ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಮೂಡುಬಿದಿರೆ ಸಜ್ಜು: ಕ್ರೀಡಾ ಪ್ರತಿಭೆಗಳಿಗೆ ಸಾಕ್ಷಿಯಾಗಲಿದೆ ಸ್ವರಾಜ್ ಮೈದಾನ

ಮೂಡುಬಿದಿರೆ: ಒಲಪಿಂಕ್ಸ್‌ನಂಥ ವಿಶ್ವಮಟ್ಟದ ವೇದಿಕೆಯಲ್ಲಿ ಭಾರತದ ಪತಾಕೆ ಹಾರಿಸುವ ರಾಷ್ರ್ಟದ ಭವಿಷ್ಯದ ಕ್ರೀಡಾಪಟುಗಳ ಸಾಧನೆಗೆ ಸಾಕ್ಷಿಯಾಗಲು ವಿದ್ಯಾಕಾಶಿ ಮೂಡುಬಿದಿರೆ ಸಜ್ಜುಗೊಂಡಿದೆ. ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಹಾಗೂ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದೊಂದಿಗೆ ಮೂಡುಬಿದಿರೆಯ ಸ್ವರಾಜ್ ಮೈದಾನದಲ್ಲಿ ಜ.೨ರಿಂದ(ನಾಳೆ) ೬ರವರೆಗೆ ನಡೆಯಲಿರುವ ೮೦ನೇ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ಗೆ ದಿನಗಣನೆ ಆರಂಭಗೊಂಡಿದ್ದು, ತಯಾರಿ ಕೊನೇ ಹಂತದಲ್ಲಿದೆ. ದಾಖಲೆಯ ಕ್ರೀಡಾಪಟುಗಳು ಭಾಗಿ: ಈ ಬಾರಿಯ ಕ್ರೀಡಾಕೂಟದಲ್ಲಿ ರಾಷ್ಟ್ರದ ೪೦೦ ವಿಶ್ವವಿದ್ಯಾಲಯಗಳ ಸುಮಾರು […]

ಎನ್‌ಟಿಎಸ್ ಸಂಸ್ಥೆಯ ಸಮಾಜಮುಖಿ ಕಾರ್ಯ ಶ್ಲಾಘನೀಯ: ಸಿಪಿಐ ಮಂಜಪ್ಪ ಡಿ.ಆರ್

ಕುಂದಾಪುರ: ಹೆಮ್ಮಾಡಿ ಜಂಕ್ಷನ್‌ನಲ್ಲಿ ಅಪಘಾತ ತಡೆಯುವ ನಿಟ್ಟಿನಲ್ಲಿ ಬಗ್ವಾಡಿಯ ಎನ್‌ಟಿಎಸ್ ಕನ್ವೆನ್ಶನ್ ಹಾಲ್ ವತಿಯಿಂದ ಕುಂದಾಪುರ ಪೊಲೀಸ್ ಇಲಾಖೆಗೆ ಬ್ಯಾರಿಕೇಡ್ ಹಸ್ತಾಂತರಿಸಲಾಯಿತು. ಬ್ಯಾರಿಕೇಡ್ ಸ್ವೀಕರಿಸಿ ಮಾತನಾಡಿದ ಕುಂದಾಪುರ ಪೊಲೀಸ್ ವೃತ್ತನಿರೀಕ್ಷಕ ಮಂಜಪ್ಪ ಡಿ.ಆರ್, ಕೊಲ್ಲೂರು ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಜಂಕ್ಷನ್ ಆಗಿರುವ ಹೆಮ್ಮಾಡಿಯಲ್ಲಿ ಈ ಹಿಂದೆ ಸಾಕಷ್ಟು ಅಪಘಾತಗಳು ನಡೆದಿತ್ತು. ಅಪಘಾತ ತಡೆಗೆ ಬ್ಯಾರಿಕೇಡ್ ಅಳವಡಿಸಲು ಕೇಳಿಕೊಂಡಾಗ ಎನ್‌ಟಿಎಸ್ ಕನ್ವೆನ್ಶನ್ ಹಾಲ್ ಮಾಲಕರಾದ ತಿಮ್ಮ ಪೂಜಾರಿಯವರು ಹೆಮ್ಮಾಡಿ ಜಂಕ್ಷನ್‌ಗೆ ಆರು ಬ್ಯಾರಿಕೇಡ್‌ಗಳನ್ನು ಉಚಿತವಾಗಿ ನೀಡಿದ್ದಾರೆ. ಸಾರ್ವಜನಿಕರ […]