಿಂದಲೇ ಆರಂಭ ಆಗಬೇಕು ಎಂದು ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಹೇಳಿದರು. ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಅದಮಾರು ಮಠದ ಆಶ್ರಯದಲ್ಲಿ ರಾಜಾಂಗಣದಲ್ಲಿ ಸೋಮವಾರ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು. ಸಿಎಎ ಬಗ್ಗೆ ತಪ್ಪು ಅಭಿಪ್ರಾಯಗಳನ್ನು ಮೂಡಿಸಿ ಸಮಾಜದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಸಲಾಗುತ್ತಿದೆ. ಪ್ರಸ್ತುತ ದೇಶ ಹಾಗೂ ನಮ್ಮ ಸುತ್ತಮುತ್ತ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ, ಹಿಂದೂ ಧರ್ಮದ ರಕ್ಷಣೆ ಮಾಡುವುದು ಎಷ್ಟು ಅವಶ್ಯಕ ಎನ್ನುವುದನ್ನು […]
ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ: ಶಂಕಿತನ ಫೋಟೊ ಬಿಡುಗಡೆ
ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶಂಕಿತನ ಫೋಟೋಗಳನ್ನು ಬಿಡುಗಡೆಗೊಳಿಸಿದ್ದಾರೆ. ಬಾಂಬ್ ಪತ್ತೆಯಾದ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸರು ತನಿಖೆ ನಡೆಸುತ್ತಿದ್ದು, ವಿಮಾನ ನಿಲ್ದಾಣದ ಸಿಸಿ ಕ್ಯಾಮರಾಗಳನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಆಟೋ ರಿಕ್ಷಾದಲ್ಲಿ ಬಂದ ವ್ಯಕ್ತಿಯೋರ್ವ ವಿಮಾನ ನಿಲ್ದಾಣಕ್ಕೆ ಪ್ರವೇಶ ಮಾಡಿದ್ದು ಟಿಕೆಟ್ ಕೌಂಟರ್ ಬಳಿ ಅನುಮಾನಾಸ್ಪದ ಬ್ಯಾಗ್ ಒಂದನ್ನು ಇಟ್ಟು ಹೋಗಿರುವ ದೃಶ್ಯ ಸೆರೆಯಾಗಿದೆ. ಹೀಗಾಗಿ ಆಟೋ ರಿಕ್ಷಾ ಹಾಗೂ ಕ್ಯಾಪ್ ಧರಿಸಿರುವ ವ್ಯಕ್ತಿಯ ಫೋಟೋಗಳನ್ನು ಬಿಡುಗಡೆಗೊಳಿಸಿದ್ದು, ಆದರೆ […]