ಪಂಪ್ ಸೆಟ್ ಗೂ ಬಂತು ಮೊಬೈಲ್ ನೆಟ್ವರ್ಕ್ ಆಧಾರಿತ ವ್ಯವಸ್ಥೆ: ಗಮನ ಸೆಳೆಯಿತು ಮರ್ಣೆ ಗ್ರಾ.ಪಂ.ನಡೆ

-ರಾಮ್ ಅಜೆಕಾರ್ ಕಾರ್ಕಳ: ಪಂಪ್ ಸೆಟ್ಟಿಗೆ ನೆಟ್ವರ್ಕ್ ಆಧಾರಿತ ವ್ಯವಸ್ಥೆ ಮುಲಕ ಅಜೆಕಾರು ಮರ್ಣೆ ಗ್ರಾಮ ಪಂಚಾಯತ್ ರಾಜ್ಯದಲ್ಲಿಯೆ ಗಮನ ಸೆಳೆಯುವಂತೆ ಮಾಡಿದೆ. ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದ ದೆಪ್ಪುತ್ತೆ ಪರಿಸರ ಕ್ಕೆ ನೀರಾವರಿ ವ್ಯವಸ್ಥೆ ಇರಲಿಲ್ಲ .ಇದಕ್ಕಾಗಿ ಹತ್ತು ಕಿ ಮೀ ದೂರದ ತೀರ್ಥಟ್ಟಿ ನದಿಯಿಂದ ನೀರು ವ್ಯವಸ್ಥೆ ಮಾಡಬೇಕಾದ ಅನಿವಾರ್ಯತೆ ಉಂಟಾಯಿತು. ತೀರ್ಥ ಟ್ಟಿ ನದಿ ಪರಿಸರ ದುರ್ಗಮ ಪ್ರದೇಶ ವಾದ್ದರಿಂದ ಅನಾನುಕೂಲವಾಗುತಿತ್ತು.ದೆಪ್ಪುತ್ತೆ ಪರಿಸರದಲ್ಲಿ ಇನ್ನೂರಕ್ಕು ಹೆಚ್ಚು ಮನೆಗಳಿವೆ.ನೀರು ವ್ಯವಸ್ಥೆ ಯಾದ ಬಳಿಕ ಅದರ […]

ಒಮ್ಮೆ ಈ ಕೊಳಚೆ ನೀರನ್ನು ಕುಡಿದು ನೋಡಿ:ಪಿಡಿಓ, ಜನಪ್ರತಿನಿಧಿಗಳಿಗೆ ಕೊಳೆಚೆ ನೀರು ಕುಡಿಸಲು ಮುಂದಾದ ಗ್ರಾಮಸ್ಥರು!

ಕುಂದಾಪುರ: ಆ ಊರಲ್ಲಿ ಎಲ್ಲಿ ಬಾವಿ ತೋಡಿದರೂ ಶುದ್ದ ನೀರು ಸಿಗೋದೆ ಇಲ್ಲ. ಎಲ್ಲರ ಮನೆಯ ಬಾವಿ ನೀರು ಉಪ್ಪು. ಪಂಚಾಯತ್ ಬಿಡುವ ನಳ್ಳಿ ನೀರನ್ನೇ ಅವಲಂಭಿಸಿರುವ ಆ ಊರಿನ ಜನರಿಗೆ ಇದೀಗ ಸಂಕಷ್ಟ ಎದುರಾಗಿದೆ. ಶುದ್ದ ನೀರು ಬಿಡುತ್ತಿದ್ದ ಪಂಚಾಯತ್ ಇದೀಗ ಕೊಳಚೆ ಮಿಶ್ರಿತ ಉಪ್ಪು ನೀರನ್ನು ಬಿಟ್ಟು ಸ್ಥಳೀಯರ ನೆಮ್ಮದಿ ಕೆಡಿಸಿದೆ. ಅಷ್ಟಕ್ಕೂ ಆ ಊರು ಯಾವುದು ಅಂತೀರಾ? ಈ ವರದಿ ನೋಡಿ.   ನೀರು ಬೇಕಾದರೆ ಖರ್ಚು ಮಾಡಬೇಕು ಮುನ್ನೂರು ! ಈ […]

ನಕಲಿ ಟಿವಿ ಚಾನೆಲ್‍ಗಳ ವಿರುದ್ಧ ಕ್ರಮ : ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ

ಉಡುಪಿ: ಜಿಲ್ಲೆಯಲ್ಲಿ ಯಾವುದೇ ಪರವಾನಿಗೆ ಇಲ್ಲದೇ, ಅನಧಿಕೃತವಾಗಿ ಕಾರ್ಯಾಚರಿಸುತ್ತಿರುವ ಹಾಗೂ ನಕಲಿ ಟಿವಿ ಚಾನೆಲ್‍ಗಳ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿ ಜಿ. ಜಗದೀಶ್ ಎಚ್ಚರಿಸಿದ್ದಾರೆ. ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೇಬಲ್ ಟೆಲಿವಿಷನ್ ನೆಟ್‍ವರ್ಕ್ ಕಾಯಿದೆಯ ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ( ಟ್ರಾಯ್) ಅಡಿ ಚಾನೆಲ್‍ಗಳು ನೋಂದಣಿಯಾಗಿರಬೇಕಿದೆ.  ಆದರೆ, ಇತ್ತೀಚೆಗೆ ಟಿವಿ ಚಾನೆಲ್‍ಗಳ ಹೆಸರಿನಲ್ಲಿ ಸರಕಾರಿ ಕಚೇರಿಗಳು ಸೇರಿದಂತೆ ಸಾರ್ವಜನಿಕರನ್ನು ಬ್ಲಾಕ್‍ಮೇಲ್ […]

ಬ್ರಹ್ಮಾವರ ಮಿನಿ ವಿಧಾನಸೌಧ ನಿರ್ಮಾಣ ಮಾಡಲು ಉಡುಪಿ ಶಾಸಕರಿಗೆ ಯೋಗ್ಯತೆ ಇಲ್ಲವೇ?: ಮದ್ವರಾಜ್

ಕುಂದಾಪುರ: ಹೆಬ್ರಿ ತಾಲ್ಲೂಕು ಘೋಷಣೆ ಆಗುವ ಮೊದಲೇ ಬ್ರಹ್ಮಾವರ ತಾಲ್ಲೂಕು ಘೋಷಣೆಯಾಗಿದ್ದರೂ ಕೂಡ ಮಿನಿ ವಿಧಾನಸೌಧದ ಕನಸು ನನಸಾಗದೇ ಇರುವುದು ಪ್ರಸ್ತುತ ಶಾಸಕ ಕೆ. ರಘುಪತಿ ಭಟ್ ಅವರ ವೈಫಲ್ಯಕ್ಕೆ ಸಾಕ್ಷಿ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಆರೋಪಿಸಿದರು. ಅವರು ಮಂಗಳವಾರ ಬ್ರಹ್ಮಾವರದ ಪ್ರೆಸ್ ಕ್ಲಬ್ಬಿನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಹಿಂದಿನ ಮುಖ್ಯಮಂತ್ರಿ  ಸಿದ್ಧರಾಮಯ್ಯ ಅವರ ಅವಧಿಯಲ್ಲಿ ಅಂದಿನ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರಿಂದ ಬ್ರಹ್ಮಾವರ ತಾಲ್ಲೂಕು ಉದ್ಘಾಟನೆಯಾಗಿತ್ತು. ಮಿನಿ ವಿಧಾನ ಸೌಧಕ್ಕಾಗಿ ಹಳೆ […]

ಡಿ. 11: ಕುಂದಾಪುರ ಕೋರಲ್ ಎಡ್ಜ್ ವಸತಿ ಸಮುಚ್ಚಯಕ್ಕೆ ಭೂಮಿ ಪೂಜೆ

ಕುಂದಾಪುರ: ಪುರಸಭೆ ವ್ಯಾಪ್ತಿಯ ವೆಸ್ಟ್ ಬ್ಲಾಕ್ ರಸ್ತೆಯಲ್ಲಿ 1.2 ಎಕರೆ ಜಾಗದಲ್ಲಿ ಶ್ರೀ ರಾಜರಾಜೇಶ್ವರಿ ಕನ್ಸ್ಟ್ರಕ್ಷನ್ ನಿರ್ಮಿಸಲಿರುವ ಕೋರಲ್ ಎಡ್ಜ್ ವಸತಿ ಸಮುಚ್ಚಯಕ್ಕೆ ಭೂಮಿಪೂಜೆ ಡಿ. 11 ರಂದು ನಡೆಯಲಿದೆ. ಶ್ರೀ ರಾಜರಾಜೇಶ್ವರಿ ನಿರ್ಮಾಣ ಸಂಸ್ಥೆಯು ಬೆಂಗಳೂರಿನಲ್ಲಿ ಗುಣಮಟ್ಟದ ನವೀನ ಮಾದರಿಯ ಹಲವಾರು ವಸತಿ, ವಾಣಿಜ್ಯ ಸಮುಚ್ಚಯಗಳನ್ನು ನಿರ್ಮಿಸಿ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದೆ. ಏನೇನು ವಿಶೇಷ? ಕೊರಲ್ ಎಡ್ಜ್ ಅಪಾರ್ಟ್ಮೆಂಟ್ನಲ್ಲಿ 92 ಪ್ಲ್ಯಾಟ್ ಗಳು ಇರಲಿದೆ. ಸ್ವಿಮ್ಮಿಂಗ್ ಪೂಲ್, ಒಳಾಂಗಣ ಮತ್ತು ಹೊರಾಂಗಣ […]