ಉಡುಪಿ:ಕೃಷ್ಣಮಠದಲ್ಲಿ ಗ್ರಹಣ ಕಾಲದ ವಿಶೇಷ ಪೂಜೆ
ಉಡುಪಿ: ಕೃಷ್ಣ ಮಠದ ಮಧ್ವ ಸರೋವರದಲ್ಲಿ ಸೂರ್ಯ ಗ್ರಹಣ ಪ್ರಯುಕ್ತ ಗ್ರಹಣ ಕಾಲದಲ್ಲಿ ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು,ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು,ಪೇಜಾವರ ಕಿರಿಯ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ತೀರ್ಥ ಶ್ರೀಪಾದರು,ಸೋದೆ ಮಠಾಧೀಶರಾದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಹಾಗೂ ಪಲಿಮಾರು ಕಿರಿಯ ಮಠಾಧೀಶರಾದ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಸ್ನಾನಮಾಡಿ ಗ್ರಹಣಕಾಲದಲ್ಲಿ ಜಪಾನುಷ್ಠಾನ ಮಾಡಿ ಕೃಷ್ಣ ದೇವರ ವಿಶೇಷ ಪೂಜೆ ನಡೆಸಿದರು.ಈ ಸಂದರ್ಭದಲ್ಲಿ ಅಧಿಕ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿ ಸ್ನಾನ ಮಾಡಿ ಜಪ ಪಾರಾಯಣಾದಿಗಳನ್ನು […]
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಶಾರದ ಅರವಿಂದ ಬೊಬ್ಡೆ ಭೇಟಿ
ಕುಂದಾಪುರ : ಇಲ್ಲಿಗೆ ಸಮೀಪದ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಬುಧವಾರ ಸಂಜೆ ದೇಶದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಶಾರದ ಅರವಿಂದ ಬೊಬ್ಡೆ ಭೇಟಿ ನೀಡಿ ಶ್ರೀದೇವಿಯ ದರ್ಶನ ಪಡೆದು ಅರ್ಚಕರ ಮೂಲಕ ವಿಶೇಷ ಪೂಜೆ ಸಲ್ಲಿಸಿದರು. ಸಂಜೆ ಸುಮಾರು 7.15 ಗಂಟೆ ದೇವಸ್ಥಾನಕ್ಕೆ ಬಂದಿದ್ದ ಅವರನ್ನು ಶ್ರೀ ಕ್ಷೇತ್ರದ ಅರ್ಚಕರಾದ ಡಾ.ಎನ್.ನರಸಿಂಹ ಅಡಿಗ, ಶ್ರೀಧರ ಅಡಿಗ, ಎನ್.ಗೋವಿಂದ ಅಡಿಗ ಹಾಗೂ ನಿತ್ಯಾನಂದ ಅಡಿಗರ ನೇತ್ರತ್ವದಲ್ಲಿ ಪೂರ್ಣ ಕುಂಭ ಸ್ವಾಗತವನ್ನು ನೀಡಿ ಬರಮಾಡಿಕೊಳ್ಳಲಾಯಿತು. ವಿಶೇಷ ಕರ್ತವ್ಯಧಿಕಾರಿ ಬಿ.ಹರಿ, ಉಚ್ಚ ನ್ಯಾಯಾಲಯದ […]
ಮೂಡುಬಿದಿರೆ: ಆಳ್ವಾಸ್ ಕಾಲೇಜಿನಲ್ಲಿ ಸೂರ್‍ಯಗ್ರಹಣ ವೀಕ್ಷಣೆ
ಮೂಡುಬಿದಿರೆ: ಆಳ್ವಾಸ್ ಪದವಿ ಹಾಗೂ ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗದವತಿಯಿಂದ ಖಗೋಳ ಕೌತುಕದ ಕಂಕಣ ಸೂರ್‍ಯಗ್ರಹಣವನ್ನು ವೀಕ್ಷಿಸಲು ಕಾಲೇಜಿನ ಸ್ನಾತಕೋತ್ತರ ವಿಭಾಗದಲ್ಲಿ ಗುರುವಾರ ವ್ಯವಸ್ಥೆಯನ್ನು ಮಾಡಲಾಗಿತ್ತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಹಲವಾರು ದಶಕಗಳಿಗೊಮ್ಮೆ ನಡೆಯುವ ಬಾಹ್ಯಕಾಶದ ವಿಸ್ಮಯವನ್ನು ವೀಕ್ಷಿಸಿದರು. ಪ್ರೋಜೆಕ್ಟರ್ ಡಿಸ್‌ಪ್ಲೇಯ ಜತೆಯಲ್ಲಿ ಸೋಲಾರ್ ನೆಬ್ಯೂಲರ್ ಕನ್ನಡಕವನ್ನು ಧರಿಸಿ ವೀಕ್ಷಿಸಿದರು. ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗದ ಸಂಯೋಜಕ ಡಾ.ಶಶಿಧರ್ ಭಟ್ ವಿದ್ಯಾರ್ಥಿಗಳಿಗೆ ಸೂರ್‍ಯಗ್ರಹಣ ನಡೆಯುವ ಪರಿಯನ್ನು ಹಂತ ಹಂತವಾಗಿ ವಿವರಿಸಿದರು. ಕಾಲೇಜಿನ ಪ್ರಾಚಾರ್‍ಯ ಡಾ […]
ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ವತಿಯಿಂದ ಮೈನ್ ಡೈಮಂಡ್ ಫೆಸ್ಟಿವಲ್
ಉಡುಪಿ: ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ವತಿಯಿಂದ ಮೈನ್ ಡೈಮಂಡ್ ಫೆಸ್ಟಿವಲ್ ಉದ್ಘಾಟನಾ ಸಮಾರಂಭ ಉಡುಪಿ ಶಾಖೆಯಲ್ಲಿ ನಡೆಯಿತು. ಕುಮಾರಿ ಅನುಷಾ ಶೆಟ್ಟಿ, ಶ್ರೀ ರಕ್ಷಾ ಯು, ರಿಚೆಲ್ ನಿಶಾ ಡಿಸೋಜ, ಚೆಲ್ಸಿಯ ಕ್ಯಾರನ್ ಮಸ್ಕರನೀಸ್ ಇವರು ವಜ್ರಾಭರಣಗಳನ್ನು ಅನಾವರಣ ಮಾಡಿದರು. ಅಳಿಯಮ್, ದಿಯ, ಅಲೂರ್, ಹೆರಿಟೇಜ್, ಬ್ರೈಡಲ್, ಸೋಲಿಟರಿ, ಪ್ಲಾಟಿನಂ, ಮೆಶ್, ಏವರಿ ಡೇ, ಏವರ್ ಆಫ್ಟರ್, ಏಟರ್ನಲ್ ಮುಂತಾದ ಸಂಗ್ರಹಗಳ ಸಮೂಹವಾಗಿದೆ. ಈ ಸಂದರ್ಭದಲ್ಲಿ ವಜ್ರಾಭರಣಗಳ ಮೌಲ್ಯದ ಮೇಲೆ ಶೇಕಡ 20ರ ವರೆಗೆ ಕಡಿತ, […]
ಉಡುಪಿ ಜಿಲ್ಲೆಯಲ್ಲಿ ಕಂಡ ಸೂರ್ಯಗ್ರಹಣದ ಅದ್ಬುತ ಚಿತ್ರಗಳು ಇಲ್ಲಿದೆ ನೋಡಿ
ಉಡುಪಿ: ಹಿರಿಯಡ್ಕ ದಲ್ಲಿ ಕಂಡು ಬಂದ ಕಂಕಣ ಸೂರ್ಯ ಗ್ರಹಣದ ವಿವಿಧ ದೃಶ್ಯಾವಳಿಗಳು ಹಿರಿಯಡ್ಕದ ಶಬರಿ ಸ್ಟುಡಿಯೋದ ಕ್ಯಾಮರಾದಲ್ಲಿ ಸೆರೆಯಾಗಿದೆ. ಇನ್ನೊಂದಷ್ಟು ಕ್ಷಣಗಳನ್ನು ಅರುಣ್ ಫೋಟೋ ಪಿಕ್ ಸೆರೆ ಹಿಡಿದಿದ್ದಾರೆ.ಇಬ್ಬರೂ ಸೆರೆ ಹಿಡಿದ ದೃಶ್ಯಗಳು ಇಲ್ಲಿವೆ.