ಬಿಜೆಪಿ ಬಂಡವಾಳಗಾರರ ಗುಲಾಮಿ ಸರ್ಕಾರ: ಕೇಂದ್ರದ ವಿರುದ್ದ ಸುರೇಶ್ ಕಲ್ಲಾಗರ್ ವಾಗ್ದಾಳಿ

ಕುಂದಾಪುರ: ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲದ ಸರ್ಕಾರ ಇಂದು ಅಧಿಕಾರವನ್ನು ನಡೆಸುತ್ತಿದೆ. ಕಾರ್ಮಿಕರ ಬೇಡಿಕೆಗಳಿಗೆ ಸ್ಪಂದಿಸಿ ಮುಖಂಡರನ್ನು ಕರೆದು ಮಾತುಕತೆ ನಡೆಸಬೇಕಿದ್ದ ಸರ್ಕಾರ ಇಂದು ಅಂಬಾನಿ, ಅದಾನಿಯಂತಹ ಉದ್ಯಮಿಗಳೊಂದಿಗೆ ಮಾತುಕತೆ ನಡೆಸುತ್ತಿದೆ. ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಬಂಡವಾಳಗರರ ಗುಲಾಮಿ ಸರ್ಕಾರ. ಈ ಲಜ್ಜೆಗೆಟ್ಟ ಸರ್ಕಾರ ಎಷ್ಟು ಬೇಗ ತೊಲಗುತ್ತೊ ಅಷ್ಟು ಬೇಗ ಕಾರ್ಮಿಕರಿಗೆ ಮುಕ್ತಿ ಸಿಗುತ್ತದೆ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಗುಡುಗಿದರು. ಅವರು ಕಾರ್ಮಿಕ ಕಾನೂನುಗಳ ರಕ್ಷಣೆಗಾಗಿ, ಕೇಂದ್ರ ಸರ್ಕಾರದ […]

ಬಿಲ್ಲವ ಮುಸ್ಲಿಮ್ ಸ್ನೇಹ ಸಮಾವೇಶ ಮುಂದೂಡಿಕೆ, ತಮ್ಮ ಸ್ವಾರ್ಥ ಹಿತಾಸಕ್ತಿಗಳಿಗಾಗಿ ಕೆಲವರಿಂದ ಕೀಳುಮಟ್ಟದ ಕುತಂತ್ರ: ಸೊರಕೆ ಆರೋಪ

ಉಡುಪಿ: ಇದೇ 11ರಂದು ಉಡುಪಿಯಲ್ಲಿ ನಡೆಯಬೇಕಿದ್ದ ಬಿಲ್ಲವ ಮತ್ತು ಮುಸ್ಲಿಮ್‌ ಸ್ನೇಹ ಸಮಾವೇಶ ವಿರುದ್ಧ ಕೆಲವರು ಗೊಂದಲ ಸೃಷ್ಟಿಸಿ, ತಮ್ಮ ಸ್ವಾರ್ಥ ಹಿತಾಸಕ್ತಿಗಾಗಿ ಸಮಾಜ ಮತ್ತು ಸಮುದಾಯದ ಒಳಿತನ್ನು ಬಲಿಕೊಟ್ಟು ಕೀಳುಮಟ್ಟದ ಕುತಂತ್ರ ನಡೆಸುತ್ತಿದ್ದಾರೆ ಎಂದು ಮಾಜಿ ಸಚಿವ ಹಾಗೂ ಸಮಾವೇಶದ ಸ್ವಾಗತ ಸಮಿತಿಯ ಅಧ್ಯಕ್ಷ ವಿನಯಕುಮಾರ್‌ ಸೊರಕೆ ಹೇಳಿದರು. ಅಜ್ಜರಕಾಡಿನ ಪುರಭವನದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅನಗತ್ಯವಾಗಿ ಸಾಮಾಜಿಕ ಜಾಲತಾಣಗಳನ್ನು ದುರುಪಯೋಗಿಸಿ ಶುದ್ಧ ಸುಳ್ಳುಗಳನ್ನು ಪಸರಿಸುತ್ತಿದ್ದಾರೆ. ನಮ್ಮ ಸ್ವಾಗತ ಸಮಿತಿಯ ಸದಸ್ಯರು ಮತ್ತು […]

ಉಡುಪಿ: ಈಶಪ್ರಿಯ ಶ್ರೀಗಳ ಸಂಭ್ರಮದ ಪುರಪ್ರವೇಶ

ಉಡುಪಿ: ಉಡುಪಿ ಶ್ರೀಕೃಷ್ಣನ ಮಠದಲ್ಲಿ ಮುಂದಿನ ಎರಡು ವರ್ಷಗಳ ಕಾಲ ಪರ್ಯಾಯ ಪೀಠರೋಹಣ ಮಾಡಲಿರುವ ಅದಮಾರು ಮಠದ ಶ್ರೀ ಈಶಪ್ರೀಯ ಸ್ವಾಮೀಜಿ ಅವರ ಪುರಪ್ರವೇಶ ಗುರುವಾರ ನಡೆಯಿತು‌.‌ ಜೋಡುಕಟ್ಟೆಯಿಂದ ಶ್ರೀಕೃಷ್ಣ ಮಠದ ವರೆಗೆ ಪುರ ಪ್ರವೇಶದ ಮೆರವಣಿಗೆ ಸಾಗಿ ಬಂತು. ಈಶಪ್ರಿಯ ಶ್ರೀಗಳು ಕಾಲ್ನಡಿಗೆಯಲ್ಲೇ ಆಗಮಿಸಿದರು‌. ಅದಮಾರು ಮಠದ ಹಿರಿಯ ಶ್ರೀಗಳಾದ ವಿಶ್ವಪ್ರಿಯ ತೀರ್ಥರು ಆಶೀರ್ವಾದಿಸಿದರು‌. ಮೆರವಣಿಗೆಯಲ್ಲಿ ವಿಶೇಷ ಹುಲಿಕುಣಿತ, ಯಕ್ಷಗಾನ, ಬೇರೆ ಬೇರೆ ಭಾಗದ ಹತ್ತಾರು ಕಲಾ ತಂಡಗಳು, ಸಾಂಸ್ಕೃತಿಕ ತಂಡಗಳು ಭಾಗವಹಿಸಿದ್ದು, ಮೆರವಣಿಗೆಯ ಮೆರುಗು […]

ಕಂದಾಯ ಇಲಾಖೆಯಿಂದ “ಹಳ್ಳಿಗಳಿಗೆ ನಡೆಯಿರಿ ಅಧಿಕಾರಿಗಳೇ” ಕಾರ್ಯಕ್ರಮ – ಸಚಿವ ಅಶೋಕ್

  ಉಡುಪಿ : ಕಂದಾಯ ಇಲಾಖೆ ವತಿಯಿಂದ, ಜನರ ಮನೆ ಬಾಗಿಲಿಗೇ ತೆರಳಿ ಸೌಲಭ್ಯ ವಿತರಿಸುವ “ಹಳ್ಳಿಗಳಿಗೆ ನಡೆಯಿರಿ ಅಧಿಕಾರಿಗಳೇ” ಎಂಬ ವಿನೂತನ ಕಾರ್ಯಕ್ರಮವನ್ನು ಜಾರಿಗೆ ತರಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ. ಅವರು ಬುಧವಾರ ಉಡುಪಿಯಲ್ಲಿ, ನೂತನವಾಗಿ ನಿರ್ಮಾಣಗೊಂಡ 10 ಕೋಟಿ ವೆಚ್ಚದ ಮಿನಿ ವಿಧಾನಸೌಧ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು ಮತ್ತು  ತಹಸೀಲ್ದಾರರು ಪ್ರತಿ ತಿಂಗಳಲ್ಲಿ ಒಂದು ದಿನ, ತಮ್ಮ ವ್ಯಾಪ್ತಿಯಲ್ಲಿ ಹಲವು ದಿನಗಳಿಂದ ಬಾಕಿ […]

ರಾಜ್ಯದಲ್ಲಿ ಕಾಲಮಿತಿಯಲ್ಲಿ 4 ಲಕ್ಷ ಮನೆಗಳ ನಿರ್ಮಾಣ – ಸಚಿವ ಸೋಮಣ್ಣ

ಉಡುಪಿ : ರಾಜ್ಯದಲ್ಲಿ 2 ವರ್ಷಗಳ ಕಾಲಮಿತಿಯಲ್ಲಿ 4 ಲಕ್ಷ ಬಡವರಿಗೆ ಮನೆ ನಿರ್ಮಾಣ ಮಾಡುವ ಗುರಿ ಹೊಂದಲಾಗಿದ್ದು, ರಾಜ್ಯದಲ್ಲಿನ ಯಾವುದೇ ಕುಟುಂಬ ವಸತಿ ರಹಿತವಾಗದಂತೆ ಪ್ರತಿಯೊಬ್ಬರಿಗೂ ಸೂರು ಒದಗಿಸಲು ಸರ್ಕಾರ ಬದ್ದವಾಗಿದೆ ಎಂದು ರಾಜ್ಯದ ವಸತಿ ಸಚಿವ, ತೋಟಗಾರಿಕೆ ಮತ್ತು ರೇಷ್ಮೆ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ. ಅವರು ಬುಧವಾರ, ಉಡುಪಿ ನಗರಸಭಾ ವ್ಯಾಪ್ತಿಯ ಹೆರ್ಗಾ ಗ್ರಾಮದ ಬಬ್ಬುಸ್ವಾಮಿ ಲೇಔಟ್ ನಲ್ಲಿ, ಪ್ರಧಾನ ಮಂತ್ರಿ ಆವಾಸ್ ಯೋಜನೆ-ಸರ್ವರಿಗೂ ಸೂರು (ನಗರ)(ಜಿ+3) ಮಾದರಿಯ 460 ಮನೆಗಳ ನಿರ್ಮಾಣ ಕಾಮಗಾರಿಯ […]