ಕಲಬುರಗಿ: ಸೂರ್ಯಗ್ರಹಣದ ಹಿನ್ನೆಲೆ ಮೂಢನಂಬಿಕೆ ಆಚರಣೆ
ಕಲಬುರಗಿ: ಜಿಲ್ಲೆಯ ತಾಜಾಸುಲ್ತಾನಪುರದಲ್ಲಿ ಸೂರ್ಯಗ್ರಹಣದ ಹಿನ್ನೆಲೆ ಪೋಷಕರು ಮಕ್ಕಳನ್ನು ಮಣ್ಣಿನಲ್ಲಿ ಕುತ್ತಿಗೆಯವರೆಗೆ ಹೂತಿಟ್ಟಿದ್ದಾರೆ. ಗ್ರಹಣದ ವೇಳೆ ಮಕ್ಕಳನ್ನು ಹೂತಿಟ್ಟರೆ ಅಂಗವೈಕಲ್ಯ ನಿವಾರಿಸುತ್ತೆ ಎಂಬ ಮೂಢನಂಬಿಕೆ ಈ ಆಚರಣೆಗೆ ಪೋಷಕರು ಮುಂದಾಗಿದ್ದಾರೆ. ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ ಅಫಜಲ್‍ಪುರ ತಾಲೂಕಿನ ಅರ್ಜುಣಗಿ ಗ್ರಾಮದಲ್ಲಿ ಸಹ ಮಕ್ಕಳನ್ನು ಕುತ್ತಿಗೆಯವರೆಗೆ ಮಣ್ಣಿನಲ್ಲಿ ಹೂತಿಡಲಾಗಿದೆ. ಒಂದೇ ಕಡೆ ಮೂರು ಮಕ್ಕಳನ್ನು ಮಣ್ಣಿನಲ್ಲಿ ಕುತ್ತಿಗೆ ಭಾಗದವರೆಗೆ ಹೂತಿಡಲಾಗಿದೆ.