ಪೇಜಾವರ ಶ್ರೀಪಾದರು ದೇಶ ಕಂಡ ಶ್ರೇಷ್ಠ ಸಂತ: ಮಟ್ಟಾರ್ ರತ್ನಾಕರ ಹೆಗ್ಡೆ

ಉಡುಪಿ: ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಪಾದರು ಭಾರತ ದೇಶ ಕಂಡಂತಹ ಅತೀ ಶ್ರೇಷ್ಠ ಸಂತ. ಅವರು ಅತ್ಯಂತ ವಿಶಿಷ್ಟ ವ್ಯಕ್ತಿತ್ವವನ್ನು ಹೊಂದಿರುವ ಸ್ವಾಮೀಜಿಗಳಾಗಿದ್ದು, ಇತರ ಸ್ವಾಮೀಜಿಗಳಿಗಿಂತ ಅವರು ಭಿನ್ನವಾಗಿ ನಿಲ್ಲುತ್ತಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಹೇಳಿದರು. ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೋಮವಾರ ನಡೆದ ಪೇಜಾವರ ವಿಶ್ವೇಶತೀರ್ಥ ಶ್ರೀಪಾದರ ಶ್ರದ್ಧಾಂಜಲಿ ಸಭೆಯಲ್ಲಿ ಪೇಜಾವರ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಿ ಮಾತನಾಡಿದರು. ಉಡುಪಿಯ ಅಷ್ಟಮಠಾಧೀಶರು ಸಹಿತ ದೇಶದ ಉದ್ದಗಲಕ್ಕೂ ಅನೇಕ ಮಂದಿ ಸ್ವಾಮೀಜಿಗಳನ್ನು ಕಂಡಿದ್ದೇವೆ. […]

ಕರಾವಳಿ ಯೂತ್ ಕ್ಲಬ್ ನಿಂದ ಯುವಕನ ಚಿಕಿತ್ಸೆಗೆ ನೆರವು

ಉಡುಪಿ: ಉಡುಪಿ ಜಿಲ್ಲೆಯ ಅಲೆವೂರಿನ ಪ್ರಸಾದ್ ಎಂಬವವರು ತನ್ನ ಎರಡು ಬಲಹೀನ ಕಾಲುಗಳನ್ನು ಸರಿ ಪಡಿಸಲು ಚಿಕಿತ್ಸೆಗೆ ಹಣವಿಲ್ಲದೆ ಸಂಕಷ್ಟದಲ್ಲಿದ್ದು, ಇದನ್ನರಿತ ಉಡುಪಿ ಕರಾವಳಿ ಯೂತ್ ಕ್ಲಬ್ ತಂಡವು ಪ್ರಸಾದ್ ರವರಿಗೆ ಆರ್ಥಿಕ ನೆರವನ್ನು ಸಂಗ್ರಸಿದೆ. ಸಂಗ್ರಹಿಸಿದ ಹಣವನ್ನು ಪ್ರಸಾದ್ ರವರ ಮನೆಗೆ ತೆರಳಿ ಹಸ್ತಾಂತರಿಸಲಾಯಿತು.

ಜನಪ್ರತಿನಿಧಿಗಳ ಅಸಡ್ಡೆ-ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೃಷಿಯಿಂದ ರೈತರು ವಿಮುಖ: ಗುಜ್ಜರ್ ಬೆಟ್ಟು

ಉಡುಪಿ: ಕೃಷಿಯ ಬಗ್ಗೆ ಜನಪ್ರತಿನಿಧಿಗಳ ಅಸಡ್ಡೆ ಹಾಗೂ ಸರ್ಕಾರಿ ಯೋಜನೆಗಳನ್ನು ಕೃಷಿಕರಿಗೆ ತಲುಪಿಸಲು ಅಧಿಕಾರಿಗಳು ತೋರುತ್ತಿರುವ ನಿರ್ಲಕ್ಷ್ಯದಿಂದಾಗಿ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘದ ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು ಹೇಳಿದರು. ಕೃಷಿಕ ಸಂಘದ ಕಲ್ಯಾಣಪುರ ವಲಯ ಸಮಿತಿಯ ವತಿಯಿಂದ ಕೆಳಾರ್ಕಳಬೆಟ್ಟು ಶ್ರೀ ದುರ್ಗಾಪರಮೇಶ್ವರಿ ದೇಗುಲದ ಆವರಣದಲ್ಲಿ ಆಯೋಜಿಸಿದ್ದ ಹಡಿಲು ಭೂಮಿಯಲ್ಲಿ ಭತ್ತ ಕೃಷಿ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸರ್ಕಾರದ ನೀತಿ, ಆಧುನಿಕ ಭರಾಟೆಯಿಂದ ಅಸಂಘಟಿತರಾಗಿರುವ ಕರಾವಳಿಯ ಸಣ್ಣ ಹಿಡುವಳಿಯ ಕೃಷಿಕರು ಕಂಗಾಲಾಗಿದ್ದಾರೆ. […]

ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯ: ಆಕ್ರೋಶ ನಿರ್ವಹಣೆಯ ವೈಫಲ್ಯ: ಕೆಲ ವಾರ್ಡ್‌ಗಳಿಗಿಲ್ಲ ನೀರು

ಉಡುಪಿ: ನಗರಸಭೆ ವ್ಯಾಪ್ತಿಯ ಕೆಲ ವಾರ್ಡ್‌ಗಳಲ್ಲಿ ಕಳೆದ ಎರಡು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿ ನಗರಸಭಾ ಸದಸ್ಯ ಪ್ರಭಾಕರ ಪೂಜಾರಿ ನೇತೃತ್ವದಲ್ಲಿ ಚುನಾಯಿತ ಬಿಜೆಪಿ ಸದಸ್ಯರು ಸೋಮವಾರ ಪೌರಾಯುಕ್ತ ಡಾ. ಆನಂದ ಕಲ್ಲೋಳಿಕರ್‌ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು. ಕುಡಿಯುವ ನೀರಿನ ನಿರ್ವಹಣೆಯ ವೈಫಲ್ಯದಿಂದ ನಗರದ ಕೆಲವೊಂದು ವಾರ್ಡ್‌ಗಳಲ್ಲಿ ಸರಿಯಾಗಿ ಕುಡಿಯುವ ನೀರಿನ ಸರಬರಾಜು ಆಗುತ್ತಿಲ್ಲ. ಹಾಗಾಗಿ ಸಾರ್ವಜನಿಕರು ಸದಸ್ಯರ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಸದಸ್ಯರು ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿದರೆ, […]

ಡ್ರೀಮ್ ಕ್ಯಾಚರ್ಸ್ ವತಿಯಿಂದ ಮ್ಯಾಂಗಲೋರ್ಸ್ ಗಾಟ್ ಟ್ಯಾಲೆಂಟ್ ಜೂನಿಯರ್ ಎಡಿಶನ್ ಸೀಸನ್-1 ಉದ್ಘಾಟನೆ

ಮಂಗಳೂರು: ಡ್ರೀಮ್ ಕ್ಯಾಚರ್ಸ್ ಸ್ ಸಂಸ್ಥೆಯ ವತಿಯಿಂದ ಮ್ಯಾಂಗಲೋರ್‍ಸ್ ಗಾಟ್ ಟ್ಯಾಲೆಂಟ್ ಜೂನಿಯರ್ ಎಡಿಶನ್ ಸೀಸನ್-1  ಕಾರ್ಯಕ್ರಮವನ್ನು ಮಂಗಳೂರಿನ ಭಾರತ್ ಮಾಲ್‌ನಲ್ಲಿ ಅದ್ದೂರಿಯಾಗಿ ನಡೆಯಿತು. ಕಾರ್ಯಕ್ರಮವನ್ನು ಖ್ಯಾತ ಕೊರಿಯೋಗ್ರಾಫರ್‌ಗಳಾದ ಶುಭಕಿರಣ್ ಮಣಿ, ಸೂರಜ್ ಸನಿಲ್, ಹಿನ್ನೆಲೆ ಗಾಯಕಿ ಮಂಜುಶ್ರೀ ಹಾಗೂ ಡಾ.ಶ್ವೇತಾ ಕಾಮತ್ ಅವರು  ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಡ್ರೀಮ್ ಕ್ಯಾಚರ್ಸ್ ಮ್ಯಾನೇಜಿಂಗ್ ಡೈರೆಕ್ಟರ್ ಪೃಥ್ವಿ ಗಣೇಶ್, ಡ್ರೀಮ್ ಕ್ಯಾಚರ್‍ಸ್ ಸಂಸ್ಥೆಯು ಹಿಂದೆಯೂ ಅನೇಕ ಕಾರ್ಯಕ್ರಮಗಳನ್ನು ನಡೆಸಿದ್ದು, ಯಶಸ್ವಿಯಾಗಿದೆ. ಅನೇಕ ಪ್ರತಿಭೆಗಳು ನಮ್ಮ ನಗರದಲ್ಲಿದ್ದಾರೆ ಅವರಿಗೆ ಉತ್ತಮವಾದ […]