ನೀವು ನೋಡಿರದ ಪೇಜಾವರ ಶ್ರೀಗಳ ಅಪರೂಪದ ಚಿತ್ರಗಳು ಇಲ್ಲಿದೆ ನೋಡಿ !

ಪೇಜಾವರ ಶ್ರೀಗಳು ಲೋಕ ಬಿಟ್ಟು ಹೋಗಿದ್ದರೂ ಸಾವಿರಾರು ಚಿತ್ರಗಳಲ್ಲಿ, ಅವರು ಮಾಡಿದ ಸಾಮಾಜಿಕ ಕಾರ್ಯಗಳಲ್ಲಿ ಅವರು ಜೀವಂತವಾಗಿದ್ದಾರೆ. ನೀವು ನೋಡಿರದ ಪೇಜಾವರ ಶ್ರೀಗಳ ಅಪರೂಪದ ಚಿತ್ರಗಳು ಇಲ್ಲಿದೆ ನೋಡಿ ! ಚಿತ್ರಗಳು;ವಾರ್ತಾ ಇಲಾಖೆಯ ಫೈಲ್ ನಿಂದ

ಇಂದು ಮಧ್ಯಾಹ್ನದವರೆಗೆ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅಜ್ಜರಕಾಡಿನಲ್ಲಿ ವ್ಯವಸ್ಥೆ

ಉಡುಪಿ: ಇಂದು ಬೆಳಿಗ್ಗೆ ವಿಧಿವಶರಾದ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಅಂತಿಮ ದರ್ಶನಕ್ಕೆ ಉಡುಪಿಯ ಅಜ್ಜರಕಾಡು ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಮಧ್ಯಾಹ್ನದ ವರೆಗೆ ಅಂತಿಮ ದರ್ಶನ ನಡೆಯಲಿದೆ. ಮಧ್ಯಾಹ್ನದ ಅನಂತರ ಪಾರ್ಥೀವ ಶರೀರವನ್ನು ಬೆಂಗಳೂರಿಗೆ ಕೊಂಡೊಯ್ಯಲಾಗುವುದು. ಬೆಂಗಳೂರಿನ ನ್ಯಾಷನಲ್ ಕಾಲೇಜ್ ಗ್ರೌಂಡ್ ನಲ್ಲಿ ಸಾರ್ವಜನಿಕ ದರ್ಶನ ನಡೆಯಲಿದೆ. ಆ ಬಳಿಕ ಶ್ರೀನಗರದ ಸಮೀಪ ಇರುವ ವಿದ್ಯಾಪೀಠದಲ್ಲಿ ಅಂತಿಮ ವಿಧಿವಿಧಾನಗಳು ನಡೆಯಲಿವೆ ಎಂದು ತಿಳಿದುಬಂದಿದೆ.

ಧಾರ್ಮಿಕ ಕ್ರಾಂತಿಯ ಹರಿಕಾರ ಪೇಜಾವರ ವಿಶ್ವೇಶ ತೀರ್ಥ ಶ್ರೀಗಳು ಇನ್ನಿಲ್ಲ: ಕಳಚಿತು ಯತಿಪರಂಪರೆಯ ಮಹಾನ್ ಕೊಂಡಿ

ಉಡುಪಿ: ಅಷ್ಟಮಠಗಳಲ್ಲಿ ಒಂದಾದ ಪೇಜಾವರ ಅಧೋಕ್ಷಜ ಮಠದ 32ನೇ ಸ್ವಾಮೀಜಿಗಳಾದ ಮಹಾಸಂತ ಶ್ರೀ ತೀವ್ರ ಅನಾರೋಗ್ಯದಿಂದ ಭಾನುವಾರ ಬೆಳಿಗ್ಗೆ ಹರಿಪಾದವನ್ನು ಸೇರಿದರು. ಉಡುಪಿಯ ಅಷ್ಟಮಠಗಳ ಯತಿ ಪರಂಪರೆಯಲ್ಲಿ ಅತೀ ಹಿರಿಯ ಯತಿಯಾಗಿರುವ ವಿಶ್ವೇಶ ತೀರ್ಥರಿಗೆ 89 ವರ್ಷ ವಯಸ್ಸಾಗಿತ್ತು. ಶ್ರೀಗಳ ನಿರ್ಗಮನದೊಂದಿಗೆ ಸುದೀರ್ಘ ಇತಿಹಾಸವನ್ನು ಹೊಂದಿರುವ ಉಡುಪಿ ಅಷ್ಟಮಠಗಳ ಯತಿಪರಂಪರೆಯಲ್ಲಿನ ಮಹಾನ್ ಕೊಂಡಿಯೊಂದು ಕಳಚಿಬಿದ್ದಂತಾಗಿದೆ. ಪೇಜಾವರ ಶ್ರೀಗಳನ್ನು ನ್ಯುಮೇನಿಯ (ಶ್ವಾಸಕೋಶ ಉಸಿರಾಟ ಸಮಸ್ಯೆ)ಯಿಂದಾಗಿ ಡಿ.20 ಶುಕ್ರವಾರ ಮುಂಜಾನೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಶ್ರೀಗಳನ್ನು ದಾಖಲಿಸಲಾಗಿತ್ತು. ತಜ್ಞ ವೈದ್ಯರ […]

ಪೇಜಾವರ ಶ್ರೀಗಳ ಆರೋಗ್ಯದಲ್ಲಿ ಕಾಣದ ಚೇತರಿಕೆ: ತನ್ನ ಅಂತಿಮ ಆಸೆಯಂತೆ ಆಸ್ಪತ್ರೆಯಿಂದ ಮಠಕ್ಕೆ ಸ್ಥಳಾಂತರ

ಉಡುಪಿ: ಶ್ವಾಸಕೋಶ ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಗಳನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಯಿಂದ ರಥಬೀದಿ ಪೇಜಾವರ ಮಠಕ್ಕೆ  ಭಾನುವರ ಬೆಳಗ್ಗೆ ‌6:55ಕ್ಕೆ ಸ್ಥಳಾಂತರಿಸಲಾಯಿತು. ತಜ್ಞ ವೈದ್ಯಕೀಯ ತಂಡ ಬಿಗು ಪೊಲೀಸ್ ಭದ್ರತೆಯಲ್ಲಿ ಕೃತಕ ಉಸಿರಾಟ ವ್ಯವಸ್ಥೆಯಲ್ಲೇ ಮಣಿಪಾಲದ ವಿಶೇಷ ಆಂಬುಲೆನ್ಸ್​ನಲ್ಲಿ ಮಠಕ್ಕೆ ಕರೆದೊಯ್ಯಲಾಯಿತು. ಶ್ರೀಗಳ ಅಂತಿಮ‌ ಆಸೆಯಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಸ್ಥಳಾಂತರ ವೇಳೆ ಸುಮಾರು 700 ಕ್ಕೂ‌ಅಧಿಕ ಮಂದಿ ಪೊಲಿಸ್ ಅಧಿಕಾರಿ ಮತ್ತು ಸಿಬ್ಬಂದಿ ಭದ್ರತೆಗೆ ನಿಯೋಜನೆ ಮಾಡಲಾಗಿತ್ತು. ಪೇಜಾವರ ಪೂರ್ವಾಶ್ರಮದ ಸಹೋದರ […]