ಮೂಡಬಿದಿರೆ: ಕೋಟಿ-ಚೆನ್ನಯ ಜೋಡುಕರೆ ಕಂಬಳ ಫಲಿತಾಂಶ
ಮೂಡಬಿದಿರೆ: 17ನೇ ವರ್ಷದ ಮೂಡಬಿದ್ರಿ “ಕೋಟಿ – ಚೆನ್ನಯ” ಜೋಡುಕರೆ ಕಂಬಳ ಡಿ.25ರಂದು ನಡೆಯಿತು. ಕೂಟದಲ್ಲಿ ಒಟ್ಟು 163 ಜತೆ ಕೋಣಗಳು ಭಾಗಿವಹಿಸಿತ್ತು. ಕನೆಹಲಗೆ: 2 ಜೊತೆ, ಅಡ್ಡಹಲಗೆ: 6 ಜೊತೆ, ಹಗ್ಗ ಹಿರಿಯ: 16 ಜೊತೆ, ನೇಗಿಲು ಹಿರಿಯ: 24 ಜೊತೆ, ಹಗ್ಗ ಕಿರಿಯ: 14 ಜೊತೆ, ನೇಗಿಲು ಕಿರಿಯ: 100 ಜೊತೆ ಕೋಣಗಳು ಭಾಗವಹಿಸಿದ್ದು, ಫಲಿತಾಂಶ ಹೀಗಿದೆ. ಕನೆಹಲಗೆ: ಬೇಲಾಡಿ ಬಾವ ಅಶೋಕ್ ಶೆಟ್ಟಿ ಹಲಗೆ ಮುಟ್ಟಿದವರು: ನಾರಾವಿ ಯುವರಾಜ ಜೈನ್ (6.5 ಕೋಲು […]
ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ ಬ್ರಹ್ಮಕಲಶೋತ್ಸವ ಹಿನ್ನಲೆ: ಸಂಸದರಿಂದ ವಿವಿಧ ಅಭಿವೃದ್ಧಿ ಕಾರ್ಯಗಳ ವೀಕ್ಷಣೆ
ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ 2020ರ ಜನವರಿ 22 ರಿಂದ ನಡೆಯಲಿದ್ದು, ಹೀಗಾಗಿ ಕಟೀಲು ಪರಿಸರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳು ಭರದಿಂದ ನಡೆಯುತ್ತಿವೆ. ಗುರುವಾರ ಕಾಮಗಾರಿ ನಡೆಯುವ ಸ್ಥಳಗಳಿಗೆ ಭೇಟಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ, ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಅಭಿವೃದ್ಧಿ ಕಾರ್ಯಗಳನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಶ್ರೀ ಹರಿನಾರಾಯಣ ಆಸ್ರಣ್ಣರು, ಶ್ರೀ ಭುವನಾಭಿರಾಮ ಉಡುಪ ಅವರು, ಶಾಸಕಾಂಗದಿಂದ ಉಮಾನಾಥ್ ಕೋಟ್ಯಾನ್, ಮುಲ್ಕಿ-ಮೂಡಬಿದ್ರೆ […]
ಬಜಾಲ್ ವಾರ್ಡಿನ ಅಭಿವೃದ್ಧಿ ಕಾಮಗಾರಿಗಳಿಗೆ 4.39 ಕೋ.ರೂ. ಅನುದಾನ ಬಿಡುಗಡೆ: ಶಾಸಕ ಕಾಮತ್
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬಜಾಲ್ ವಾರ್ಡಿನ ವಿವಿಧ ಕಾಮಗಾರಿಗಳಿಗೆ 4.39 ಕೋ.ರೂ. ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ಶಾಸಕ ಡಿ.ವೇದವ್ಯಾಸ್ ಕಾಮತ್ ಅವರು ಹೇಳಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಳೆದ ಕಾಂಗ್ರೇಸ್ ಆಡಳಿತಾವಧಿ ಕೊನೆಗೊಂಡ ಅನಂತರ ವಿವಿಧ ಇಲಾಖೆಗಳಿಂದ ಈ ಅನುದಾನಗಳನ್ನು ಬಿಡುಗಡೆಗೊಳಿಸಲಾಗಿದೆ. ಅಲ್ಪ ಸಂಖ್ಯಾತ ಕಲ್ಯಾಣ ನಿಧಿಯಿಂದ 50 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಜಯನಗರದಿಂದ ಜಲ್ಲಿಗುಡ್ಡೆಗೊ ತೆರಳುವ ಅಡ್ಡರಸ್ತೆ ಅಭಿವೃದ್ಧಿಗೆ 15 ಲಕ್ಷ, ಫೈಜಲ್ ನಗರ ಮುಖ್ಯರಸ್ತೆಯ ಬಳಿ ಚರಂಡಿ ತಡೆಗೋಡೆ ರಚನೆ […]
ಅಟಲ್ ಜೀ ರಾಷ್ಟ್ರೀಯತೆ ಚಿಂತನೆ ಸಾಕಾರಗೊಳಿಸಲು ಜೀವನ ಮುಡಿಪಾಗಿಟ್ಟವರು: ಮಟ್ಟಾರು ರತ್ನಾಕರ್ ಹೆಗ್ಡೆ
ಉಡುಪಿ: ಅಟಲ್ ಬಿಹಾರಿ ವಾಜಪೇಯಿ ಅವರು ಈ ದೇಶ ಕಂಡ ಅಪ್ರತಿಮ ನಾಯಕರಾಗಿದ್ದು, ರಾಷ್ಟ್ರೀಯತೆ ಚಿಂತನೆಗಳನ್ನು ಸಾಕಾರ ಗೊಳಿಸುವಲ್ಲಿ ಜೀವನವನ್ನೇ ಮುಡಿಪಾಗಿಟ್ಟವರು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ ಹೇಳಿದರು. ಅವರು ಬುಧವಾರ ಉಡುಪಿ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಆಯೋಜಿಸಿದ ಭಾರತದ ಮಾಜಿ ಪ್ರಧಾನಿ ಹಾಗೂ ಭಾರತೀಯ ಜನತಾ ಪಾರ್ಟಿಯ ಸಂಸ್ಥಾಪಕ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು. ಈ ದೇಶವನ್ನು […]
ಉಡುಪಿ ಬೀಚ್ ಉತ್ಸವ: ಶ್ವಾನ ಪ್ರದರ್ಶನ -ನೊಂದಣಿಗೆ ಆಹ್ವಾನ
ಉಡುಪಿ : ಉಡುಪಿ ಬೀಚ್ ಉತ್ಸವ-2019 ರ ಅಂಗವಾಗಿ ಜಿಲ್ಲಾ ಆಡಳಿತ ಮತ್ತು ಪಶು ಪಾಲನಾ ಇಲಾಖೆ ಉಡುಪಿ ವತಿಯಿಂದ ಶ್ವಾನ ಪ್ರದರ್ಶನವನ್ನು ಡಿಸೆಂಬರ್ 29 ರಂದು ಮಧ್ಯಾಹ್ನ 2 ಗಂಟೆಗೆ ಮಲ್ಪೆ ಬೀಚ್ನಲ್ಲಿ ಆಯೋಜಿಸಲಾಗಿದೆ. ಸದರಿ ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಆಸಕ್ತಿ ಹೊಂದಿರುವ ಶ್ವಾನ ಮಾಲಿಕರು ನೋಂದಾವಣಿ ಮಾಡುವ ಕುರಿತು ಹೆಚ್ಚಿನ ವಿವರಗಳಿಗಾಗಿ ಉಡುಪಿ ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ. ಹರೀಶ್ ತಾಮನಕರ್ ಪಿ. (ಮೊ.ಸಂಖ್ಯೆ: 9448769997), ಉದ್ಯಾವರ ಪಶುಚಿಕಿತ್ಸಾಲಯದ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಸದೀಪ ಕುಮಾರ್ […]