ಆಳ್ವಾಸ್ ಕ್ರೀಡಾಕೂಟಕ್ಕೆ ಸಾಂಸ್ಕೃತಿಕ ಮೆರುಗು: ವಿಜಯ ವೇದಿಕೆಯಲ್ಲಿ ಫತೇ ಬ್ಯಾಂಡ್ ವೈಭವ
ಮೂಡುಬಿದಿರೆ: 80ನೇ ಅಖಿಲಭಾರತ ವಿಶ್ವವಿದ್ಯಾಲಯದ ಕ್ರೀಡಾಕೂಟದ ಎರಡನೇ ದಿನವಾದ ಶುಕ್ರವಾರ ಮೊದಲನೇ ದಿನ ಹಾಗೂ ಎರಡನೇ ದಿನದಂದು ವಿಜೇತರಾದ ಕ್ರೀಡಾರ್ಥಿಗಳಿಗೆ ವಿಜಯ ವೇದಿಕೆಯಲ್ಲಿ ಪದಕ ಪ್ರದಾನಿಸಿ ಗೌರವಿಸಲಾಯಿತು. ವಿಜೇತ ಕ್ರೀಡಾಪಟುಗಳಿಗೆ ಮಾಜಿ ಸಚಿವ ಅಭಯಚಂದ್ರ ಜೈನ್, ಮೂಡುಬಿದಿರೆ ಪಂಡಿತ್ ರೆಸಾರ್ಟ್ ಮಾಲೀಕ ಲಾಲ್ ಗೋಯಲ್ ಹಾಗೂ ಕರ್ನಾಟಕ ಅಥ್ಲೆಟಿಕ್ ಅಸೋಸಿಯೇಶನ್‍ನ ಸಂಘಟನಾ ಕಾರ್ಯದರ್ಶಿ ಬಾಬುಶೆಟ್ಟಿ ಸೇರಿದಂತೆ ಗಣ್ಯರು ಪದಕ ವಿತರಿಸಿದರು. ವಿಜೇತರಿಗೆ ಹಾಗೂ ನೂತನ ಕೂಟ ದಾಖಲೆ ಮಾಡಿದ ವಿದ್ಯಾರ್ಥಿಗಳಿಗೆ ನಗದು ನೀಡಿ ಪುರಸ್ಕರಿಸಲಾಯಿತು. ವಿಜಯವೇದಿಕೆಯಲ್ಲಿ ಗಮನ […]
ಉಡುಪಿ:ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಉಚಿತ ಆಯುರ್ವೇದ ಔಷಧ ವಿತರಣಾ ಕಾರ್ಯಕ್ರಮ
ಉಡುಪಿ: ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಬೆಂಗಳೂರಿನ ಉಪಾಧ್ಯ ಆಯುರ್ವೇದ ಹೆಲ್ತ್ ಕ್ಯಾರ್ ನವರು ಆಯೋಜಿಸಿದ್ದ ಉಚಿತ ಅರೋಗ್ಯ ತಪಾಸಣಾ ಶಿಬಿರ ಹಾಗೂ ಉಚಿತ ಆಯುರ್ವೇದ ಔಷಧ ವಿತರಣಾ ಕಾರ್ಯಕ್ರಮವನ್ನು ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಉದ್ಘಾಟಿಸಿ ಹಿರಿಯ ಯತಿಗಳಾದ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹರಿಪಾದ ಸೇರಿದ್ದರೂ ನಮ್ಮೊಳಗೇ ಇದ್ದು ಇಂತಹ ಸಮಾಜಮುಖಿ ಕೆಲಸವನ್ನು ಮಾಡಲು ಅವರೇ ಸ್ಫೂರ್ತಿ,ಇಂದು ಸಾಯಂಕಾಲ ಅವರ ನುಡಿ ನಮನ ಇದೆ ವೇದಿಕೆಯಲ್ಲಿ […]
ನಿವೇಶನ ರಹಿತರೆಲ್ಲರಿಗೂ ಮನೆ ನಿರ್ಮಿಸಿ ಕೊಡುವ ಗುರಿ: ಕೆ. ರಘುಪತಿ ಭಟ್
ಉಡುಪಿ : ಜಿಲ್ಲೆಯಲ್ಲಿ 80% ಜನರು ಸ್ವಂತ ಮನೆಯಿಲ್ಲದೆ ಬಾಡಿಗೆ ಮನೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಬಡತನದಲ್ಲಿರುವ ಈ ಕುಟುಂಬಗಳಿಗೆ ತಮ್ಮದೇ ಆದ ಸ್ವಂತ ಮನೆ ನಿರ್ಮಾಣ ಮಾಡುವ ಕನಸಿದ್ದು, ಆ ಕನಸನ್ನು ನನಸು ಮಾಡಲು ಕರ್ನಾಟಕ ಕೊಳಗೇರಿ ಮಂಡಳಿ ಮತ್ತು ನಗರಸಭೆ ಸಜ್ಜಾಗಿದೆ ಎಂದು ಶಾಸಕ ಕೆ.ರಘುಪತಿ ಭಟ್ ಹೇಳಿದರು. ಅವರು, ಶನಿವಾರ ಅಜ್ಜರಕಾಡು ಪುರಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಮತ್ತು ಉಡುಪಿ ನಗರಸಭೆ ವತಿಯಿಂದ ನಿವೇಶನ ರಹಿತರಿಗೆ ವಸತಿ ನಿರ್ಮಾಣ […]
ಕೊಳ್ಳೇಗಾಲ: ಬಾಲ್ಯವಿವಾಹಕ್ಕೆ ಪ್ರೋತ್ಸಾಹ ಯತ್ನ: 2 ವರ್ಷ ಜೈಲು
ಕೊಳ್ಳೇಗಾಲ ತಾಲ್ಲೂಕಿನಲ್ಲಿ ಬಾಲ್ಯ ವಿವಾಹಕ್ಕೆ ಪ್ರೋತ್ಸಾಹ ನೀಡಿದ ವರ ಮತ್ತು ಆತನ ಪೋಷಕರು ಹಾಗೂ ವಧುವಿನ ತಾಯಿಗೆ ತಲಾ ಎರಡು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿ, ನಗರದ ಸಿವಿಲ್ ನ್ಯಾಯಾಲಯ ಆದೇಶ ಹೊರಡಿಸಿದೆ. ಜೈಲು ಶಿಕ್ಷೆಯೊಂದಿಗೆ ತಲಾ ₹5,000 ದಂಡ ವಿಧಿಸಿದೆ. ಗುಂಡಿ ಮಾಳದ ಗ್ರಾಮದ ಮಹದೇವ ಬಸಮ್ಮ ದಂಪತಿ, ವರ ಮಹದೇವ ಸ್ವಾಮಿ ಹಾಗೂ ಯಳಂದೂರು ತಾಲ್ಲೂಕಿನ ನಾಗಮ್ಮ ಶಿಕ್ಷೆಗೆ ಗುರಿಯಾದವರು.
ಹೆರ್ಗ ವ್ಯವಸಾಯ ಸೇವಾ ಸಹಕಾರಿ ಸಂಘ: ಶತಮಾನೋತ್ಸವ ಸಂಭ್ರಮ ಜ.5 ರಂದು ನವೀಕೃತ ಪ್ರಧಾನ ಕಚೇರಿ ಕಟ್ಟಡ ಉದ್ಘಾಟನೆ
ಉಡುಪಿ: ಹೆರ್ಗ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ ಇದರ ಶತಮಾನೋತ್ಸವ ಸಂಭ್ರಮ, ನವೀಕೃತ ಪ್ರಧಾನ ಕಚೇರಿ ಕಟ್ಟಡ ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭ ಜ.05 ರಂದು ಪರ್ಕಳ ಸಂಘದ ಪ್ರಧಾನ ಕಚೇರಿಯಲ್ಲಿ ನಡೆಯಲಿದೆ. ಸಮಾರಂಭದ ಉದ್ಘಾಟನೆಯನ್ನು ಬಸವರಾಜ ಬೊಮ್ಮಾಯಿ, ಮಾನ್ಯ ಗೃಹ ಸಚಿವರು, ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು ನಡೆಸಲಿದ್ದಾರೆ. ಅಧ್ಯಕ್ಷತೆಯನ್ನು ಉಡುಪಿ ವಿಧಾನಸಭಾ ಕ್ಷೇತ್ರ ಶಾಸಕ ಕೆ ರಘುಪತಿ ಭಟ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ […]