ಪಶುವೈದ್ಯರಿಗೆ ಸೂಕ್ತ ರಕ್ಷಣೆ, ಭದ್ರತೆ ಒದಗಿಸಿ: ಪಶುವೈದ್ಯಕೀಯ ಸಂಘ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದ ವೈದ್ಯರು

ಉಡುಪಿ: ತೆಲಂಗಾಣ ರಾಜ್ಯದಲ್ಲಿ ಈಚೆಗೆ ಪಶುವೈದ್ಯೆ ಡಾ. ಪ್ರಿಯಾಂಕ ರೆಡ್ಡಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಹಂತಕರಿಗೆ ಗಲ್ಲುಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಪಶುವೈದ್ಯಕೀಯ ಸಂಘದ ಉಡುಪಿ ಜಿಲ್ಲಾ ಘಟಕದ ನೇತೃತ್ವದಲ್ಲಿ ಪಶುವೈದ್ಯರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಮೌನ ಪ್ರತಿಭಟನೆ ನಡೆಸಿದರು. ಕರ್ನಾಟಕ ಪಶುವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ. ಬಾಬಣ್ಣ ಪೂಜಾರಿ ಮಾತನಾಡಿ, ತೆಲಂಗಾಣದಲ್ಲಿ ನಡೆದ ಪಶುವೈದ್ಯೆ ಮೇಲಿನ ಅತ್ಯಾಚಾರ ಎಸಗಿ ಕೊಲೆ ಮಾಡಿರುವುದು ಅತ್ಯಂತ ಹೇಯ ಕೃತ್ಯವಾಗಿದೆ. ಮೂಕಪ್ರಾಣಿಗಳ ಸೇವೆ ಮಾಡುವ […]

ಬೆಳ್ತಂಗಡಿ: ಸೌಹಾರ್ದತೆಗಾಗಿ ಮಸೀದಿ‌ ವಠಾರದಲ್ಲಿ ಮದುವೆ ಔತಣಕೂಟ

ಮಂಗಳೂರು: ಕೋಮು ಸಂಘರ್ಷವನ್ನು ಮೀರಿ, ಕೋಮು ಸೌಹಾರ್ದತೆಗಾಗಿ ಹಿಂದೂ ಜೋಡಿಯ ಮದುವೆಯ ಔತಣ ಕೂಟವೊಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಾಜೂರು ಮಸೀದಿ ವಠಾರದಲ್ಲಿ ನಡೆಯಿತು. ಬೆಳ್ತಂಗಡಿ ತಾಲೂಕು ಮಿತ್ತಬಾಗಿಲು ಗ್ರಾಮದ ಕಾಜೂರಿನ ತುಂಗಪ್ಪ ಪೂಜಾರಿ ಮತ್ತು ದೇವಕಿ ದಂಪತಿ ಪುತ್ರ ಅವಿನಾಶ್ ಕೆ. ಹಾಗೂ ಮಂಗಳೂರಿನ ಜೆಪ್ಪು ವಿಶ್ವನಾಥ ಎಂಬವರ ಪುತ್ರಿ ಕೌಶಿಕಾರ ವಿವಾಹ ಬೆಳ್ತಂಗಡಿ ತಾಲೂಕಿನ ಕೊಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ನೆರವೇರಿತು. ನದಿಯ ಒಂದು ದಡದಲ್ಲಿ ಕೊಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನವಿದೆ. […]