ಪೌರತ್ವ‌ ತಿದ್ದುಪಡಿ ಕಾಯಿದೆ-2019 ವಿಭಾಗ ಮಟ್ಟದ ಕಾರ್ಯಗಾರ ಉದ್ಘಾಟನೆ

ಮಂಗಳೂರು: ಭಾರತೀಯ ಜನತಾ ಪಾರ್ಟಿ, ದಕ್ಷಿಣ ಕನ್ನಡ ಜಿಲ್ಲಾ ಕಚೇರಿ ಪೌರತ್ವ ತಿದ್ದುಪಡಿ ಕಾಯ್ದೆ – 2019 (CAA) ವಿಭಾಗ ಮಟ್ಟದ ಕಾರ್ಯಗಾರವನ್ನು ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ನಿರ್ಮಲ್ ಕುಮಾರ್ ಸುರಾನ ಅವರು ಉದ್ಘಾಟಿಸಿದರು. ಅನಂತರ ಮಾತನಾಡಿದ ಅವರು, ಕೇಂದ್ರ ಸರಕಾರದ, ಪ್ರಧಾನಿ ಅವರ ಮಹತ್ವಾಕಾಂಕ್ಷೆಯ ಹಲವಾರು ಯೋಜನೆಗಳು ತಳ ಮಟ್ಟದ ಜನರಿಗೆ ತಲುಪುತ್ತಿದೆ. ಪೌರತ್ವ ಕಾಯಿದೆಯ ಬಗ್ಗೆ ಕೆಲವರು ಗೊಂದಲ ಉಂಟು ಮಾಡಿದ್ದಾರೆ. ಈ ನಿಟ್ಟಿನಲ್ಲಿ ಪೌರತ್ವ ಕಾಯ್ದೆಯ ಬಗ್ಗೆ ಕಾರ್ಯಕರ್ತರಿಗೆ ಅರಿವು ಮೂಡಿಸಿ ಜನತೆಗೆ […]

ಹೊಸ ವರ್ಷದ ಸಂಭ್ರಮ: ವಿಶೇಷವಾಗಿ ಅಲಂಕಾರಗೊಂಡ ಧರ್ಮಸ್ಥಳ ಕ್ಷೇತ್ರ

ಮಂಗಳೂರು: ಹೊಸ ವರ್ಷದ ಮೊದಲ ದಿನವಾದ ಇಂದು‌ ಕರಾವಳಿಯ ಪುಣ್ಯ ಕ್ಷೇತ್ರಗಳಿಗೆ ಹೆಚ್ಚಿನ ಸಂಖ್ಯೆಯ ಭಕ್ತರು ದೇವರ ದರ್ಶನ ಪಡೆಯಲು ನಾಡಿನೆಲ್ಲೆಡೆಯಿಂದ ಆಗಮಿಸಿದ್ದಾರೆ. ದಕ್ಷಿಣ ಭಾರತದ ಪ್ರಸಿದ್ಧ ಕ್ಷೇತ್ರ ಧರ್ಮಸ್ಥಳಕ್ಕೂ ಭಕ್ತರು ಆಗಮಿಸಿದ್ದಾರೆ. ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಕ್ಷೇತ್ರವನ್ನು ವಿಶೇಷವಾಗಿ ಹೂಗಳಿಂದ ಸಿಂಗರಿಸಲಾಗಿದೆ. ಕಳೆದ ೧೨ ವರ್ಷಗಳಿಂದ ಬೆಂಗಳೂರಿನ ಹಂದ್ರಲೇಔಟ್ ನಿವಾಸಿಗಳಾಗ ಸಾಯಿ ಸರವಣ, ಗೋಪಾಲ ರಾವ್ ಹಾಗೂ ಆನಂದ ಮಂಜುನಾಥ ರಾವ್ ದೇವಸ್ಥಾನವನ್ನು ಹೊಸ ವರ್ಷದ ದಿನ ಸೇವಾರ್ಥವಾಗಿ ದೇಗುಲವನ್ನು ಅಲಂಕಾರ ಮಾಡುತ್ತಿದ್ದಾರೆ. ಕಬ್ಬು ಭತ್ತದ […]

ಜ.4: ವಿಶ್ವಗುರು ಪೇಜಾವರ ಶ್ರೀಗಳಿಗೆ ಉಡುಪಿ ನಾಗರಿಕರ ಪ್ರಣಾಮಪೂರ್ವಕ ಶ್ರದ್ಧಾಂಜಲಿ

ಉಡುಪಿ: 8 ದಶಕಗಳ ಕಾಲ ಯತಿಶ್ರೇಷ್ಠರಾಗಿ ಯತಿಧರ್ಮಕ್ಕೆ ಹೊಸ ಭಾಷ್ಯ ಬರೆದು ವಿಶ್ವಗುರು ಎಂದು ಎಲ್ಲ ವರ್ಗದ ಜನರಿಂದ ಗೌರವಾದರಕ್ಕೆ ಭಾಜನರಾಗಿ ಡಿ. 29ರಂದು ಶ್ರೀಕೃಷ್ಣೈಖ್ಯರಾದ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವೇಶತೀರ್ಥರಿಗೆ ಪ್ರಣಾಮಪೂರ್ವಕ ಶ್ರದ್ಧಾಂಜಲಿ ಅರ್ಪಿಸಲು ಉಡುಪಿಯ ಸಮಸ್ತ ನಾಗರಿಕರು ಸಂಕಲ್ಪಿಸಿದ್ದು, ಜ. 4ರಂದು ಸಂಜೆ 6 ಗಂಟೆಗೆ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಸಭೆಯನ್ನು ಆಯೋಜಿಸಲಾಗಿದೆ. ಪರ್ಯಾಯ ಶ್ರೀಪಲಿಮಾರು ಮಠಾಧೀಶರಾದ ಶ್ರೀಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ದಿವ್ಯಸಾನಿಧ್ಯದಲ್ಲಿ ಜರಗುವ ನುಡಿನಮನದಲ್ಲಿ ನಾಡಿನ ಎಲ್ಲ ವರ್ಗದ ಪ್ರಮುಖರು ಪಾಲ್ಗೊಳ್ಳಲಿರುವರು. ಪೇಜಾವರ […]

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿ ಎನ್. ವಿಷ್ಣುವರ್ಧನ್; ಸರಕಾರದ ಆದೇಶದಲ್ಲಿ ಬದಲಾವಣೆ

ಉಡುಪಿ: ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ನೇಮಕ ಆದೇಶದಲ್ಲಿ ಮಾರ್ಪಾಡುಗೊಳಿಸಿರುವ ರಾಜ್ಯ ಸರಕಾರ, ಅಕ್ಷಯ್ ಮಚ್ಚೀಂದ್ರ ಅವರನ್ನು ಕೈಬಿಟ್ಟು ಬೆಂಗಳೂರು ನಗರ ಡಿಸಿಪಿ(ಆಡಳಿತ) ಆಗಿದ್ದ ಎನ್.ವಿಷ್ಣುವರ್ಧನ್ ಅವರನ್ನು ನೂತನ ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿ ಬುಧವಾರ  ನಿಯುಕ್ತಿಗೊಳಿಸಿದೆ. ಡಿ.31ರಂದು ರಾತ್ರಿ ಹೊರಡಿಸಿದ ಆದೇಶದಂತೆ ನೂತನ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಲು ಕಲಬುರಗಿ ಜಿಲ್ಲೆಯ ಚಿಂಚೋಳಿ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾಗಿದ್ದ ಅಕ್ಷಯ್ ಮಚ್ಚೀಂದ್ರ ಇಂದು ಬೆಳಗ್ಗೆ ಉಡುಪಿ ಎಸ್ಪಿ ಕಚೇರಿಗೆ ಆಗಮಿಸಿದ್ದರು. ಆದರೆ ಆ ಸಂದರ್ಭ ಸರಕಾರ ಆದೇಶವನ್ನು […]

ಶ್ರೀ ಕೃಷ್ಣ ಮಠದಲ್ಲಿ ಪರ್ಯಾಯ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಉಡುಪಿ: ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ, ಜನವರಿ 18 ರಂದು  ನಡೆಯಲಿರುವ  ಶ್ರೀ ಅದಮಾರು ಮಠದ ಪರ್ಯಾಯ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಹಾಗೂ ಪಲಿಮಾರು ಕಿರಿಯ ಮಠಾಧೀಶರಾದ ಶ್ರೀ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಬಿಡುಗಡೆ ಗೊಳಿಸಿದರು. ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಸೇವಾ ಬಳಗದ ಗೌರವಾಧ್ಯಕ್ಷರಾದ  ಕೆ ರಘುಪತಿ ಭಟ್, ಯು.ಕೆ.ರಾಘವೇಂದ್ರ ರಾವ್, ಮಠದ ದಿವಾನರಾದ ಲಕ್ಷ್ಮೀನಾರಾಯಣ ಮುಚ್ಚಿಂತ್ತಾಯ,ಸೇವಾ ಬಳಗದ ದಿನೇಶ್ ಪುತ್ರನ್,ಸಂತೋಷ್ ಕುಮಾರ್ ಉದ್ಯಾವರ,ವೈ.ಎನ್.ರಾಮಚಂದ್ರ ರಾವ್,  ವೈ.ಎನ್.ರಾಮಚಂದ್ರ ರಾವ್ […]