ನಿಟ್ಟೆ: ತಾಂತ್ರಿಕ ಮಹಾವಿದ್ಯಾಲಯದಲ್ಲಿ ರಕ್ತದಾನ ಶಿಬಿರ

ನಿಟ್ಟೆ: ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್), ರೆಡ್‌ಕ್ರಾಸ್ ಸಂಸ್ಥೆ, ನಿಟ್ಟೆ, ಮೆಕ್ಯಾನಿಕಲ್ ವಿಭಾಗದ ಏಐಎಂಎಸ್ ಘಟಕ, ರೋಟರಿಕ್ಲಬ್ ನಿಟ್ಟೆ, ನಿಟ್ಟೆ ಗಜ್ರಿಯಾ ಆಸ್ಪತ್ರೆ, ಕೆ.ಎಸ್ ಹೆಗ್ಡೆ ಮೆಡಿಕಲ್ ಕಾಲೇಜು, ವೆನ್ಲಾಕ್ ಆಸ್ಪತ್ರೆ ಮತ್ತು ಉಡುಪಿ ಜಿಲ್ಲಾ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ಜ.೧೬ ರಂದು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ರಕ್ತದಾನ ಶಿಬಿರ ನಡೆಯಿತು. ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ನಿರಂಜನ ಎನ್.ಚಿಪ್ಳೂಣ್ಕರ್ ಜ್ಯೋತಿ ಬೆಳಗಿಸುವ ಮೂಲಕ ಸಾಂಕೇತಿಕವಾಗಿ ಶಿಬಿರಕ್ಕೆ ಚಾಲನೆ ನೀಡಿದರು. ರಕ್ತದಾನ ಶಿಬಿರವನ್ನು […]

ಕಣ್ಮನ ಸೆಳೆಯುತ್ತಿವೆ ಪ್ರವೇಶದ್ವಾರ, ರಥಬೀದಿಯ ಸಿರಿ ಸಿಂಗಾರ : ಪರ್ಯಾಯಕ್ಕೆ ರೆಡಿಯಾಯ್ತು ಕೃಷ್ಣ ನಗರಿ

ಉಡುಪಿ: ಅದಮಾರು ಮಠದ ಪರ್ಯಾಯ ಮಹೋತ್ಸವಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ನಗರದ ಪ್ರಮುಖ ರಸ್ತೆಗಳಲ್ಲಿ ಹಾಕಿರುವ ಸ್ವಾಗತ ಕಮಾನುಗಳು ಪರ್ಯಾಯದ ವೈಭವಕ್ಕೆ ಮತ್ತಷ್ಟು ಮೆರಗು ನೀಡುತ್ತಿವೆ. ರಥಬೀದಿಗೆ ಸಂಪರ್ಕಿಸುವ ತೆಂಕಪೇಟೆ ಮಾರ್ಗದಲ್ಲಿ ತೆಂಗಿನ ಚಿಪ್ಪುಗಳಿಂದ ಶೃಂಗಾರಗೊಂಡಿರುವ ಬೃಹತ್‌ ಸ್ವಾಗತ ಕಮಾನು ಜನರನ್ನು ಆಕರ್ಷಿಸುತ್ತಿದೆ. ನಗರದ ಪ್ರಮುಖ ಪ್ರವೇಶದ್ವಾರಗಳಲ್ಲಿ ಅವಳಡಿಸಿರುವ ಸ್ವಾಗತ ಗೋಪುರಗಳು ವಿವಿಧ ಸಂಸ್ಕೃತಿ, ಪರಂಪರೆಯ ಶೈಲಿಯಲ್ಲಿ ಬಿಂಬಿಸುತ್ತಿವೆ. ಆದರೆ ತೆಂಕಪೇಟೆಯ ಸ್ವಾಗತ ಕಮಾನು ಬುಡಕಟ್ಟು ಸಮುದಾಯದ ಸಾಂಪ್ರದಾಯಿಕ ಶೈಲಿಯಲ್ಲಿ ಕಂಗೊಳಿಸುತ್ತಿದೆ. ಕೊರಗ ಯುವಕರಿಂದ ಕುಸರಿ ಕಾರ್ಯ: […]

ಜ.15ರಿಂದ 21: ಶ್ರೀ ಕ್ಷೇತ್ರ ಕಚ್ಚೂರು ಶ್ರೀ ಮಾಲ್ತಿದೇವಿ ದೇವಸ್ಥಾನದಲ್ಲಿ ಅದ್ಧೂರಿ ಬ್ರಹ್ಮಕಲಶೋತ್ಸವ

ಬ್ರಹ್ಮಾವರ: ಕಚ್ಚೂರು ಶ್ರೀ ಮಾಲ್ತಿದೇವಿ ದೇವಸ್ಥಾನ ಶ್ರೀ ಬಬ್ಬುಸ್ವಾಮಿ ಮೂಲ ಕ್ಷೇತ್ರದಲ್ಲಿ ಜನವರಿ 15ರಿಂದ 21ರವರೆಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ, ರಥ ಸಮರ್ಪಣೆ, ರಥೋತ್ಸವ ಮತ್ತು ವಾರ್ಷಿಕ ಜಾತ್ರಾ ಮಹೋತ್ಸವ . ಜನವರಿ 15 ಮತ್ತು 16 ರಂದು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿವೆ. ವಿಶೇಷ: ಜ. 17ರಂದು ಬೆಳಿಗ್ಗೆ ಸಾಮೂಹಿಕ ಆಶ್ಲೇಷಬಲಿ, ನೂತನ ರಥ ಸಮರ್ಪಣೆ, ಅಪರಾಹ್ನ 2 ರಿಂದ ಉಡುಪಿ ಜೋಡುಕಟ್ಟೆಯಿಂದ ಬೃಹತ್ ಹಸಿರು ಹೊರೆಕಾಣಿಕೆ ಮೆರವಣಿಗೆ ಜರಗಲಿದೆ. ಸಂಜೆ ಶಾಸಕ ಹಾಲಾಡಿ ಶ್ರೀನಿವಾಸ್ […]

ಅದಮಾರು ಪರ್ಯಾಯ ಉತ್ಸವ: ಎಲ್ಲೆಲ್ಲಿ ಸಂಚಾರ ಮಾರ್ಗ ಬದಲಾವಣೆ?ಇಲ್ಲಿದೆ ಮಾಹಿತಿ

ಉಡುಪಿ: ಜ. 17ಮತ್ತು 18ರಂದು ನಡೆಯುವ ಅದಮಾರು ಪರ್ಯಾಯ ಉತ್ಸವವನ್ನು ಕಣ್ತುಂಬಿಕೊಳ್ಳಲು ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಲಕ್ಷಾಂತರ ಮಂದಿ ಆಗಮಿಸಲಿದ್ದು, ಈ ಹಿನ್ನೆಲೆಯಲ್ಲಿ ಉಡುಪಿ ನಗರದಲ್ಲಿ ಮುಂಜಾಗೃತ ಕ್ರಮವಾಗಿ ಬೀಗಿ ಪೊಲೀಸ್‌ ಭದ್ರತೆ ಏರ್ಪಡಿಸಲಾಗಿದೆ. ಬಿಗಿ ಭದ್ರತೆ: 1 -ಎಸ್ಪಿ, 1 ಎಎಸ್ಸಿ, 8 ಡಿವೈಎಸ್ಪಿ, 23 ಇನ್‌ಸ್ಪೆಕ್ಟರ್‌, 65 -ಪಿಎಸ್‌ಐ, 193 -ಎಎಸ್‌ಐ, 289 ಎಚ್‌ಸಿ ಹಾಗೂ 530 ಪೊಲೀಸ್‌ ಕಾನ್ಸ್‌ಟೇಬಲ್ ಸೇರಿದಂತೆ 1110 ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಹೆಚ್ಚುವರಿಯಾಗಿ 300 ಗೃಹರಕ್ಷಕಸಿಬ್ಬಂದಿಯನ್ನು ಕರ್ತವ್ಯಕ್ಕೆ […]

ಈಶಪ್ರಿಯ ತೀರ್ಥ ಶ್ರೀಪಾದರು ಪರ್ಯಾಯ ಪೀಠವೇರಲು ಕ್ಷಣಗಣನೆ:ಅದ್ದೂರಿ ಉಡುಪಿ ಪರ್ಯಾಯೋತ್ಸವಕ್ಕೆ ನೀವೂ ಬನ್ನಿ

ಉಡುಪಿ:ಅದ್ದೂರಿ ಪರ್ಯಾಯ ಮಹೋತ್ಸವಕ್ಕೆ ಉಡುಪಿ ಮೈತೆರೆದು ನಿಂತಿದೆ.ಎಲ್ಲೆಲ್ಲೂ ಶ್ರೀ ಕೃಷ್ಣನ ‌ನಾಡು ಉಡುಪಿಯಲ್ಲಿ ಪರ್ಯಾಯ ಮಹೋತ್ಸವವಂತೆ ಎನ್ನುವ ಸುದ್ದಿಯೇ! . ಅಷ್ಟಮಠಗಳ ಸಾಲಿನಲ್ಲಿ 16 ವರ್ಷಗಳಿಗೊಮ್ಮೆ ನಡೆಯುವ ಈ ಚಕ್ರದಲ್ಲಿ ಈ ಭಾರೀ ಪರ್ಯಾಯ ಪೀಠ  ಅಲಂಕರಿಸಲಿರುವುದು ಅದಮಾರು ಮಠದ ಯತಿಗಳು. ಅದಮಾರು ಮಠದ 32ನೇ ಯತಿಗಳಾದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಗಳ ಶಿಷ್ಯರಾದ ಶ್ರೀ ಈಶಪ್ರಿಯ ತೀರ್ಥರು. ಇವರು ಅದಮಾರು ಮಠದ 33ನೇ ಯತಿಗಳು. 29 ವರ್ಷದ ಈಶಪ್ರಿಯ ತೀರ್ಥ ಸ್ವಾಮೀಜಿ ಜನಿಸಿದ್ದು ಶಿರೂರಿನಲ್ಲಿ.‌ ಇವರು […]