ದಿವ್ಯಾಂಗಚೇತನರ ಬೆಳವಣಿಗೆಗೆ ಇನ್ನಷ್ಟು ಕಾರ್ಯ ನಡೆಯಬೇಕು: ಸಿಂಧು ಬಿ. ರೂಪೇಶ್

ಮಂಗಳೂರು: ವಿಶ್ವ ವಿಕಲಚೇತನರ ದಿನಾಚರಣೆಯನ್ನು ಮಂಗಳೂರಿನ ಪುರಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಆಶ್ರಯದದಲ್ಲಿ ವಿಶೇಷವಾಗಿ ಆಚರಿಸಲಾಯಿತು. ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಸಿಂಧು ಬಿ.ರೂಪೇಶ್ ಉದ್ಘಾಟಿಸಿದರು. ಅನಂತರ ಮಾತನಾಡಿದ ಅವರು, ದಿವ್ಯಾಂಗ ಚೇತನರ ಬೆಳವಣಿಗೆಗಾಗಿ ಇನ್ನಷ್ಟೂ ಕಾರ್ಯಗಳು ನಡೆಯಬೇಕಿದೆ. ಅವರನ್ನು ಅರ್ಥ ಮಾಡಿಕೊಳ್ಳುವುದು, ಬೆಳವಣಿಗೆಗೆ ಪ್ರೋತ್ಸಾಹ ನೀಡುವುದು, ಹಾಗೂ ಜಾಗೃತಿ ಕಾರ್ಯದ ಮೂಲಕ ಹೆಚ್ಚಿನ ಅರಿವು ಹಾಗೂ ಅವಕಾಶವನ್ನು ನೀಡಬೇಕಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ದಿವ್ಯಾಂಗರನ್ನು ಹಾಗೂ ವಿಕಲಚೇತನರ ಅಭಿವೃದ್ಧಿಗೆ […]
ಹಟ್ಟಿಕುದ್ರು ಅಕ್ರಮ ಮರಳು ಅಡ್ಡೆಗೆ ಎಎಸ್‌ಪಿ ದಾಳಿ:ಆರೋಪಿಗಳು ಪರಾರಿ

ಕುಂದಾಪುರ: ಇಲ್ಲಿನ ಹಟ್ಟಿಕುದ್ರು ಅಕ್ರಮ ಮರಳು ಅಡ್ಡೆಗೆ ಕುಂದಾಪುರ ಎಎಸ್‌ಪಿ ಹರಿರಾಮ್ ಶಂಕರ್ ನೇತೃತ್ವದ ಪೊಲೀಸರ ತಂಡ ಸೋಮವಾರ ಸಂಜೆ ದಾಳಿ ನಡೆಸಿದೆ. ಅಕ್ರಮ ಮರಳುಗಾರಿಕೆಗೆ ಬಳಸುತ್ತಿದ್ದ ಹಿಟಾಚಿ, ಟಿಪ್ಪರ್ ಹಾಗೂ ಸುಮಾರು ಐವತ್ತು ಯೂನಿಟ್‌ಗೂ ಮಿಕ್ಕಿ ಮರಳನ್ನು ವಶಕ್ಕೆ ಪಡೆಯಲಾಗಿದೆ. ದಾಳಿ ವೇಳೆಯಲ್ಲಿ ಆರೋಪಿಗಳು ಪರಾರಿಯಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಈ ಬಗ್ಗೆ ಕಂಡ್ಲೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಕುಂದಾಪುರ: ಫ್ಲೈಓವರ್‌ನ ವಿಳಂಬ ಕಾಮಗಾರಿ: ಅವ್ಯವಸ್ಥೆಯನ್ನು ಸರಿಪಡಿಸಲು ನಾನೂ ಹೋರಾಡ್ತೇನೆ:ಜಯಪ್ರಕಾಶ್ ಹೆಗ್ಡೆ

ಕುಂದಾಪುರ: ಬಾಕಿ ಉಳಿದಿರುವ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಲು ಹೆದ್ದಾರಿ ಪ್ರಾಧಿಕಾರದ ಮಧ್ಯಸ್ಥಿಕೆಯಲ್ಲಿ ಗುತ್ತಿಗೆದಾರ ಕಂಪೆನಿಗೆ ಸ್ಥಳೀಯ ಗುತ್ತಿಗೆದಾರರ ಸಹಕಾರ ಅಪೇಕ್ಷಿಸಿದಲ್ಲಿ ಸ್ಥಳೀಯರೊಂದಿಗೆ ಮಾತುಕತೆ ನಡೆಸುತ್ತೇನೆ. ಲೋಕಸಭಾ ಸದಸ್ಯರು, ಶಾಸಕರು, ಹೋರಾಟ ಸಮಿತಿಯವರು ಜತೆಯಾಗಿ ದೆಹಲಿಗೆ ತೆರಳಿ ಅಲ್ಲಿ ಕೇಂದ್ರ ಸಚಿವರೊಂದಿಗೆ ಚರ್ಚೆ ನಡೆಸಿದರೆ ಮಾತ್ರ ಸಮಸ್ಯೆ ಪರಿಹಾರ ಆಗುತ್ತೆ. ಶಾಸಕರು, ಸಂಸದರು ಹೋಗುವಾಗ ನನ್ನನ್ನು ಕರೆದರೆ ನಾನೂ ಹೋಗುತ್ತೇನೆ. ಅವ್ಯವಸ್ಥೆಯನ್ನು ಸರಿಪಡಿಸುವ ಪ್ರಯತ್ನದಲ್ಲಿ ನಾನು ಸಂಪೂರ್ಣವಾಗಿ ಸಹಕಾರ ನೀಡುತ್ತೇನೆ ಎಂದು ಜಯಪ್ರಕಾಶ್ ಹೆಗ್ಡೆ ಭರವಸೆ ವ್ಯಕ್ತಪಡಿಸಿದರು. ಇಲ್ಲಿನ […]
ಡಿ.25-30: ಮಂಗಳೂರಿನಲ್ಲಿ ವಿಹಿಂಪ ಅಂತರಾಷ್ಟ್ರೀಯ ಬೈಠಕ್

ಮಂಗಳೂರು: ವಿಶ್ವ ಹಿಂದೂ ಪರಿಷತ್ ನ ಅಂತರಾಷ್ಟ್ರೀಯ ಬೈಠಕ್ ಮಂಗಳೂರಿನ ಸಂಘನಿಕೇತನದಲ್ಲಿ ಡಿ.25 ರಿಂದ 30 ವರೆಗೆ ನಡೆಯಲಿದೆ ಅಂತ ವಿಶ್ವಹಿಂದೂ ಪರಿಷತ್ ನ ಕರ್ನಾಟಕ ಕಾರ್ಯಾಧ್ಯಕ್ಷ ಪ್ರೊ. ಎಂ. ಬಿ. ಪುರಾಣಿಕ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಅಯೋಧ್ಯೆ ತೀರ್ಪು ಬಳಿಕ ಮೊದಲ ಬಾರಿಗೆ ನಡೆಯುವ ವಿಹಿಂಪ ಕೇಂದ್ರೀಯ ವಿಶ್ವಸ್ಥ ಮಂಡಳಿ ಮತ್ತು ಅಂತರಾಷ್ಟ್ರೀಯ ಸಮಿತಿ ಬೈಠಕ್ ನಲ್ಲಿ ಪ್ರಮುಖವಾಗಿ ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ಮಂದಿರದ ನಿರ್ಮಾಣ ಮತ್ತು ಮುಂದಿನ ವರ್ಷದ ಯೋಜನೆಗಳನ್ನು ನಿರ್ಧರಿಸಲಾಗುತ್ತದೆ ಎಂದರು. ಬೈಠಕ್ […]
ಆಲೂರು: ಆಮೆ ಮತ್ತು ಕೂಮಾ ಹತ್ಯೆ ಆರೋಪಿಗಳ ಬಂಧನ

ಕುಂದಾಪುರ: ಆಲೂರು ಗ್ರಾಮದ ಕಳಿ ಎಂಬಲ್ಲಿನ ನದಿಯಲ್ಲಿ ಆಮೆ ಹಾಗೂ ಕೂಮಾಗಳನ್ನು ಹಿಡಿದು ಕೊಲ್ಲಲು ಪ್ರಯತ್ನ ನಡೆಸುತ್ತಿರುವಾಗ ದಾಳಿ ನಡೆಸಿದ್ದ ಕೊಲ್ಲೂರು ವನ್ಯಜೀವಿ ಇಲಾಖೆಯ ಸಿಬ್ಬಂದಿಗಳು ಮೂವರು ಆರೋಪಿಗಳನ್ನು ಬಂಧಿಸಿರುವ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ. ಕೊಲ್ಲೂರಿನ ನಿವಾಸಿಗಳಾದ ಶೀನ ಕೊರಗ, ಚಂದ್ರ ಹಾಗೂ ಗಣೇಶ ಎನ್ನುವ ಆರೋಪಿಗಳನ್ನು ಬಂಧಿಸಿ ಅವರಿಂದ ೯ ಜೀವಂತ ಆಮೆ ಹಾಗೂ ೨೬ ಜೀವಂತ ಕೂಮಾ, ಸೋಮವಾರ ಹಿಡಿದು ಕೊಲ್ಲಲಾದ ೧೫ ಆಮೆಗಳ ಚಿಪ್ಪು ಹಾಗೂ ಕೃತ್ಯಕ್ಕೆ ಬಳಸಲಾದ ದ್ವಿಚಕ್ರ ವಾಹನವನ್ನು […]