ಸಮುದಾಯೋತ್ಸವ-2020 ಆಮ್ಚೊ ಸಂದೇಶ್ ವಿಶೇಷ ಸಂಚಿಕೆ ಅನಾವರಣ
ಉಡುಪಿ: ಯಾವುದೇ ಸಂಘಟನೆಯ ವಿಚಾರಗಳು ದಾಖಲಿಕರಣಗೊಂಡಾಗ ಅದು ಮುಂದಿನ ಪೀಳಿಗೆಗೆ ನೆನಪಾಗಿ ಉಳಿಯಲು ಸಹಕಾರಿಯಾಗುತ್ತದೆ ಎಂದು ಹಿರಿಯ ಪತ್ರಕರ್ತ ಶಶಿಧರ ಮಾಸ್ತಿಬೈಲು ಹೇಳಿದರು. ಅವರು ಶನಿವಾರ ಕೆಥೊಲಿಕ್ ಉಡುಪಿ ಪ್ರದೇಶ್ ಇದರ ವತಿಯಿಂದ ಉಡುಪಿ ಧರ್ಮಪ್ರಾಂತ್ಯದ ಇತಿಹಾಸದಲ್ಲಿ ಪ್ರಥಮ ಬಾರಿಗೆ 2020 ಜನವರಿ 19ರಂದು ಕಲ್ಯಾಣಪುರದ ಮೌಂಟ್ ರೋಜರಿ ಚರ್ಚಿನ ಮೈದಾನದಲ್ಲಿ ಆಯೋಜಿಸಿರುವ ಉಡುಪಿ ಧರ್ಮಪ್ರಾಂತ್ಯ ಮಟ್ಟದ ಚಾರಿತ್ರಿಕ ಸಮ್ಮೇಳನ ಸಮುದಾಯೋತ್ಸವ-2020 ಇದರ ಪ್ರಯುಕ್ತ ಹೊರತರಲಾದ ಆಮ್ಚೊ ಸಂದೇಶ್ ವಿಶೇಷ ಪುರವಣಿ ಬಿಡುಗಡೆಗೊಳಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿವಿಧ […]
ಏಸುಕ್ರಿಸ್ತನ ಪ್ರತಿಮೆ ಸ್ಥಾಪನೆ ವಿಚಾರ; ಬಿಜೆಪಿಯಿಂದ ರಾಜಕೀಯ ಲಾಭ ಪಡೆಯುವ ಹುನ್ನಾರ: ರಮಾನಾಥ ರೈ
ಮಂಗಳೂರು: ಕನಕಪುರದಲ್ಲಿ ಏಸುಕ್ರಿಸ್ತನ ಪ್ರತಿಮೆ ಸ್ಥಾಪನೆ ವಿರುದ್ಧ ಪ್ರತಿಭಟನೆ ಮಾಡುವ ಮೂಲಕ ಬಿಜೆಪಿ ಧರ್ಮದ ಆಧಾರದಲ್ಲಿ ಪ್ರಚೋದನೆ ಉಂಟು ಮಾಡಿ ಸಮುದಾಯ ಬೀದಿಗಿಳಿದಾಗ ರಾಜಕೀಯ ಲಾಭ ಪಡೆಯುವ ಹುನ್ನಾರವನ್ನು ಬಿಜೆಪಿ ಸೃಷ್ಟಿಸುತ್ತಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಆರೋಪಿಸಿದ್ದಾರೆ. ಮಂಗಳೂರಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯನ್ನು ಮತೀಯ ಪ್ರಯೋಗಾಲಯ ಮಾಡಲು ಪ್ರಯತ್ನಿಸಿದ ಸಂಘಟನೆಯ ನಾಯಕರು ಕನಕಪುರದಲ್ಲಿ ಪ್ರಚೋದನಕಾರಿಯಾಗಿ ಮಾತನಾಡಿ, ಶಾಂತಿ ಹಾಗೂ ಸಹಬಾಳ್ವೆಯನ್ನು ಬಯಸುವ ಸಮುದಾಯವನ್ನು ಪ್ರಚೋದಿಸುವ ಕೆಲಸ ಮಾಡಿದ್ದಾರೆ ಎಂದು […]
ಪರ್ಯಾಯ ಉತ್ಸವ: ಕೃಷ್ಣ ನಗರಿಯ ಸ್ವಚ್ಛತೆ ಕಂಡು ಸಾರ್ವಜನಿಕರು ಫುಲ್ ಖುಷ್
ಉಡುಪಿ: ಅದಮಾರು ಪರ್ಯಾಯ ಉತ್ಸವದ ಮೆರವಣಿಗೆ ಮುಕ್ತಾಯಗೊಳ್ಳುತ್ತಿದ್ದಂತೆ ನಗರಸಭೆಯ ಪೌರಕಾರ್ಮಿಕರು ಹಾಗೂ ಸ್ವಯಂ ಸೇವಕರು ಮೆರವಣಿಗೆ ಸಾಗಿಬಂದ ರಸ್ತೆಗಳನ್ನು ಸ್ವಚ್ಛಗೊಳಿಸಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು. ಅದಮಾರು ಮಠದ ಈಶಪ್ರಿಯ ಶ್ರೀಗಳು ಈಗಾಗಲೇ ಮುಂದಿನ ಎರಡು ವರ್ಷಗಳ ಪರ್ಯಾಯ ಅವಧಿಯಲ್ಲಿ ಪರಿಸರ ಸಂರಕ್ಷಣೆ ಹಾಗೂ ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಿದ್ದಾರೆ. ಅದರಂತೆ ಪುರಪ್ರವೇಶ, ಹೊರೆಕಾಣಿಕೆ ಹಾಗೂ ಪರ್ಯಾಯ ಮೆರವಣಿಗೆಯಲ್ಲಿ ಪ್ಲಾಸ್ಟಿಕ್ ಬ್ಯಾನರ್ ಬದಲು ಬಟ್ಟೆ ಬ್ಯಾನರ್‌ಗಳನ್ನು ಉಪಯೋಗಿಸಲಾಗಿತ್ತು. ಹಾಗೆಯೇ ಬಾಳೆಗಿಡಗಳನ್ನು ಬೇರು ಸಮೇತ ಕಿತ್ತುತಂದು ಸ್ವಾಗತ ಕಮಾನುಗಳಲ್ಲಿ ಅಲಂಕಾರಗೊಳಿಸಿ […]
ಅದಮಾರು ಪರ್ಯಾಯದ ಮೊದಲ ಅನ್ನಪ್ರಸಾದ; ಶನಿವಾರ 20-25 ಸಾವಿರ ಮಂದಿಗೆ ಬೊಂಬಾಟ್ ಭೋಜನ
ಉಡುಪಿ: ಅದಮಾರು ಮಠ ಪರ್ಯಾಯದ ಮೊದಲ ಅನ್ನಪ್ರಸಾದ ವಿತರಣೆ ಕಾರ್ಯ ಶನಿವಾರ ಮಹಾಪೂಜೆಯ ಬಳಿಕ ನೆರವೇರಿತು. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ವಿಶೇಷ ಹಾಲುಪಾಯಸದ ಸವಿಯನ್ನುಂಡರು. ರಾಜಾಂಗಣ ಸಮೀಪದ ಬೈಲಕೆರೆಯ ವಿಶಾಲ ಜಾಗದಲ್ಲಿ ಹಾಕಿದ್ದ ಚಪ್ಪರದಲ್ಲಿ 20ರಿಂದ 25 ಸಾವಿರ ಮಂದಿಗೆ ಭೋಜನ ವಿತರಿಸಲಾಯಿತು. ಬಹುತೇಕರು ಬಫೆ ಪದ್ಧತಿಯಲ್ಲಿ ಊಟ ಮಾಡಿದರೆ, ಇನ್ನು ಕೆಲವರು ನೆಲಕ್ಕೆ ಹಾಕಿದ್ದ ಹಾಸಿನಲ್ಲಿ ಕುಳಿತುಕೊಂಡು ವಿಶೇಷ ಭೋಜನದ ರುಚಿಯನ್ನು ಸವಿದರು. ಪರ್ಯಾಯ ಉತ್ಸವ ಹಾಗೂ ದರ್ಬಾರ್ ಅನ್ನು ಕಣ್ತುಂಬಿಕೊಳ್ಳಲು ಆಗಮಿಸಿದ್ದ ಜನರಿಗೆ […]
ಹೆಮ್ಮಾಡಿ ಆಧ್ಯಾತ್ಮಿಕ ಯೋಗ ಕಲಿಕಾ ಕೇಂದ್ರದ ವಾರ್ಷಿಕೋತ್ಸವ
ಕುಂದಾಪುರ: ನಿರಂತರ ಯೋಗ ಮಾಡುವುದರಿಂದ ಬೌದ್ಧಿಕವಾಗಿ, ಮಾನಸಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಯೋಗಗುರು ಪ್ರವೀಣ್ ಕುಮಾರ್ ಹೆಗ್ಡೆ ತಿಳಿಸಿದರು. ಅವರು ಇತ್ತೀಚೆಗೆ ಆದರ್ಶ ಯುವಕ ಮಂಡಲದಲ್ಲಿ ನಡೆದ ಹೆಮ್ಮಾಡಿ ಆಧ್ಯಾತ್ಮಿಕ ಯೋಗ ಕಲಿಕಾ ಕೇಂದ್ರದ ೬ ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು. ಯೋಗಬಂಧು ರಾಧಾಕೃಷ್ಣ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕೇಂದ್ರದ ಅಧ್ಯಕ್ಷೆ ಸುಜಾತ ಅಧ್ಯಕ್ಷತೆವಹಿಸಿ ಯೋಗಕೇಂದ್ರದ ಬಗ್ಗೆ ಹಿತನುಡಿಗಳನ್ನಾಡಿದರು. ಸತೀಶ್ ದೇವಾಡಿಗ ಕೇಂದ್ರದ ಆಯವ್ಯಯ ಮಂಡಿಸಿದರು. ಕೇಂದ್ರದ ಅಧ್ಯಕ್ಷೆ ಹಾಗೂ ಯೋಗ ಶಿಕ್ಷಕಿ […]