ಉಡುಪಿ: ಜಿಲ್ಲಾಧಿಕಾರಿಗಳಿಂದ ರಸ್ತೆ ಕಾಮಗಾರಿ ಪರಿಶೀಲನೆ

ಉಡುಪಿ: ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು, ಶನಿವಾರ ಜಿಲ್ಲೆಯ ವಿವಿಧ ಸ್ಥಳಗಳ ತನಿಖೆಗೆ ತೆರಳುತ್ತಿರುವ ಸಂದರ್ಭದಲ್ಲಿ, ಬೆಳ್ಮಣ್ – ಕಟಪಾಡಿ ರಸ್ತೆ ದುರಸ್ತಿ ಕಾಮಗಾರಿ ನಡೆಯುತ್ತಿರುವುದನ್ನು ಕಂಡು, ತಮ್ಮ ವಾಹನದಿಂದ ಇಳಿದು ,  ಸ್ವತ: ಸದ್ರಿ ರಸ್ತೆ ದುರಸ್ತಿ ಕಾಮಗಾರಿಯನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ  ರಸ್ತೆ ದುರಸ್ತಿ ಕಾಮಗಾರಿಯ ಗುಣಮಟ್ಟ ಕಡಿಮೆ ಇರುವುದರ ಕುರಿತು ಸ್ಥಳದಲ್ಲಿದ್ದ ಸಂಬಂದಪಟ್ಟ ಗುತ್ತಿಗೆದಾರರಿಗೆ , ಸಮರ್ಪಕ ರೀತಿಯಲ್ಲಿ ಉತ್ತಮ ಗುಣಮಟ್ಟದ ಕಾಮಗಾರಿಯನ್ನು ನಿರ್ವಹಿಸುವಂತೆ  ಸೂಚಿಸಿದ ಜಿಲ್ಲಾಧಿಕಾರಿಗಳು,  ದೂರವಾಣಿ ಮೂಲಕ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ […]

ಕಾರ್ಕಳ: ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಶ್ವೇತಾ ಶೆಣೈಗೆ ಅಭಿನಂದನೆ

ಕಾರ್ಕಳ: ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಭುವನೇಂದ್ರ ಕಾಲೇಜಿನ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿನಿ ಸತೀಶ್ ಶೆಣೈ ಅವರ ಪುತ್ರಿ ಕು. ಶ್ವೇತಾ ಶೆಣೈ ಅವರಿಗೆ ಅರಸ್ ಕಟ್ಟೆ ಪ್ರಭು ಕುಟುಂಬಸ್ಥರಿಂದ ಕಾರ್ಕಳದ ಕಾಶೀಮಠದಲ್ಲಿ ಇತ್ತೀಚೆಗೆ ಅಭಿನಂದಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಕೊಂಕಣಿ ಅಕಾಡೆಮಿಯ ಅಧ್ಯಕ್ಷ ಡಾ| ಜಗದೀಶ್ ಪೈ  ವಹಿಸಿದ್ದರು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉದ್ಯಮಿ ವಿಜಯ ಶೆಟ್ಟಿ, ಸುರೇಂದ್ರ ಭಟ್, ರವೀಂದ್ರ ಪ್ರಭು, ಸುರೇಶ್ ಪ್ರಭು, ಹಿರಿಯ ಕಲಾವಿದ ಮೋಹನ್‌ದಾಸ್ ಪ್ರಭು, ಉಡುಪಿ […]

ಡಿ.3: ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಬೃಹತ್ ಜಾಥಾ-ಜಾಗೃತಿ ಕಾರ್ಯಕ್ರಮ

ಉಡುಪಿ: ಎಚ್‌ಐವಿ ಮತ್ತು ಏಡ್ಸ್‌ ಸೋಂಕು ಹಾಗೂ ಇದರಿಂದಾಗುವ ಸಾವಿನ ಪ್ರಮಾಣವನ್ನು‌ ಸೊನ್ನೆಗೆ ತರುವ ಉದ್ದೇಶದಿಂದ ‘ಸಮುದಾಯಗಳು ಬದಲಾವಣೆಯನ್ನುಂಟು ಮಾಡುತ್ತವೆ’ ಎಂಬ ಘೋಷವಾಕ್ಯದೊಂದಿಗೆ ವಿಶ್ವ ಏಡ್ಸ್‌ ದಿನಾಚರಣೆಯ ಪ್ರಯುಕ್ತ ಬೃಹತ್‌ ಜಾಥಾ ಮತ್ತು‌ ಜಾಗೃತಿ ಕಾರ್ಯಕ್ರಮವನ್ನು ಬ್ರಹ್ಮಗಿರಿಯ ಲಯನ್ಸ್‌ ಭವನದಲ್ಲಿ ಡಿ. 3ರಂದು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಏಡ್ಸ್‌ ನಿಯಂತ್ರಣಾಧಿಕಾರಿ ಡಾ. ಚಿದಾನಂದ ಸಂಜು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಅಂದು ಬೆಳಿಗ್ಗೆ 9.30ಕ್ಕೆ ಉಡುಪಿ ಸರ್ವಿಸ್‌ ಬಸ್‌ ನಿಲ್ದಾಣದಿಂದ ಲಯನ್ಸ್‌ ಭವನದವರೆಗೆ ಆಯೋಜಿಸಿರುವ ಜಾಥಕ್ಕೆ ಹಿರಿಯ ಸಿವಿಲ್‌ […]

ಡಿ. 8 ರಂದು ಟ್ರಿಪಲ್‌ ತಲಾಕ್ ಚಲನ ಚಿತ್ರದ ಮೊದಲ‌ ಪ್ರದರ್ಶನ

ಉಡುಪಿ: ಗುಲ್ವಾಡಿ ಟಾಕೀಸ್‌ ಬ್ಯಾನರ್‌ನಡಿ ನಿರ್ಮಾಣಗೊಂಡ ಯಾಕುಬ್‌ ಖಾದರ್‌  ಗುಲ್ವಾಡಿ ಮೊದಲ ಬಾರಿಗೆ ನಿರ್ದೇಶಿಸಿದ ‘ಟ್ರಿಪಲ್‌ ತಲಾಕ್‌’ ಬ್ಯಾರಿ ಭಾಷೆಯ ಚಲನಚಿತ್ರದ ಮೊದಲ ಪ್ರದರ್ಶನ ಡಿ. 8ರಂದು ಇಂಗ್ಲೆಂಡಿನ ನೈರುತ್ಯ ಕರಾವಳಿಯ ಬ್ರಿಸ್ಟನ್‌ನ ಸ್ಕಾಟ್‌ ಚಿತ್ರಮಂದಿರದಲ್ಲಿ ನಡೆಯಲಿದೆ. ಈ ಬಗ್ಗೆ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಯಾಕುಬ್‌ ಖಾದರ್‌ ಗುಲ್ವಾಡಿ, ತ್ರಿವಳಿ ತಲಾಕ್‌ ಸಮಸ್ಯೆ ಹಾಗೂ ಸುಪ್ರೀಂ ಕೋರ್ಟ್‌ ಇತ್ತೀಚೆಗೆ ನೀಡಿದ ತೀರ್ಪನ್ನು ಆಧರಿಸಿ, ಚಿತ್ರದ ಕಥೆಯನ್ನು ಹೆಣೆಯಲಾಗಿದೆ. 90 ನಿಮಿಷಗಳ ಅವಧಿಯ ಈ ಚಿತ್ರವನ್ನು ಕುಂದಾಪುರ, […]

ಉಡುಪಿ: ಅನಧಿಕೃತವಾಗಿ‌ ಕಾರ್ಯಚರಿಸುತ್ತಿದ್ದ ಬೌನ್ಸ್ ವಾಹನಗಳು ವಶ

ಉಡುಪಿ: ನಗರ ವ್ಯಾಪ್ತಿಯಲ್ಲಿ ಅನಧೀಕೃತಕವಾಗಿ ಕಾರ್ಯಚರಿಸುತ್ತಿದ್ದ ‘ಬೌನ್ಸ್‌’ ದ್ವಿಚಕ್ರ ವಾಹನ ಬಾಡಿಗೆ ನೀಡುವ ಉದ್ದಿಮೆಯ ಮೇಲೆ ಉಡುಪಿ ನಗರಸಭೆ ಪೌರಾಯುಕ್ತ ಆನಂದ ಕಲ್ಲೋಳಿಕರ್‌ ನೇತೃತ್ವದಲ್ಲಿ ಶನಿವಾರ ದಾಳಿ ನಡೆಸಿದ್ದು, 15 ಬೌನ್ಸ್‌ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಡುಪಿ ಹಾಗೂ ಮಣಿಪಾಲದ ಪ್ರಮುಖ ಸ್ಥಳಗಳಲ್ಲಿ ಬಾಡಿಗೆ ನೀಡಲು ನಿಲ್ಲಿಸಲಾಗಿದ್ದ ದಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ‌ ನಗರವ್ಯಾಪ್ತಿಯಲ್ಲಿ ಬೌನ್ಸ್‌ ದಿಚಕ್ರ ವಾಹನಗಳು ಅನಧೀಕೃತವಾಗಿ ಕಾರ್ಯಚರಿಸುತ್ತಿದ್ದು, ಇದರ ವಿರುದ್ಧ ಆಟೊ ಚಾಲಕರು ಬೃಹತ್‌ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. ಈ ನಿಟ್ಟಿನಲ್ಲಿ […]