ಖಾಸಗಿ ಕಾರಿನಲ್ಲಿ ಶಬರಿಮಲೈ ಯಾತ್ರೆ: ಕಾರು ತಡೆದು ಪೊಲೀಸರಿಗೊಪ್ಪಿಸಿದ ಟ್ಯಾಕ್ಸಿ ಚಾಲಕರು
ಕುಂದಾಪುರ: ಖಾಸಗಿ ಕಾರಿನಲ್ಲಿ ಶಬರಿಮಲೆಯಾತ್ರೆಗೆ ತೆರಳುತ್ತಿದ್ದ ವೇಳೆಯಲ್ಲಿ ಅಯ್ಯಪ್ಪ ಮಾಲಾಧಾರಿಗಳನ್ನು ತಡೆದ ಟ್ಯಾಕ್ಸಿ ಚಾಲಕರು ದಿಢೀರ್ ಪ್ರತಿಭಟನೆ ನಡೆಸಿ ಕಾರನ್ನು ಪೊಲೀಸರಿಗೊಪ್ಪಿಸಿದ ಘಟನೆ ಕುಂದಾಪುರ ಶಾಸ್ತ್ರೀವೃತ್ತದಲ್ಲಿ ನಡೆದಿದೆ. ಬೈಂದೂರಿನ ಪಡುವರಿಯ ಏಳು ಮಂದಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಗುರುವಾರ ಖಾಸಗಿ ನೋಂದಣಿಯ ಇನ್ನೋವಾ ಕಾರಿನಲ್ಲಿ ಶಬರಿಮಲೈ ಯಾತ್ರೆಗೆ ತೆರಳುತ್ತಿದ್ದರು. ಖಾಸಗಿ ವಾಹನದಲ್ಲಿ ಬಾಡಿಗೆ ನಡೆಸುತ್ತಿದ್ದ ಬಗ್ಗೆ ಮಾಹಿತಿ ಸಿಕ್ಕ ಹಿನ್ನಲೆ ಕರ್ನಾಟಕ ಟ್ಯಾಕ್ಸಿ ಡ್ರೈವರ್ಸ್ ಆರ್ಗನೈಸೇಶನ್ ಹಾಗೂ ಉಡುಪಿ ಟ್ಯಾಕ್ಸಿ ಅಸೋಶಿಯೇಶನ್ ಸಂಘಟನೆಯ ಸದಸ್ಯರು ಶಾಸ್ತ್ರೀವೃತ್ತದಲ್ಲಿ ಅಯ್ಯಪ್ಪ ಮಾಲಾಧಾರಿಗಳು […]
ಕುಂದಾಪುರ: ನಿಶ್ಚಿತಾರ್ಥದ ಬಳಿಕ ಮದುವೆಯಾಗದೆ ವಂಚನೆ: ಐವರ ವಿರುದ್ದ ಪ್ರಕರಣ ದಾಖಲು
ಕುಂದಾಪುರ: ಮದುವೆಯಾಗುವುದಾಗಿ ನಂಬಿಸಿ ಕುಟುಂಬಿಕರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡು ವಂಚಿಸಿದ ಆರೋಪದ ಮೇಲೆ ಯುವಕನೂ ಸೇರಿದಂತೆ ಐವರ ವಿರುದ್ದ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಂದಾಪುರ ನಿವಾಸಿ ಶಂಕರ ಎಂಬವರು ಹಿರಿಯರ ಸಮ್ಮುಖದಲ್ಲಿ ತಮ್ಮ ಮಗಳಿಗೆ ಬೆಂಗಳೂರು ಮೂಲದ ಶರತ್ ಭಟ್ ಎಂಬಾತನೊಂದಿಗೆ ಮದುವೆ ಮಾತುಕತೆ ನಡೆಸಿದ್ದರು. ಇದೀಗ ಮದುವೆಯಾಗದೆ ವಂಚಿಸಿದ ಆರೋಪದ ಮೇಲೆ ಹವನೂರು ಬಡಾವಣೆಯ ಮಹಾಲಸಾ ಕೃಪಾ ನಿವಾಸಿಗಳಾದ ಶರತ್ ಭಟ್, ನಾಗರಾಜ್ ಭಟ್, ಜ್ಯೋತಿ ಭಟ್, ಭರತ್ ಭಟ್, ಮೇಘನಾ ಯಾನೆ […]
ಮಂಗಳೂರು: ಎಲ್ಲೆಡೆ ಭಯಂಕರ ಹಿಂಸಾಚಾರ, ಶುಕ್ರವಾರ ನಗರದೆಲ್ಲೆಡೆ ನಿಷೇಧಾಜ್ಞೆ ಜಾರಿ
ಮಂಗಳೂರು: ಪೌರತ್ವ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ಮಧ್ಯಾಹ್ನದ ವೇಳೆಗೆ ಏಕಾಏಕಿ ಹಿಂಸಾಚಾರ ನಡೆದಿದ್ದು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಮಂಗಳೂರಿನಲ್ಲಿ ಇಂದಿನಿಂದ ಡಿಸೆಂಬರ್ 20 ವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು ಇದರ ಮಧ್ಯೆ ಉದ್ರಿಕ್ತ ಗುಂಪು ಜಿಲ್ಲಾಧಿಕಾರಿ ಕಚೇರಿಗೆ ಘೋಷಣೆ ಕೂಗುತ್ತಾ ಬಂದಿದೆ. ಪೊಲೀಸರು ಪ್ರತಿಭಟನೆ ನಡೆಸದಂತೆ ಎಚ್ಚರಿಕೆ ನೀಡಿದರೂ ಉದ್ರಿಕ್ತ ಗುಂಪು ಕಲ್ಲು ಬಿಸಾಡುತ್ತಾ ಘೋಷಣೆಗಳನ್ನು ಕೂಗಲು ಆರಂಭಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಉದ್ರಿಕ್ತರನ್ನು ನಿಯಂತ್ರಣಕ್ಕೆ ತರಲು ಲಾಠಿ ಚಾರ್ಜ್ ಮತ್ತು ಅಶ್ರುವಾಯು ಪ್ರಯೋಗಿಸಿದರು. ಹಲವರಿಗೆ ಗಾಯಗಳಾಗಿದ್ದು […]
ಗಿರೀಶ್ ಐತಾಳರಿಗೆ “ಕನ್ನಡ ಕಣ್ಮಣಿ ಪ್ರಶಸ್ತಿ” ಪ್ರದಾನ
ಉಡುಪಿ: ಉಡುಪಿಯ ನ್ಯಾಯವಾದಿ ಗಿರೀಶ ಐತಾಳ ಅವರು ಸಲ್ಲಿಸಿರುವ ಸಮಾಜ ಸೇವೆಗಾಗಿ ಸುರ್ವೆ ಕಲ್ಚರಲ್ ಅಕಾಡೆಮಿಯು ಡಿ. 13ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ ಕನ್ನಡ ಕಣ್ಮಣಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಿದೆ. ಸುರ್ವೆ ಕಲ್ಚರಲ್ ಅಕಾಡೆಮಿ ಅಧ್ಯಕ್ಷ ಹಿರಿಯ ಪತ್ರಕರ್ತ ರಮೇಶ್ ಸುರ್ವೆ, ಮಾಜಿ ಸಚಿವರಾದ ರಾಮಚಂದ್ರ ಗೌಡ, ನೆ.ಲ. ನರೇಂದ್ರಬಾಬು, ಹಿರಿಯ ಚಲನಚಿತ್ರ ಕಲಾವಿದರಾದ ಬ್ಯಾಂಕ್ ಜನಾರ್ದನ್, ಮೀನಾ, ಬೆಂಗಳೂರು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಶ್ರೀ ಕುಮಾರ ಚಂದ್ರಶೇಖರನಾಥ ಮಹಾಸ್ವಾಮಿ […]