ನ.30: ಸಿಂಡ್ ಬ್ಯಾಂಕ್ ವಿಲೀನ ವಿರೋಧಿಸಿ ಪ್ರತಿಭಟನಾ ರಕ್ತದಾನ ಶಿಬಿರ
ಉಡುಪಿ: ಸಿಂಡಿಕೇಟ್ ಬ್ಯಾಂಕ್‌ನ್ನು ಇನ್ನೊಂದು ರಾಷ್ಟ್ರೀಕೃತ ಬ್ಯಾಂಕ್‌ನೊಂದಿಗೆ ವಿಲೀನಗೊಳಿಸುವ ಕೇಂದ್ರ ಸರ್ಕಾರದ ಏಕಪಕ್ಷೀಯ ನಿರ್ಧಾರವನ್ನು ವಿರೋಧಿಸಿ ಸಿಂಡಿಕೇಟ್ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ ನ. 30ರಂದು ಮಣಿಪಾಲದ ಸಿಂಡಿಕೇಟ್ ಹೌಸ್‌ನಲ್ಲಿ ಪ್ರತಿಭಟನಾ ರಕ್ತದಾನ ಶಿಬಿರವನ್ನು ಆಯೋಜಿಸಿದೆ. ಇದರ ಮೂಲಕ ಗ್ರಾಹಕರಿಗೆ ಸಿಂಡಿಕೇಟ್ ಬ್ಯಾಂಕ್ ಉಳಿಸಿ ಆಂದೋಲನದ ಜಾಗೃತಿ ಮೂಡಿಸಲು ಉದ್ದೇಶಿಸಿದೆ ಎಂದು ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ಯು. ಶಶಿಧರ ಶೆಟ್ಟಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕೇಂದ್ರ ಸರ್ಕಾರ ಕೈಗೊಂಡಿರುವ ಅಸಹನೀಯ ಮತ್ತು ಅನಗತ್ಯ ಕ್ರಮದ ಬಗ್ಗೆ ಜನರಿಗೆ ತಿಳಿಸುವ […]
ಉಡುಪಿ: ಶ್ರೀಕೃಷ್ಣ ಮಠದಲ್ಲಿ ತುಲಭಾರ ಕೌಂಟರ್ ಉದ್ಘಾಟನೆ
ಉಡುಪಿ: ಶ್ರೀಕೃಷ್ಣ ತುಲಾಭಾರ ಮಹೋತ್ಸವದ ಅಂಗವಾಗಿ ಭೀಮ ಜ್ಯೂವೆಲ್ಲರ್ಸ್ ಸಹಯೋಗದೊಂದಿಗೆ ಕೃಷ್ಣಮಠದಲ್ಲಿ ಆರಂಭಿಸಲಾಗಿರುವ ತುಲಾಭಾರ ಕೌಂಟರ್ ಅನ್ನು ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಗುರುವಾರ ಉದ್ಘಾಟಿಸಿದರು. ಶ್ರೀಕೃಷ್ಣ ದೇವರಿಗೆ ನಡೆಯಲಿರುವ ಚಿನ್ನದ ತುಲಾಭಾರ ಸೇವೆಯಲ್ಲಿ ಭಾಗಿಯಾಗಲು ಇಚ್ಛಿಸುವ ಭಕ್ತರಿಗೆ ಭೀಮ ಜ್ಯೂವೆಲ್ಲರ್ಸ್ ವತಿಯಿಂದ 100 ಮಿಲಿ ಗ್ರಾಂ, 200 ಮಿಲಿ ಗ್ರಾಂ, ಅರ್ಧ ಗ್ರಾಂ, ಒಂದು ಗ್ರಾಂ, ನಾಲ್ಕು ಗ್ರಾಂ ಹಾಗೂ ಎಂಟು ಗ್ರಾಂ ಚಿನ್ನದ ನಾಣ್ಯಗಳನ್ನು ತಯಾರಿಸಲಾಗಿದೆ. ಇವು ಕೃಷ್ಣಮಠದ ತುಲಾಭಾರ ಕೌಂಟರ್‌ನಲ್ಲಿ ಲಭ್ಯವಿದ್ದು, […]
ಉಡುಪಿ: ನಿರುದ್ಯೋಗಿ ಯುವಕ/ ಯುವತಿಯರಿಗೆ ಉಚಿತ ತರಬೇತಿ
ಉಡುಪಿ: ಕೇಂದ್ರೀಯ ಪ್ಲಾಸ್ಟಿಕ್ಸ್ ತಂತ್ರಜ್ಞಾನ ಸಂಸ್ಥೆ (ಸಿಪೆಟ್), ವತಿಯಿಂದ ವಿದ್ಯಾರ್ಹತೆ ಹೊಂದಿರುವ ನಿರುದ್ಯೋಗಿ ಯುವಕ ಯುವತಿಯರಿಗೆ ಮೈಸೂರಿನಲ್ಲಿ ವಿವಿಧ ವೃತ್ತಿಪರ ಯೋಜನೆಯಡಿ 03 ಮತ್ತು 06 ತಿಂಗಳ ಆವಧಿಯ ಪಾಲಿಮರ್ ವಸ್ತುಗಳ ತಯಾರಿಕ ತಂತ್ರಜ್ಞಾನ, ವಾಹನಗಳ ಬಿಡಿಭಾಗಗಳು, ವಿದ್ಯುತ್ ಉಪಕರಣಗಳು, ಕಂಪ್ಯೂಟರ್ ಬಿಡಿಭಾಗಗಳು, ಇತ್ಯಾದಿ ವಸ್ತುಗಳ ತಯಾರಿಕೆಯ ಬಗ್ಗೆ ತರಬೇತಿಯನ್ನು ಉಚಿತ ಊಟ, ವಸತಿಯೊಂದಿಗೆ ನೀಡಲಾಗುವುದು ಹಾಗೂ ಉದ್ಯೋಗಾವಕಾಶಕ್ಕೆ ನೆರವು ನೀಡಲಾಗುವುದು. ಆಸಕ್ತಿಯುಳ್ಳ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗೆ ಸಂಬಂದಿಸಿದ ಅಂಕಪಟ್ಟಿ, ಜಾತಿ, ಆದಾಯ ಪ್ರಮಾಣ ಪತ್ರ, ಆಧಾರ್ […]
ಉಡುಪಿ: ಶ್ರೀಚಂದ್ರಮೌಳೀಶ್ವರ ದೇವರ ವಾರ್ಷಿಕ ಮಹೋತ್ಸವ
ಉಡುಪಿ : ಉಡುಪಿ ರಥಬೀದಿಯಲ್ಲಿ ಶ್ರೀಚಂದ್ರಮೌಳೀಶ್ವರ ದೇವರ ವಾರ್ಷಿಕ ಮಹೋತ್ಸವವು ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು, ಆಡಳಿತದಾರರಾದ ಪುತ್ತಿಗೆ ಮಠಾಧೀಶರಾದ ಶ್ರೀಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಪಲಿಮಾರು ಕಿರಿಯ ಯತಿಗಳಾದ ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ನಡೆಯಿತು.
ಕಾರ್ಕಳ: ಶ್ರೀ ಭುವನೇಂದ್ರ ಕಾಲೇಜಿನ ವಜ್ರಮಹೋತ್ಸವ ವರ್ಷ ಉದ್ಘಾಟನೆ
ಕಾರ್ಕಳ: ಇಲ್ಲಿನ ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಕಾಲೇಜು ಸ್ಥಾಪನೆಯಾಗಿ 60 ವರ್ಷವಾದ ಸಂಭ್ರಮದಲ್ಲಿ ವಜ್ರ ಮಹೋತ್ಸವವನ್ನು ಆಚರಿಸಲಾಗುತ್ತಿದ್ದು 6೦ನೇ ವರ್ಷದ ವಜ್ರಮಹೋತ್ಸವದ ಲಾಂಛನ ಹಾಗೂ ವರ್ಷಾಚರಣೆಯನ್ನು ಶ್ರೀ ಭುವನೇಂದ್ರ ಸ್ವಾಮೀಜಿಯವರ ನೆನಪಿನಲ್ಲಿ ಶ್ರೀ ಸಂಸ್ಥಾನ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮೀಂದ್ರತೀರ್ಥ ಶ್ರೀಪಾದರು ಮುಖ್ಯ ಅತಿಥಿಯಾಗಿ ಆಗಮಿಸಿ ಉದ್ಘಾಟಿಸಿದರು. ಕಾರ್ಯಕ್ರಮದ ಉದ್ಘಾಟನೆಯ ನಂತರ ಸಭೆಯನ್ನುದ್ದೇಶಿಸಿ ಆಶೀರ್ವಚನ ನೀಡಿದ ಅವರು, ಭುವನೇಂದ್ರ ಸ್ವಾಮಿಗಳ ಆಶೀರ್ವಾದದಿಂದ ಅಂದು ಶುರುವಾದ ಈ ಕಾಲೇಜು ಇಂದು 6೦ನೇ ವರ್ಷಕ್ಕೆ ಕಾಲಿಟ್ಟದೆ, ಈ ಕಾಲೇಜಿಗೆ ಎಂದಿಗೂ […]