ಕುಂದಾಪುರ: ಗುತ್ತಿಗೆ ಕಂಪೆನಿಯಿಂದ ಮೂವತ್ತುಮುಡಿ ಬಸ್ ನಿಲ್ದಾಣ ಬಳಿಯ ಡಿವೈಡರ್ ತೆರವು:ಸ್ಥಳೀಯರ ಪ್ರತಿಭಟನೆಗೆ ಎಚ್ಚೆತ್ತ ಕಂಪೆನಿ

ಕುಂದಾಪುರ: ಇಲ್ಲಿನ ಮೂವತ್ತುಮುಡಿ ಬಸ್ ನಿಲ್ದಾಣ ಬಳಿಯ ಡಿವೈಡರ್ ಮುಚ್ಚಿರುವುದನ್ನು ವಿರೋಧಿಸಿ ಸ್ಥಳೀಯರು ದಿಢೀರ್ ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಹೆದ್ದಾರಿ ಗುತ್ತಿಗೆ ಕಂಪೆನಿ ಮುಚ್ಚಿರುವ ಡಿವೈಡರ್ ಅನ್ನು ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ. ಕುಂದಾಪುರ – ಕಾರವಾರ ಚತುಷ್ಪಥ ಕಾಮಗಾರಿ ಗುತ್ತಿಗೆ ವಹಿಸಿಕೊಂಡ ಐಆರ್‌ಬಿ ಕಂಪೆನಿಯು ಜನರಿಗೆ ಮಾಹಿತಿ ನೀಡದೆ ಡಿವೈಡರ್ ಅನ್ನು ಮುಚ್ಚಿದ್ದರಿಂದ ಆಕ್ರೋಶಗೊಂಡ ಸ್ಥಳೀಯರು ಮಂಗಳವಾರ ಸಂಜೆ ನೂರಾರು ಸಂಖ್ಯೆಯಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. […]

ಮಲ್ಪೆ ಮೀನುಗಾರರ ಸಂಘದಿಂದ ಪೇಜಾವರ ಶ್ರೀಗಳಿಗೆ ನುಡಿನಮನ

ಉಡುಪಿ:  ಮಲ್ಪೆ ಮೀನುಗಾರರ ಸಂಘದ ವತಿಯಿಂದ ಸಮಸ್ತ ಮೀನುಗಾರರ ಪರವಾಗಿಇತ್ತೀಚೆಗೆಕೃಷ್ಣೈಕ್ಯರಾದ ಪೇಜಾವರ ಮಠದ ಪರಮ ಪೂಜ್ಯ ಶ್ರೀ ಶ್ರೀಶ್ರೀ ವಿಶ್ವೇಶತೀರ್ಥ ಶ್ರೀಪಾದರಿಗೆ ನುಡಿನಮನ ಸಲ್ಲಿಸಲಾಯಿತು. ಮೀನುಗಾರರ ಸಂಘದಅಧ್ಯಕ್ಷರಾದ  ಕೃಷ್ಣ ಎಸ್. ಸುವರ್ಣಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿದಕ್ಷಿಣಕನ್ನಡ ಮತ್ತುಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್‌ಅಧ್ಯಕ್ಷರಾದ ಯಶ್‌ಪಾಲ್ ಸುವರ್ಣ ನುಡಿ ನಮನ ಸಲ್ಲಿಸಿದರು. ಸಮಾರಂಭದಲ್ಲಿ ಮೀನುಗಾರರ ಸಂಘದಉಪಾಧ್ಯಕ್ಷರಾದ ರಮೇಶ್‌ಕೋಟ್ಯಾನ್,  ನಾಗರಾಜಕುಂದರ್,  ಸಾಧು ಸಾಲ್ಯಾನ್,  ಶಿವಪ್ಪ ಕಾಂಚನ್, ಮೀನುಗಾರಿಕೆಇಲಾಖೆಯ ಉಪ ನಿರ್ದೇಶಕರಾದ  ಕೆ. ಗಣೇಶ್, ಸಹಾಯಕ ನಿರ್ದೇಶಕರಾದ  ಶಿವ ಕುಮಾರ್,  ದಯಾನಂದ […]

ಪೇಜಾವರ ಶ್ರೀಗಳ ಮಹಾಸಮಾರಾಧನೋತ್ಸವ; ಪರಿಶಿಷ್ಟ ಜನರ ಕಾಲೊನಿಯಲ್ಲಿ ಅನ್ನದಾನ

ಉಡುಪಿ: ಪೇಜಾವರ ಶ್ರೀ ವಿಶ್ವೇಶ ತೀರ್ಥಶ್ರೀಪಾದರ ಮಹಾ ಸಮಾರಾಧನೋತ್ಸವದ‌ ಪ್ರಯುಕ್ತ ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠ ಉಡುಪಿ, ಶ್ರೀಕೃಷ್ಣ ಮಠ, ಶ್ರೀ ಪೇಜಾವರ ಮಠ ಸೇರಿದಂತೆ ದೇಶಾದ್ಯಂತ ಇರುವ ಪೇಜಾವರ ಮಠದ ಶಾಖೆಗಳು, ಅತಿಥಿಗೃಹ, ಶಾಲೆ ಕಾಲೇಜು ಅನಾಥಾಶ್ರಮ ಸೇವಾಧಾಮ ವಿದ್ಯಾರ್ಥಿನಿ ನಿಲಯಗಳೂ ಸೇರಿದಂತೆ 85 ಕ್ಕೂ ಅಧಿಕ ಕಡೆಗಳಲ್ಲಿ ಗುರುವಾರ ವಿವಿಧ ಧಾರ್ಮಿಕ ವಿಧಿವಿಧಾನಗಳು‌, ಸಾಮೂಹಿಕ ಅನ್ನಾರಾಧನೆ ವಿದ್ವತ್ ಗೋಷ್ಠಿ ವೈಭವದಿಂದ ನೆರವೇರಿತು. ಉಡುಪಿ ಪೇಜಾವರ ಮಠದಲ್ಲಿಯೂ ಬೆಳಿಗ್ಗೆ ಪವಮಾನ ಹೋಮ, ಭಜನೆ, ಪಾರಾಯಣ, ಪಾದುಕಾ ಪೂಜಾ […]